ಗುಬ್ಬಿ:  ಇತಿಹಾಸ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಎಲೆ ಮರೆ ಕಾಯಂತಹ ಸಾಹಿತ್ಯ ಕೃಷಿಕನಿಗೆ ಸಂದ ಗೌರವ ಇದಾಗಿದೆ. ಡಿ.20 ರಂದು ನೆಡೆಯುವ ಸಮ್ಮೇಳನ ಇಡೀ ತಾಲ್ಲೂಕಿನ ಇತಿಹಾಸದಲ್ಲಿ ಒಂದು ಮೆರೆಗು ಕಟ್ಟಿಕೊಟ್ಟ ಕಾರ್ಯಕ್ರಮವಾಗಿ ಹೊರ ಹೊಮ್ಮಲಿದೆ. 

ಸಾಹಿತ್ಯದ ನಿರಂತರ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ 64 ವರ್ಷ ವಯೋಮಾನದ ನಂಜುಂಡಸ್ವಾಮಿ 1961 ರ ಆಗಸ್ಟ್ 25 ರಂದು ಜನಿಸಿದವರು. ತಂದೆ ಎ.ಬಸವರಾಜು. ತಾಯಿ ಎನ್.ಪಿ.ಶಾರದಮ್ಮ ದಂಪತಿಗಳ ಮಗನಾಗಿ ಜನಿಸಿ ಗುಬ್ಬಿ, ಮೈಸೂರು ನಗರದಲ್ಲಿ ಪ್ರಾಥಮಿಕ ಪ್ರೌಢ, ಪಿಯು ಶಿಕ್ಷಣ ಮುಗಿಸಿ ಬಳ್ಳಾರಿಯಲ್ಲಿ ಆಯುರ್ವೇದ ಪದವಿ ಪಡೆದು ತುಮಕೂರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಶುದ್ಧ ಆಯುರ್ವೇದ ಚಿಕಿತ್ಸಾಲಯ ಮೂಲಕ 1986 ರಲ್ಲಿ ಆರಂಭಿಸಿದರು. ಚಿಕ್ಕ ವಯಸ್ಸಿನಿಂದ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಇವರು ಸಂಶೋಧನೆ ಕಾರ್ಯ ಆರಂಭಿಸಿ ನಿರಂತರ ಸಾಹಿತ್ಯ ಕೃಷಿ ನಡೆಸಿದರು.

ಸದಾ ಓದುವ ಹವ್ಯಾಸ ಬೆಳಸಿಕೊಂಡು ಆಳವಾಗಿ ಅಧ್ಯಯನ ಮಾಡುವ ಪ್ರವೃತ್ತಿ ಸಹ ರೂಢಿಸಿಕೊಂಡಿದ್ದರು. ಇದರ ಫಲ ಇಂದಿಗೂ ಅವರ ತುಮಕೂರು ನಿವಾಸದಲ್ಲಿ ಗ್ರಂಥಾಲಯವನ್ನು ಕಾಣಬಹುದಾಗಿದೆ ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಕಾಳು ಬೇಳೆ ಆಹಾರ ಪದಾರ್ಥ ಕಾಣುವುದು ಸಾಮಾನ್ಯ. ಆದರೆ ಇವರ ಆಡುಗೆಮನೆ ಪುಸ್ತಕಗಳ ಜೋಡಣೆಯ ಕಪಾಟು ಆಗಿರುವುದು ಇವರ ಸಾಹಿತ್ಯಾಸಕ್ತಿತೋರುತ್ತದೆ.ವೀರಶೈವ ಧರ್ಮ-ಸಾಹಿತ್ಯ ಸಂಸ್ಕೃತಿ-ಇತಿಹಾಸ ಕುರಿತು ಆಳವಾಗಿ ಅಧ್ಯಯನ ಮಾಡಿದ ಇವರು ಈ ವಿಚಾರದಲ್ಲಿ ಸ್ಪಷ್ಟ ಮಾಹಿತಿ ನೀಡಬಲ್ಲ ಏಕೈಕ ವಿದ್ವಾಂಸರು ಎಂದರೂ ಅತಿಶಯೋಕ್ತಿಯಲ್ಲ. 50 ಕ್ಕೂ ದರಲ್ಲಿ ಅಧಿಕ ಹೆಚ್ಚು ಕೃತಿ ರಚಿಸಿ ಸಂಪಾದಿಸಿದರಲ್ಲಿ ಮಾಗಡಿ ವೀರಪ್ಪಶಾಸ್ತ್ರಿ, ಶಿವಗಂಗಾ ಕ್ಷೇತ್ರ, ವೀರಶೈವ ಮಠಗಳು, ಗೋಸಲ ಶ್ರೀ ಗುಬ್ಬಿ ಚನ್ನಬಸವೇಶ್ವರಸ್ವಾಮಿ, ವಚನ ಪಿತಾಮಹ ಡಾ.ಫಾ.ಗು.ಹಳಕಟ್ಟಿ ಸಮಗ್ರ ಸಾಹಿತ್ಯಸಮೀಕ್ಷೆ, ಸಿದ್ಧಾಂತ ಶಿಖಾಮಣಿ, ಸ್ಥಲ ಬೇದಗಳು, ಸೋಮೆಕಟ್ಟೆ ಚೆನ್ನವೀರಸ್ವಾಮಿ ಕೃತಿಗಳು, ಕಾಯಕಯೋಗಿ, ಹೊನ್ನುಡಿಕೆ ದರ್ಶನ, ಕಲ್ಪಸಿರಿ, ಕರ್ನಾಟ ಕಲ್ಯಾಣಕಾರಕಂ ಹೀಗೆ ಅನೇಕ ಖ್ಯಾತ ಕೃತಿಗಳು ಎಂದಿಗೂ ದಾಖಲೆ ರೀತಿ ಪ್ರಕಟಗೊಂಡಿದೆ.

ತಾಳೆ ಗರಿ ಶಾಸನ ಓದುವ ಏಕೈಕ ಪಂಡಿತ ನಂಜುಂಡಸ್ವಾಮಿ ತಾಳೆ ಗರಿಗಳನ್ನು ಓದಿ ವಿಸ್ತಾರ ಮಾಹಿತಿ ಒದಗಿಸಿದ ಇತಿಹಾಸ ಸಂಶೋಧಕ ನಂಜುಂಡಸ್ವಾಮಿ ಅವರು ತಾಮ್ರ ಶಾಸನಗಳನ್ನು ಓದಿ ಸರಳ ಕನ್ನಡಕ್ಕೆ ಉಲ್ಲೇಖಿಸಿದ್ದಾರೆ. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಅಷ್ಟೇ ಅಲ್ಲದೇ ಪುಸ್ತಕದಲ್ಲಿನ ಕನ್ನಡ ವ್ಯಾಕರಣ ತಪ್ಪಿದ್ದಲ್ಲಿ ಯಾವ ಪುಟದಲ್ಲಿ ತಪ್ಪು ಇದೆ ಎಂಬುದನ್ನು ನೇರ ಲೇಖಕರಿಗೆ ಪತ್ರ ಮುಖೇನ ತಿಳಿಸುವ ವಿಶೇಷ ಪಾಂಡಿತ್ಯ ಇವರಲ್ಲಿದೆ. ಪುರಾತನ ವೀರಶೈವ ಮಠಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿದ ಇವರು ಗುಬ್ಬಿ ಹೊಸಹಳ್ಳಿ ಅರಸು ಮನೆತನದ ಕೃತಿ, ಪೂಚಾದತ್ತಿ ತಾಮ್ರ ಶಾಸನ, ಗುಬ್ಬಿ ಮಲ್ಲಣ್ಣಾರ್ಯ ಕೃತಿಯ ಉಲ್ಲೇಖ, ಬಸವಪಥ, ಇತ್ತೀಚೆಗೆ ಹಲಗೆಯಾರನ ಶೋಧನೆಗಳು, 150 ಪುಸ್ತಕ ಹಸ್ತಪ್ರತಿ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ ಹೀಗೆ ಅನೇಕ ಕೃತಿಗಳನ್ನು ರಚಿಸಿ ಜಿಲ್ಲೆಯ ಮೇರು ಸಾಹಿತಿಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಡಾ.ಬಿ.ನಂಜುಂಡಸ್ವಾಮಿ ಅವರಿಗೆ ಸಂದ ಪ್ರಶಸ್ತಿಗಳ ಪೈಕಿ ಶಿವಗಂಗಾಶ್ರೀ ಪ್ರಶಸ್ತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವೀರಶೈವ ಪ್ರತಿಭಾ ಸಂಪನ್ನ, ಇತಿಹಾಸ ಅಕಾಡೆಮಿಯಿಂದ ನೊಳಂಬ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಮುಖ್ಯವಾಗಿದೆ. ಒಟ್ಟಾರೆ ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಮೆರಗು ತುಂಬವ ನಂಜುಂಡಸ್ವಾಮಿ ಅವರಿಗೆ ಇಡೀ ತಾಲ್ಲೂಕು ಜನತೆ ಮೆಚ್ಚಿನ ಪ್ರಶಂಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here