ಗುಬ್ಬಿ: ತಾಲೂಕು ಆಡಳಿತ ಹಾಗೂ ಕನ್ನಡ ರಾಜ್ಯೋತ್ಸವ ಸಮಿತಿ ನೀಡುವ  ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಂಬತ್ತು ಜನರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಇಒ ರಂಗನಾಥ್ ತಿಳಿಸಿದ್ದಾರೆ. 

ಶಿಕ್ಷಣ ಕ್ಷೇತ್ರದಲ್ಲಿ ತುಮಕೂರು ಕೆ.ಜಿ.ವಿಜಯಲಕ್ಷ್ಮಮ್ಮ,  ಕೃಷಿ ಕ್ಷೇತ್ರದಲ್ಲಿ ಅಳ್ಳೇನಹಳ್ಳಿ ಶಿವಲಿಂಗಯ್ಯ, ಪರಿಸರ ಕ್ಷೇತ್ರದಲ್ಲಿ ಅಳ್ಳೇನಹಳ್ಳಿ ಜೆ ಗೀತಾ, ಕ್ರೀಡಾ ಕ್ಷೇತ್ರದಲ್ಲಿ ಗುಬ್ಬಿ ಜಿ.ಆರ್.ಸುರೇಶ್, ವೈದ್ಯಕೀಯ ಕ್ಷೇತ್ರದಲ್ಲಿ ಸೋಮಲಾಪುರ ಪಿ ಹೆಚ್ ಸಿ ಡಾ.ಪಿ.ನಾರಾಯಣಗೌಡ, ರಂಗಭೂಮಿ ಕ್ಷೇತ್ರದಲ್ಲಿ ಕರೇಗೌಡನಹಳ್ಳಿ ರಂಗಸ್ವಾಮಿ, ಸಾಹಿತ್ಯ ಕ್ಷೇತ್ರದಲ್ಲಿ ಪುರತಾಂಡ್ಯದ  ಅಂಜನ್ ಕುಮಾರ್ ಪಿ.ಆರ್, ಜನಪದ ಕ್ಷೇತ್ರದಲ್ಲಿ ಇರಕಸಂದ್ರ  ಗಂಗಣ್ಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸಕೆರೆ ಹೆಚ್.ಎಸ್.ನರಸಿಂಹಮೂರ್ತಿ ಇವರುಗಳು  ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here