ಬೆಂಗಳೂರು : ವಯೋವೃದ್ದೆ ಕಾಲೇಜಿಗೆ ಬಂದು ಇತಿಹಾಸ ಪಾಠ ಕೇಳಿದ ಅಪರೂಪದ ಘಟನೆ ಪೀಣ್ಯ ಕಾಲೇಜಿನಲ್ಲಿ ನಡೆದಿದೆ.
ನಗರದ ಪೀಣ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 70 ವರ್ಷದ ಹಿರಿಯ ಮಹಿಳೆ ಕುಸುಮಾ ಬಂದು ಪ್ರಾಂಶುಪಾಲರನ್ನು ಕೇಳಿಕೊಂಡರು. ಪ್ರಾಂಶುಪಾಲರು ಮೂರನೇ ತರಗತಿ ಓದಿ ಕಾಲೇಜು ಮೇಟ್ಟಿಲುಹತ್ತುವ ಆಸೆಯನ್ನು ಈಡೇರಿಸಲು ಸಲುವಾಗಿ ಇತಿಹಾಸ ಉಪನ್ಯಾಸಕಿ ಡಾ. ಭಾರತೀ ರವರಿಗೆ ತಿಳಿಸಿದರು. ಉಪನ್ಯಾಸಕಿ ಭಾರತಿ ತರಗತಿಗೆ ವಯೋವೃದ್ದೆಯನ್ನು ಕೂರಿಸಿಕೊಂಡು ವಿಜಯನಗರ ಸಾಮ್ರಾಜ್ಯದ ಕಾಲದ ಸಂತೆಗಳು, ರಾಜ್ಯ ವೈಭವಗಳು, ಸಾಮ್ರಾಜ್ಯ ವಿಸ್ತರಣೆ ಬಗ್ಗೆ ಕಾಲೇಜ್ ಮಕ್ಕಳೊಂದಿಗೆ ಹಿರಿಯ ಮಹಿಳೆಗೂ ಸಹ ಉಪನ್ಯಾಸ ನೀಡಿದರು.
ಪಾಠ ಕೇಳಿದ 70 ವರ್ಷದ ಹಿರಿಯ ಮಹಿಳೆ ಕುಸುಮ ಬೋಧನೆ ಮಾಡಿದ ಉಪನ್ಯಾಸಕಿ ಹಾಗೂ ಪ್ರಾಂಶುಪಾಲರಿಗೆ ಗುರುದಕ್ಷಿಣೆ ನೀಡಿ ಧನ್ಯವಾದಗಳನ್ನು ತಿಳಿಸಿದರು.





