ಗುಬ್ಬಿ : ಪಟ್ಟಣದ ಶ್ರೀ ಗೋಸೂಲ ಚನ್ನಬಸವೇಶ್ವರ ದ್ವಾರಬಾಗಿಲು ಬಿ.ಹೆಚ್.ರಸ್ತೆ ಪಕ್ಕದಲ್ಲಿ ಪ್ರಥಮ ಬಾರಿಗೆ ನಾಟಕರತ್ನ ಡಾ.ಗುಬ್ಬಿ ವೀರಣ್ಣ ಕಲಾವೇದಿಕೆ, ಶ್ರೀ ಬಿದ್ದಾಆಂಜನೇಯ ಕಲಾಬಳಗ ಗುಬ್ಬಿ ಇವರ ಆಶ್ರಯದಲ್ಲಿ ಏಳು ದಿನಗಳ ಕಾಲ ಪೌರಾಣಿಕ ಹಗಲು ನಾಟಕೋತ್ಸವ – 2026 ಕಾರ್ಯಕ್ರಮವನ್ನು ಜ.17 ರಿಂದ 23 ರವರೆಗೆ  11.30ಕ್ಕೆ ಏರ್ಪಡಿಸಲಾಗಿದೆ ಎಂದು ಶ್ರೀ ಬಿದ್ದಆಂಜನೇಯ ಕಲಾಬಳಗದ ಗೌರವಾಧ್ಯಕ್ಷ ಬಿ.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಾಟಕೋತ್ಸವದ ದಿವ್ಯ ಸಾನಿಧ್ಯವನ್ನು ತೋರೆಮಠದ ಮಠಾಧ್ಯಕ್ಷ ಶ್ರೀ ಅಡವಿ ಚನ್ನಬಸವಸ್ವಾಮಿ ವಹಿಸಿಕೊಳ್ಳುವರು.  ನಾಟಕವನ್ನು ಶಾಸಕ ಎಸ್.ಆರ್. ಶ್ರೀನಿವಾಸ್  ಉದ್ಘಾಟಿಸುವರು.

ಅಧ್ಯಕ್ಷತೆಯನ್ನು ರೈಲ್ವೆ ಸಚಿವ ವಿ. ಸೋಮಣ್ಣ ವಹಿಸಿಕೊಳ್ಳುವರು. ಮುಖ್ಯ ಅತಿಥಿಯಾಗಿ ತಹಶೀಲ್ದಾರ್ ಬಿ.ಆರತಿ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಂಜುಳಾದೇವಿ, ಸಿಪಿಐ ರಾಘವೇಂದ್ರ, ಬೆಸ್ಕಾಂ ಇಂಜಿನಿಯರ್ ಜಲದೇಶ್, ಅತಿಥಿಯಾಗಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮಣದಾಸ್, ತುಮಕೂರು ಜಿಲ್ಲೆ ನಾಟಕ ರಂಗಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಶಿವಮಹಾದೇವಯ್ಯ, ಅಧ್ಯಕ್ಷ ವೈ.ಎನ್. ಶಿವಣ್ಣ ಹಾಗೂ ಹಿರಿಯ ಕಲಾವಿದರು ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು ಮತ್ತು ಕಲಾ ಪ್ರೋತ್ಸಾಹಕರು ಆಗಮಿಸುವರು.

ರಂಗಸಜ್ಜಿಕೆ : ರಾವುತ್ತನಹಳ್ಳಿ ಆನಂದಚಾರ್‌ರವರ ಸ್ವರ್ಣಗೌರಿ ಡ್ರಾಮ ಸೀನರಿ ರಂಗಸಜ್ಜಿಕೆಯಲ್ಲಿ ನಡೆಯುವ ನಾಟಕಗಳು ಜ.17 ಶನಿವಾರ ಶ್ರೀಲಕ್ಷ್ಮಿ ರಂಗನಾಥಸ್ವಾಮಿ ಕೃಪಪೊಷಿತ ನಾಟಕ ಮಂಡಳಿ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾ. ಮಾ.ಶ್ರೀನಿವಾಸ್ ನಿರ್ದೇಶನದ ಕುರುಕ್ಷೇತ್ರ ನಾಟಕ,  ಜ.18 ಭಾನುವಾರ ತುಮಕೂರು ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ಕೃಪಪೋಷಿತ ನಾಟಕ ಮಂಡಳಿ, ಜೈ ಮಾರುತಿ ಕಲಾ ಬಳಗದ ವತಿಯಿಂದ ಹಾ. ಮಾ. ಚಂದ್ರಶೇಖರ್ ಎಚ್.ಆರ್ ರವರ ನಿರ್ದೇಶನದನದಲ್ಲಿ ಕುರುಕ್ಷೇತ್ರ ನಾಟಕ,  ಜ.19 ಸೋಮವಾರ ಕಡೆಪಾಳ್ಯ ಶ್ರೀ ಸಿದ್ದೇಶ್ವರ ಹಾಗೂ ಮಾರುತಿ ಕಲಾ ಬಳಗದ ವತಿಯಿಂದ ಹಾ. ಮಾ. ಐ.ವಿ.ರುದ್ರೇಶ್ ರವರ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ,  ಜ.20 ಮಂಗಳವಾರ ತುಮಕೂರಿನ ಶ್ರೀ ಗುರುರಾಘವೇಂದ್ರ ಕಲಾ ಮತ್ತು ಕ್ರೀಡಾ ಟ್ರಸ್ಟ್ ವತಿಯಿಂದ ಹಾ.ಮಾ.ಚಂದ್ರಕುಮಾರ್ ನಿರ್ದೇಶನದ ಕುರುಕ್ಷೇತ್ರ ನಾಟಕ, ಜ.21 ಬುಧವಾರ ಗುಬ್ಬಿ ಡಿಕೆಆರ್ ನಟಸಾರ್ವಭೌಮ ಸಂಘದ ವತಿಯಿಂದ ಹಾ.ಮಾ.ಲಿಂಗರಾಜು ನಿರ್ದೇಶನದ ಸಂಪೂರ್ಣರಾಮಾಯಣ ನಾಟಕ, ಜ.22 ಗುರುವಾರ  ಲಕ್ಕೇನಹಳ್ಳಿ ಶ್ರೀ ತುಳಸಿರಂಗನಾಥಸ್ವಾಮಿ ನಾಟಕ ಮಂಡಳಿ ವತಿಯಿಂದ ಹಾ.ಮಾ.ಲಿಂಗರಾಜು ನಿರ್ದೇಶನದ ಕುರುಕ್ಷೇತ್ರ ನಾಟಕ, ಜ.23 ಶುಕ್ರವಾರ ಬೆಂಗಳೂರು ಶ್ರೀ ವೆಂಕಟೇಶ್ವರ ಕೃಪ ಪೋಷಿತ ನಾಟಕ ಮಂಡಳಿ ವತಿಯಿಂದ ಹಾ.ಮಾ. ಸಾಗರ್ ಆಚಾರ್ ನಿರ್ದೇಶನದ ನುರಿತ ರಂಗಭೂಮಿ ಮಹಿಳಾ ಕಲಾವಿದರಿಂದ ಕುರುಕ್ಷೇತ್ರ ನಾಟಕವನ್ನು ಏರ್ಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಾಟಕದ ಆಯೋಜಕರಾದ  ಗೌರವಾಧ್ಯಕ್ಷ ಕುಮಾರ್‌ಸ್ವಾಮಿ ಜಿ.ಕೆ,  8197609996, ಸುರೇಶ್ ಸಿ 9916633769, ಡಿ.ಕೆ ರಾಮಕೃಷ್ಣಯ್ಯ 9113032541, ರವಿಕುಮಾರ್ 8884728587 ರವರನ್ನು ಸಂಪರ್ಕಿಸಲು ಕೊರಿದೆ.

ಎಲ್ಲಾ ಸಂಘ ಸಂಸ್ಥೆಗಳು ಕಲಾವಿದರುಗಳಿಂದ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here