ಗುಬ್ಬಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಛಲವಾದಿ ಮಹಾಸಭಾ ಹಾಗೂ ಸಾಲುಮರದ ತಿಮ್ಮಕ್ಕ ಅಭಿಮಾನಿ ಬಳಗದ ವತಿಯಿಂದ ಪದ್ಮಶ್ರೀ ನಾಡೋಜ ಪ್ರಶಸ್ತಿ ಪುರಸ್ಕೃತ ದಿವಂಗತ ಸಾಲಮರದ ತಿಮ್ಮಕ್ಕನವರ ನುಡಿ ನಮನ ಕಾರ್ಯಕ್ರಮವನ್ನು ಡಿ.13ರಂದು ಬೆಳಿಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ ಎಂದು ಛಲವಾದಿ ಮಹಾಸಭಾದ ಅಧ್ಯಕ್ಷ ಟಿ ಈರಣ್ಣ ತಿಳಿಸಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಉರಿಲಿಂಗಪೆದ್ದಿ ಮಹಾಸಂಸ್ಥಾನ ಮೈಸೂರಿನಪೀಠಾಧ್ಯಕ್ಷರಾದ ಜ್ಞಾನಪ್ರಕಾಶ ಮಹಾಸ್ವಾಮಿಜಿ ವಹಿಸಿಕೊಳ್ಳುವರು. ಉದ್ಘಾಟನೆಯನ್ನು ಚಾಲುಕ್ಯ ಆಸ್ಪತ್ರೆ ಸಿಇಒ ಡಾ. ಬಿ ಎಂ ನಾಗಭೂಷಣ್, ರಾಜ್ಯ ಛಲವಾದಿ ಮಹಾಸಭಾದ ಜಂಟಿ ಕಾರ್ಯದರ್ಶಿ ಟಿ.ಆರ್.ನಾಗೇಶ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಛಲವಾದಿ ಮಹಾಸಭಾದ ಮುಖಂಡರು, ಸಮುದಾಯದವರು, ಸಾಲು ಮರದ ತಿಮ್ಮಕ್ಕ ನವರ ಅಭಿಮಾನಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಾಲುಮರದ ತಿಮ್ಮಕ್ಕನ ತಂಗಿ ಲಕ್ಷ್ಮಮ್ಮ, ತಮ್ಮ ಕೆಂಪಯ್ಯನವರು ಗೌರವ ಅತಿಥಿಯಾಗಿ ಆಗಮಿಸುವರು ಎಂದು ತಿಳಿಸಿದ್ದಾರೆ.






