ಗುಬ್ಬಿ : ತಾಲೂಕಿನ ಹಿಂಡಿಸಿಗೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಸುಜಾತ ಒಬಳಯ್ಯ, ಉಪಾಧ್ಯಕ್ಷರಾಗಿ ಗೀತಾಪರಮೇಶ್ ಅವಿರೋಧವಾಗಿ ಆಯ್ಕೆಯಾದರು.

ಸುಮಾರು ಎಂಟು ವರ್ಷಗಳ ಬಳಿಕ ಹಿಂಡಿಸ್ಗೆರೆ  ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಸುಜಾತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಇಬ್ಬರೇ ಏಕೈಕ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿಗಳು ಅವಿರೋಧವಾಗಿ ಆಯ್ಕೆ ಮಾಡಿದರು.

 ನೂತನ ಅಧ್ಯಕ್ಷೆ ಸುಜಾತ  ಮಾತನಾಡಿ ನಮ್ಮ ಎಲ್ಲ  ನಿರ್ದೇಶಕ ಸಹಕಾರ ಪಡೆದು ಹಿಂಡಿಸಿಗೆರೆ  ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಹಾಲು ಉತ್ಪಾದಕರಿಗೆ ಹಾಗೂ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಲು ಪ್ರಯತ್ನ ಮಾಡುತ್ತೇನೆ. ಗ್ರಾಮೀಣ ಭಾಗದ ರೈತರು ಹೈನುಗಾರಿಕೆಗೆ ಹೆಚ್ಚು ಆದ್ಯತೆಯನ್ನು ಕೊಟ್ಟು ಪ್ರತಿ ಮನೆಯಲ್ಲೂ ಹಸುಗಳನ್ನು ಕಟ್ಟಿಕೊಂಡು ಡೈರಿಗಳಿಗೆ  ಹಾಲು ಹಾಕುವುದರ ಮೂಲಕ ಸ್ವಾವಲಂಬಿ ಬದುಕನ್ನ ಕಟ್ಟಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು. ರೈತರು ಗುಣಮಟ್ಟದ ಹಾಲನ್ನು ಹಾಕುವುದರ ಮೂಲಕ ಪ್ರೋತ್ಸಾಹ ಧನವನ್ನು ಪಡೆದು ಹೆಚ್ಚು ಹೆಚ್ಚು  ಹಾಲನ್ನು ಹಾಕುವುರ  ಮೂಲಕ ಹಿಂಡಿಸ್ಗೆರೆ  ಹಾಲು ಉತ್ಪಾದಕರ ಸಹಕಾರ ಸಂಘ ತಾಲೂಕಿನಲ್ಲಿ ಮಾದರಿಯಾಗಬೇಕು. ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಡೈರಿಗಳಿಗೆ ಹಾಲವನ್ನು ಹಾಕುವುದರ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.

ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷೆ ಗೀತಾ ಮಾತನಾಡಿ ಈ ಡೈರಿಯು ಸ್ಥಾಪನೆಯಾದಗಿನಿಂದಲೂ ಯಾವುದೇ ಗೊಂದಲಗಳಿಲ್ಲದೆ ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ ಅದೇ ರೀತಿ ನಾವುಗಳು ಮುಂದಿನ ದಿನದಲ್ಲಿ ತಾಲೂಕಿಗೆ ಮಾದರಿ ಡೈರಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದರು

ಸಹಕಾರಿ ಅಭಿವೃದ್ಧಿ ಅಧಿಕಾರಿ ಹಾಗೂ ರಿಟರ್ನಿಂಗ್ ಅಧಿಕಾರಿ ಎಂ  ಲಿಯಾಖತ್ ಅಲಿಖಾನ್ ಚುನಾವಣೆ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು.

 ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ಗೀತಾ ನಿರ್ದೇಶಕರಾದ ಸೌಭಾಗ್ಯ, ಶಭೀನಾ ಭಾನು , ಸಿದ್ದಗಂಗಮ್ಮ ,ಜಯಲಕ್ಷ್ಮಮ್ಮ ,ಚಂದ್ರಮ್ಮ , ಎನ್.ರೇಖಾ ,ಜಗದಾಂಭ , ಶಿಲ್ಪ , ಎನ್.ಪದ್ಮಾ , ಅನುಸೂಯಮ್ಮ , ರತ್ನಮ್ಮ , ಸಂಘದ ಕಾರ್ಯದರ್ಶಿ ಪ್ರೇಮಾ, ಹಾಲು ಪರೀವಿಕ್ಷಕಿ ಹಾಗೂ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here