ಪಾವಗಡ : ಜಾನಪದ ಕ್ಷೇತ್ರದಲ್ಲಿ ಸತತ ಸೇವೆ ಪರಿಗಣಿಸಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾವಗಡ ತಾಲೂಕು ವೀರ್ಲಗೊಂದಿ ಗ್ರಾಮದ ವಾಸಿ ಹಿರಿಯ ಜಾನಪದ ಕಲಾವಿದ ಡಿ.ನಾಗರಾಜು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಗಿದೆ.
ಈ ಕುರಿತು ಹಿರಿಯ ಜಾನಪದ ಕಲಾವಿದ ವೀರ್ಲಗೊಂದಿ ನಾಗರಾಜು ಮಾದ್ಯಮದ ಜತೆ ಮಾತನಾಡಿ,ಯಕ್ಷಗಾನ ಹಾಗೂ ಜಾನಪದ ಕಲಾ ಪ್ರತಿಭೆ ಗುರ್ತಿಸಿ ಜಿಲ್ಲಾಡಳಿತ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿದ್ದು ಅತ್ಯಂತ ಸಂತಸ ತಂದಿದೆ.ಜಾನಪದ ಕ್ಷೇತ್ರದ ಕಲಾ ಸೇವೆಗೆ ಸಿಕ್ಕ ಪುರಸ್ಕಾರವಾಗಿದ್ದು,ನನ್ನನು ಗುರ್ತಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಜಿಲ್ಲಾಡಳಿತ ಹಾಗೂ ಇತರೆ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ, ಅಬಾರಿಯಾಗಿದ್ದೇನೆ. ಈ ಮಹತ್ತರ ಘಟ್ಟ ನನ್ನ ನನ್ನ ಕಲಾ ಸೇವೆಗೆ ಪ್ರೇರಣೆ ಅಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಜಾನಪದ ಕಲಾ ವಿದ ಡಿ.ನಾಗರಾಜು ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಿದ್ದಕ್ಕೆ ಕಲಾವಿದರಾದ ಬೆಳ್ಳಿಬಟ್ಟಲು ಬಲರಾಮು.ಪ್ರಕಾಶ್.ಗೋವಿಂದಪ್ಪ,ನೀಲಾ ನಾಗರಾಜು ಹಾಗೂ ಪರಮೇಶ.ರಮೇಶ್ ಹಾಗೂ ತಾಲೂಕಿನ ಜಾನಪದ ಹಾಗೂ ಯಕ್ಷಗಾನ ಕಲಾ ಕ್ಷೇತ್ರದ ಅನೇಕ ಮಂದಿ ಕಲಾವಿದರು ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.





