ಗುಬ್ಬಿ : ರಾಮಾಯಣ ನಾಟಕದಲ್ಲಿ  ಅನೂನ್ಯ ಸಹೋದರರ ನಡುವಿನ ಸಂಭಂದವನ್ನು ಕಟ್ಟಿಕೊಡುತ್ತದೆ   ಎಂದು ತೋರೆಮಠದ ಮಠಾಧ್ಯಕ್ಷ ಶ್ರೀ ಅಟವೀ ಚನ್ನಬಸವಸ್ವಾಮೀಜಿ ತಿಳಿಸಿದರು. 

 ಪಟ್ಟಣದ ತೇರು  ಬೀದಿಯಲ್ಲಿ  ಶ್ರೀ ಚನ್ನಬಸವೇಶ್ವರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಏರ್ಪಡಿಸಿದ್ದ ಸಂಪೂರ್ಣ ರಾಮಾಯಣ ಮತ್ತು  ಬೆಳ್ಳಿ ಕಿರೀಟ ಧಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಹಣ, ಆಸ್ತಿ ಅಥವಾ ಅಧಿಕಾರಕ್ಕಿಂತ ಪರಸ್ಪರ ನಂಬಿಕೆ ಮತ್ತು ಪ್ರೀತಿ ಮುಖ್ಯ ಎಂಬುದನ್ನು  ರಾಮಾಯಣ ನಾಟಕದಿಂದ ತಿಳಿಯಬಹುದು.ರಾಮನು ಸನ್ಮಾರ್ಗದ (ಧರ್ಮ) ಸಂಕೇತವಾದರೆ, ಲಕ್ಷ್ಮಣನು ಆ ಮಾರ್ಗವನ್ನು ರಕ್ಷಿಸುವ ಶಕ್ತಿಯಾಗಿದ್ದನು. ಇತ್ತೀಚಿನ ದಿನದಲ್ಲಿ ಆಸ್ತಿಗಾಗಿ ತಂದೆ ತಾಯಿ ಅಣ್ಣತಮ್ಮಂದಿರ ಸಂಬಂಧವನ್ನು ದೂರ ಮಾಡುತ್ತಿರುವ ಪರಿಸ್ಥಿತಿ ನೋಡುತ್ತಿದ್ದೇವೆ. ಕುಟುಂಬದಲ್ಲಿ ವೈಶಮ್ಯವನ್ನು ಬಿಟ್ಟು ಬದುಕಿದರೆ ಜೀವನದಲ್ಲಿ ಸಂತೋಷದಿಂದ ಇರಬಹುದು ಎಂದು ತಿಳಿಸಿದರು.

ನಾಟಕದಲ್ಲಿ ನರಸಿಂಹಮೂರ್ತಿ(ಪಿಂಕಿ), ಹಿರಿಯ ಕಲಾವಿದರು, ಕಲಾಸೇವೆಯಲ್ಲಿ ದೀರ್ಘಕಾಲದಿಂದ ಕಲಾರಂಗದಲ್ಲಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಸಂಘದ ವತಿಯಿಂದ ಇವರಿಗೆ ರಜತ ಕಿರೀಟ ಸಮರ್ಪಣೆ ಮಾಡಿದರು. 

ಪರಿಚಯ: ಗುಬ್ಬಿ ತಾಲ್ಲೂಕಿನ, ಸಿ.ಎಸ್. ಹೋಬಳಿಯ ಹಿಂಡಿಸಿಗೆರೆ ಗ್ರಾಮದಲ್ಲಿ ಗಂಗಮ್ಮ ತಿಮ್ಮಪ್ಪನವರ ಜೇಷ್ಠ ಪುತ್ರನಾಗಿ ಜೂನ್ 29 ರಂದು ಜನಿಸಿ ಸ್ವಾಗ್ರಾಮದಲ್ಲಿ  ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ 2000ನೇ ಇಸವಿಯಲ್ಲಿ ಹಾ|ಮಾ॥ ಶ್ರೀ ಚಿಕ್ಕಣ್ಣನವರ ನಿರ್ದೇಶನದಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದಲ್ಲಿ ಮೊದಲ ಬಾರಿಗೆ “ಸೈಂಧವ” ಪಾತ್ರದ ಮೂಲಕ ರಂಗಪ್ರವೇಶ ಮಾಡಿ ಪ್ರಥಮ ಪ್ರಯತ್ನದಲ್ಲೇ ಜನರ ಮನ್ನಣೆ ಪಡೆದಿರುತ್ತಾರೆ. 2007ರಲ್ಲಿ ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿಯವರ ಸದಸ್ಯನಾಗಿ ಮತ್ತು ಸಂಘದ ವತಿಯಿಂದ ಹಾರ್ಮೋನಿಯಂ ಮಾಸ್ಟರ್  ಐ.ಎಲ್. ರಂಗಸ್ವಾಮಯ್ಯನವರ ನಿರ್ದೇಶನದಲ್ಲಿ ” ಸಂಪೂರ್ಣ ರಾಮಯಣ ” ಎಂಬ ಪೌರಾಣಿಕ ನಾಟಕದಲ್ಲಿ ವಾಲಿ, ಪ್ರಹಸ್ತ, ಲಕ್ಷ್ಮಣ, ದುಶ್ಯಾಸನ,  ಹೀಗೆ ಹಲವಾರು ವಿಭಿನ್ನ ಪೌರಾಣಿಕ ನಾಟಕಗಳಲ್ಲಿ ಪಾತ್ರಗಳನ್ನು ಅಭಿನಯಿಸಿ, ಸುಮಾರು 25 ವರ್ಷಗಳಿಂದ ನಿರಂತರವಾಗಿ ಕಲಾಸೇವೆಯಲ್ಲಿದ್ದು ಜನರ ಮನದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ.  ಇವರ ಸುದೀರ್ಘ ಕಲಾಸೇವೆಯನ್ನು ಗುರುತಿಸಿ ಸಂಘದ ವತಿಯಿಂದ ” ರಜತ ಕಿರೀಟವನ್ನು ಎಲ್ಲಾ ಕಲಾವಿದರ ಪರವಾಗಿ ಧಾರಣೆ ಮಾಡಿ ಗೌರವಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಲಾವಿದ ವೆಂಕಟೇಶ್ ಇವರಿಗೂ ಬೆಳ್ಳಿ ಕಿರೀಟ ಧಾರಣೆ ಮಾಡಲಾಯಿತು. 

ಪ್ರತಿ ವರ್ಷ ಗುಬ್ಬಿಯಪ್ಪನ ಜಾತ್ರೆಯ ಅಂಗವಾಗಿ ನಾಟಕ ಪ್ರದರ್ಶನ ಮಾಡುತ್ತೇದೆ.  ಜೇಷ್ಠತೆ ಆಧಾರದ ಮೇಲೆ ಎರಡು ಮೂರು ಜನ ಕಲಾವಿದರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಲಾಗುತ್ತದೆ. –  ಜಿ.ಎನ್.ಮಂಜುನಾಥ್ ಅಧ್ಯಕ್ಷರು ಶ್ರೀ ಚನ್ನಬಸವೇಶ್ವರ ಕೃಪ ಪೋಷಿತ ನಾಟಕ ಮಂಡಳಿ

ನಾನು ಸುಮಾರು ವರ್ಷಗಳಿಂದ ಪೌರಾಣಿಕ ನಾಟಕದಲ್ಲಿ ಹಲವಾರು ಪಾತ್ರಗಳನ್ನು ಅಭಿನಯಿಸಿದ್ದೇನೆ. ಆ ಕಲೆಯನ್ನು ಗುರುತಿಸಿ ಗುಬ್ಬಿ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವತಿಯಿಂದ ನನಗೆ  ಬೆಳ್ಳಿ ಕಿರೀಟಧಾರಣೆ ಮಾಡಿರುವುದಕ್ಕೆ ಸಂಘಕ್ಕೆ ಧನ್ಯವಾದಗಳು ಅರ್ಪಿಸುತ್ತೇನೆ. – ನರಸಿಂಹಮೂರ್ತಿ( ಪಿಂಕಿ) ಕಲಾವಿದ

ಸಮಾರಂಭದಲ್ಲಿ ಹಾರ್ಮೋನಿಯಂ ಮಾಸ್ಟರ್ ಐ.ಆರ್.ವಿಶ್ವನಾಥ್, ಗೋವಿಂದಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ, ವೀರಶೈವ ಸಮಾಜದ ಅಧ್ಯಕ್ಷ ಕಾಂತರಾಜು, ಬಸವರಾಜು, ಶ್ರೀನಿವಾಸ್ ಕೊಪ್ಪ, ಮುಖ್ಯ ಶಿಕ್ಷಕ ಕರಿಯಪ್ಪ, ಮಂಜುನಾಥ್, ವೀರಭದ್ರಯ್ಯ, ನಲ್ಲಿ ರಾಜಣ್ಣ, ಕುಂಬಣ್ಣ, ಕಲಾವಿದರಾದ ಕುಂಬಿನರಸಿಂಹಯ್ಯ, ಶ್ರೀ ಚನ್ನಬಸವೇಶ್ವರ ಕೃಪ ಪೋಷಿತ ನಾಟಕ ಮಂಡಳಿಯ 

ಅಧ್ಯಕ್ಷ ಜಿ.ಎನ್.ಮಂಜುನಾಥ್, ಉಪಾಧ್ಯಕ್ಷ ಲಕ್ಷ್ಮಿಕಾಂತರಾಜು, ಖಜಾಂಚಿ ಜಿ.ಆರ್.ಶಿವಕುಮಾರ್ ಹಾಗೂ ಸರ್ವಸದಸ್ಯರು, ಕಲಾಭಿಮಾನಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here