
ಗುಬ್ಬಿ: ರೈತರು ಮೂರು ನಾಲ್ಕು ಕಿಲೋಮೀಟರ್ ನೆಡೆದು ಹಾಲು ಹಾಕಲು ಹೋಗುತ್ತಿದ್ದ ಸ್ಥಳಗಳಿಗೆ ಹಾಲಿನ ಉಪ ಕೇಂದ್ರಗಳನ್ನು ಮಾಡಿಕೊಟ್ಟಿರುವುದು ತಪ್ಪೇ ? ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಕೇಳಿದರು.
ಪಟ್ಟಣದ ಕೆಎಂಎಫ್ ಆವರಣದ ನಂದಿನಿ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ
ಮಾತನಾಡಿ, ತುಮುಲ್ ಮಾಜಿ ನಿರ್ದೇಶಕ ಚಂದ್ರಶೇಖರ್ ಎ ಗ್ರೇಡ್ ಇದ್ದ ಡೈರಿಗಳನ್ನು ಸಿ ಗ್ರೇಡ್ ಗೆ ತಂದ ಮಹಾತ್ಮ, ಡೈರಿಗಳಲ್ಲಿ ಕಂಪ್ಯೂಟರ್, ಲೆಕ್ಕ ಪುಸ್ತಕಗಳನ್ನು ಇಟ್ಟುಕೊಳ್ಳದೆ ಡೈರಿಗಳನ್ನು ನಡೆಸುತ್ತಿದ್ದೇವೆ ಈಗ ನಾವು ಸರಿಯಾದ ರೀತಿಯಲ್ಲಿ ಸರ್ಕಾರದ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿ ಆಡಿಟ್ ಮಾಡಿಸುತ್ತಿರುವುದಕ್ಕೆ ಟೀಕೆ ಮಾಡುತ್ತಿದ್ದಾರೆ.
ದಿಲೀಪ್ ಕುಮಾರ್ ಸ್ವಂತ ಗ್ರಾಮ ಶಿವಸಂದ್ರದಲ್ಲಿ ಡೈರಿಗೆ ಸ್ವಂತ ಕಟ್ಟಡವಿಲ್ಲ, ಹಾಲು ಹಾಕುವ ದಲಿತರಿಗೆ ಷೇರು ಕೊಟ್ಟಿಲ್ಲ, ದಲಿತರು ಮನುಷ್ಯರಲ್ಲವೇನು, ಅವರ ಮತ ನಿಮಗೆ ಬೇಕಿಲ್ಲವೇನು. ಇಲ್ಲಿ ದಿಲೀಪ್ ತಾಯಿ ಅಧ್ಯಕ್ಷರಾಗಿದ್ದರೂ ಅಭಿವೃದ್ದಿ ಕಂಡಿಲ್ಲ ಎಂದು ನೇರ ಆರೋಪ ಮಾಡಿದರು.
ಜೆಡಿಎಸ್ ಮುಖಂಡ ನಾಗರಾಜು ಈ ಹಿಂದೆ ಜಿಲ್ಲಾ ಪಂಚಾಯಿತಿ ಆಯ್ಕೆಯಾಗಿದ್ದು ಹೇಗೆ ಎಂಬುದನ್ನು ಮರೆಯಬಾರದು. ಈಗ ಆಭಾಗದಲ್ಲಿ ನಿಂತು ಗೆಲ್ಲಲಿ.
ಜೆಡಿಎಸ್ ಮುಖಂಡ ನಾಗರಾಜ್ ಗ್ರಾಮದ ರೈತರು ನಾಲ್ಕೈದು ಕಿಲೋ ಮೀಟರ್ ಚಲಿಸಿ ಕಲ್ಲಹಳ್ಳಿ ಡೈರಿಗೆ ಹಾಲು ಹಾಕುತ್ತಾರೆ. ಲೀಡರ್ ಎಂದು ಬಿಂಬಿಸಿಕೊಳ್ಳುವ ಇವರಿಗೆ ನಮ್ಮೂರಿಗೆ ಡೈರಿ ತರುವ ಅಲೋಚನೆಯೇ ಇಲ್ಲವೇ,
ಮಹಿಳೆಯೊಬ್ಬಳು ಆಡಳಿತ ಮಾಡುವುದು ಸಹಿಸದ ಜೆಡಿಎಸ್ ಮುಖಂಡ ಎಸ್ಸಿ ಎಸ್ಟಿ,ಒಬಿಸಿ ಜನಗಳಿಗೆ ಡೈರಿ ನೀಡಲು ಬಿಟ್ಟಿಲ್ಲ, ಹಣ ವಸೂಲಿ ಬಗ್ಗೆ ಆರೋಪ ಮಾಡುವವರು ಖುದ್ದು ಡೈರಿಗೆ ತೆರಳಿ ಪರಿಶೀಲಿಸಿ ಎಲ್ಲಾ ಆಡಿಟ್ ದಾಖಲೆ ಸಿಗುತ್ತದೆ ಎಂದರು.
ಪದೇ ಪದೇ ಎನ್ ಡಿ ಎ ಮುಖಂಡರು ತಾಕತ್ತಿನ ಬಗ್ಗೆ ಮಾತನಾಡುತ್ತಾರೆ ನಾವು ಈಗಾಗಲೇ ಇಪ್ಪತೈದು ವರ್ಷಗಳಿಂದ ತಾಕತ್ತು ತೋರಿಸಿದ್ದೇವೆ. ಇಲ್ಲಿವರೆಗೂ ನಮ್ಮ ಮೇಲೆ ಬೀರಿದ ನಿಮ್ಮ ಎಲ್ಲಾ ಪ್ರಯೋಗಗಳು ವಿಫಲವಾಗಿವೆ ಇನ್ನು ತಾಕತ್ತಿನ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದರು.

ಮಾಧ್ಯಮ ಮುಂದೆ ಸುಳ್ಳು ಆರೋಪ ಮಾಡುವುದು ಬಿಟ್ಟು, ನೇರ ಡೈರಿಗೆ ತೆರಳಿ ತಿಳಿದುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದರು. ಜಾತಿ ಪಕ್ಷ ಮಾಡುತ್ತೇನೆ ಎಂದು ಆರೋಪ ಮಾಡಿದ ಮಾಜಿ ನಿರ್ದೇಶಕರು ಸ್ವಜಾತಿಯ ಪೆದ್ದನಹಳ್ಳಿ ಗ್ರಾಮದಲ್ಲಿ ಅವರ ಸಂಬಂಧಿಕರಿಲ್ಲ ಎಂದು ಡೈರಿ ತೆರೆಯದೆ ಜಾತಿ ಬುದ್ಧಿ ತೋರಿದ್ದಾರೆ.
ನಾರನಹಳ್ಳಿ ಡೈರಿಯಲ್ಲಿ 23 ವರ್ಷದಿಂದ ಷೇರು ನೀಡಿಲ್ಲ ಎನ್ನುವ ರೈತರಿಗೆ ನ್ಯಾಯ ಕೊಡಬೇಕಿದ್ದ ಅವತ್ತಿನ ನಿರ್ದೇಶಕರು ಈಗ ಪತ್ರಿಕೆ ಮುಂದೆ ಹುರುಳಿಲ್ಲದ ಆರೋಪ ಮಾಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ ಆರ್ ವೆಂಕಟೇಶ್, ನರಸಿಂಹಯ್ಯ, ಲೋಕೇಶ್ವರ್, ಯೋಗೇಶ್, ವಾಸುಗೌಡ, ಚಾಲುಗೌಡ ಇತರರು ಇದ್ದರು.





