ಮಧುಗಿರಿ:  ಕವಿತೆಗಳಲ್ಲಿ ಅಂತರಂಗದ ತುಡಿತ ಮತ್ತು ಮಾನವೀಯ ಮೌಲ್ಯಗಳ ಸ್ಪರ್ಶವಿರಬೇಕು ಎಂದು ಹಿರಿಯ ಸಾಹಿತಿ ಪ್ರೊ. ಮ.ಲ.ನ ಮೂರ್ತಿ ಅಭಿಪ್ರಾಯಪಟ್ಟರು.

 ಪಟ್ಟಣದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ, ಕನ್ನಡ ಸಂಘ, ಐಕ್ಯೂಎಸಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ನಡೆದ ಕವಿ ಗೋಷ್ಠಿಯಲ್ಲಿ ಮಾತನಾಡಿ,  ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ  ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯ ಅನಾವರಣ ಮಾಡಲು ಸಹಕಾರಿಯಾಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ ಎಸ್ ಕುಮಾರ್ ಮಾತನಾಡಿ, ಕವಿತೆಗಳಲ್ಲಿ ಜೀವನಾನುಭವದ ಚಿತ್ರಣವಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.

 ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಗೋವಿಂದರಾಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವ, ಸಾಹಿತ್ಯ ಸೃಷ್ಟಿಯಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಬೇಕು ಎಂದರು.

 ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಪ್ರೊ. ಸಿ ಕೃಷ್ಣಪ್ಪ,  ಪಿ ಕೆ ರಂಗಸ್ವಾಮಿ, ಗಾಯತ್ರಿ ನಾರಾಯಣ್, ಲಲಿತಾಂಬ, ಕಾಲೇಜಿನ ಅಧ್ಯಾಪಕ ಪ್ರೊ. ಸುರೇಶ್ ಸಿ ಜಿ, ಪ್ರೊ. ನಾಗರಾಜ್ ಎಂ ಎಸ್, ಪ್ರೊ‌ ಮಂಜುನಾಥ ಬಿ, ಡಾ. ಮಂಜುನಾಥ ಎಚ್, ಪ್ರೊ. ಮಂಜುನಾಥ ಎಸ್ ವಿ,  ಮಂಜುನಾಥ ಪೂಜೇರಿ, ಡಾ. ಕುಮಾರ್ ಸಿ, ಪತ್ರಾಂಕಿತ ವ್ಯವಸ್ಥಾಪಕಿ ಚಂದ್ರಕಲಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಸುಮಾರು 25 ಜನ ವಿದ್ಯಾರ್ಥಿಗಳು ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು.

LEAVE A REPLY

Please enter your comment!
Please enter your name here