ಗುಬ್ಬಿ : ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮುದಾಯದವರು ಸರ್ಕಾರದಿಂದ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಕೆಪಿಸಿಸಿ ಓಬಿಸಿಯ ರಾಜ ಕಾರ್ಯದರ್ಶಿ ಸಿ.ಚಂದ್ರಶೇಖರ್ ತಿಳಿಸಿದರು.

ತಾಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘ, ಶ್ರೀ ಲಕ್ಷ್ಮೀದೇವಿ, ಶ್ರೀ ಗಂಗಾಪರಮೇಶ್ವರಿ ದೇವಾಲಯ ಜೀರ್ಣೋದ್ಧಾರ ಸಮಿತಿ, (ರಿ.) ಹಾಗೂ ಗುಬ್ಬಿ ತಾಲ್ಲೂಕು ಬೆಸ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮಂಟಪ ಅನಾವರಣ ಹಾಗೂ 906ರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ, ನಾವು ಒಬಿಸಿಯಲ್ಲಿ  ಇದ್ದೇವೆ. ನಮನ್ನು  ಎಸ್ಟಿಗೆ ಸೇರಿಸಬೇಕು ಎಂದು ಮೂವತ್ತು ವರ್ಷದಿಂದಲೂ ಸಹ ಕೆಲವರು  ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಸಮುದಾಯದ ಹೆಸರು ಹೇಳಿಕೊಂಡು ಕೆಲವು ವ್ಯಕ್ತಿಗಳು ರಾಜಕೀಯವಾಗಿ, ಆರ್ಥಿಕವಾಗಿ ಸೌಲಭ್ಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಸಮಾಜಕ್ಕೆ ಯಾವುದೇ ರೀತಿಯ ಅನುಕೂಲ ಮಾಡುತ್ತಿಲ್ಲ.   ಮುಂದಿನ ದಿನದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ. ಆರ್ಥಿಕವಾಗಿ ಬಲಿಷ್ಠರಾದರೆ ನಮ್ಮ ಮಕ್ಕಳಿಗೆ ವಿದ್ಯೆಯನ್ನು ಕಲಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯ ಎಂದು ತಿಳಿಸಿದರು.

ತೋರೆಮಠದ ಮಠ ಅಧ್ಯಕ್ಷರಾದ ಶ್ರೀ ಆಟವಿ ಚನ್ನಬಸವ ಸ್ವಾಮಿಗಳು ಮಾತನಾಡಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಚೌಡಯ್ಯನವರ ವಚನಗಳು ಅತ್ಯಂತ ನೇರ, ನಿಷ್ಠುರ ಮತ್ತು ಕಟುವಾಗಿದ್ದವು. ಸಮಾಜದಲ್ಲಿದ್ದ ಮೌಢ್ಯ, ಕಪಟತನ ಮತ್ತು ಅಸಮಾನತೆಯನ್ನು ಅವರು ಕಟುವಾಗಿ ಟೀಕಿಸುತ್ತಿದ್ದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಪ್ರಮುಖ ಶರಣರಲ್ಲಿ ಇವರೂ ಒಬ್ಬರು ಎಂದು ತಿಳಿಸಿದರು.

ಮಂಜುನಾಥ್.ಬಿ. ಸುಣಗಾರ್ ಮಾತನಾಡಿ,  ಸಮುದಾಯದವರು ಕೇವಲ ಕುಲ ಕಸಬು ಮಾಡುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಾಮಾಜಿಕವಾಗಿ ಮುನ್ನಡೆಗೆ ಗಮನ ಹರಿಸಬೇಕು ಎಂದರು.

ಅಂಬಿಗರ ಚೌಡಯ್ಯನ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇಟ್ಟು ವಿವಿಧ ಜಾನಪದ ಕಲಾತಂಡ ಹಾಗೂ ಪೂರ್ಣಕುಂಭಾಗಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕ ದೇವರಾಜು, ಮುಖಂಡರಾದ ಬಿ.ಎಸ್.ನಾಗರಾಜು, ಎಸ್.ಡಿ.ದಿಲೀಪ್ ಕುಮಾರ್‌,  ಮುರುಳಿಧರ್ ಹಾಲಪ್ಪ, ರೇಷ್ಮೆ ಮಂಡಳಿ ಅಧ್ಯಕ್ಷ ಗಂಗಾಧರ್ ಮಾತನಾಡಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಕೆ.ವೇಂಕಟೇಶ್, ಮುಖಂಡರಾದ ಭಾರತಿಹಿತೇಶ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ಬಿದರೆ, ಕೃಷ್ಣಸ್ವಾಮಿ, ಪವನ್ ಕುಮಾರ್, ಶ್ರೀನಿವಾಸ್, ಕುಮಾರ್ ನಿಟ್ಟೂರು, ಗಂಗಾಧರ್ ಸ್ವಾಮಿ, ಮಧು, ದಯನಂದ್,  ಬೆಸ್ತರ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರುಗಳು ಇತರರು ಇದ್ದರು. 

LEAVE A REPLY

Please enter your comment!
Please enter your name here