
ಗುಬ್ಬಿ : ತುಮಕೂರಿನ ಹಾಲು ಮುಂಬೈನಲ್ಲಿ ಮಾರಾಟವಾಗುತ್ತಿರುವುದರಿಂದ ತುಮುಲ್ ಲಾಭದತ್ತ ಹೆಜ್ಜೆ ಇಟ್ಟಿದೆ ಎಂದು ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ಹೇಳಿದರು.
ಪಟ್ಟಣದ ಕ್ಷೀರಭವನದ ಕೆ ಎಂ ಎಫ್ ಅವರಣದಲ್ಲಿ ವಿಶ್ವಮಹಿಳಾ ದಿನಾಚರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಹಿಂದೆ ನೂರು ವರ್ಷ ಬದುಕುತ್ತಿದ್ದ ಜನರು ಇಂದು ಚಿಕ್ಕ ವಯ್ಸುಸಿನಲ್ಲೇ ಹೃದಯ ಘಾತದಂತ ಕಾರಣಗಳಿಗೆ ಸಾವು ಆಗುತ್ತಿರುವುದು ಬೇಸರವಾಗುತ್ತದೆ. ಹಾಗಾಗಿ ನಾವು ಉಸಿರಾಡುವ ಗಾಳಿ, ಆಹಾರ ಉತ್ತಮವಾಗಿರಬೇಕು ಎಂದರು. ಸರಕಾರ ಗ್ಯಾರಂಟಿಗಳನ್ನು ನೀಡಿದ್ದು ಇದರಿಂದ ರಾಜ್ಯದ ಮಹಿಳೆಯರಿಗೆ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಹಲವು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಗ್ಯಾರಂಟಿ ಯೋಜನೆಗೆ ಸುಮಾರು 52000 ಕೋಟಿ ನೀಡಿದ್ದು ಇದರಿಂದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಹೆಚ್ಚಿನ ಅನುಕೂಲವಾಗಿದೆ.

ನಾನು ಕಳೆದ ಒಂಬತ್ತು ತಿಂಗಳ ಹಿಂದೆ ನಿರ್ದೇಶಕನಾಗಿ ಅಧ್ಯಕ್ಷನಾಗಿದ್ದೇನೆ ಅಲ್ಲಿರುವಂತಹ ಸಾಕಷ್ಟು ಸಮಸ್ಯೆಗಳ ಬಗ್ಗೆ ಅರಿತಿದ್ದು ಮುಂದಿನ ದಿನದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಲು ಬದ್ಧವಾಗಿದ್ದೇನೆ. ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಂತಹ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸವನ್ನು ಮಾಡುತ್ತಿಲ್ಲ ಅವರಿಗೆ ಅನುಭವದ ಕೊರತೆ ಇದ್ದು ಅದು ಯಾವ ರೀತಿ ಅವರು ಆಯ್ಕೆಯಾಗಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಬೇಸರವನ್ನು ಸಹ ವ್ಯಕ್ತಪಡಿಸಿದರು.
ಇನ್ನೂ ಗುಬ್ಬಿ ತಾಲೂಕಿಗೂ ಕೂಡ ಸಾಕಷ್ಟು ಅನುದಾನವನ್ನ ನೀಡುವುದಕ್ಕೆ ಶಾಸಕರು ಕೇಳಿದ್ದಾರೆ ಖಂಡಿತವಾಗಿ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ತಿಳಿಸಿದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ ಕನಕಪುರ ರಾಮನಗರ ಮಾಗಡಿ ಕುಣಿಗಲ್ ತಾಲೂಕುಗಳಿಗೆ ಹೆಚ್ಚಿನ ಅನುದಾನವನ್ನು ಸರಕಾರದಿಂದ ಕೊಡಿಸಿ ಹೆಚ್ಚಿನ ಅಭಿವೃದ್ಧಿ ಕೆಲಸ ವನ್ನು ಡಿ ಕೆ ಸುರೇಶ್ ಅವರೇ ಮಾಡುತ್ತಿದ್ದಾರೆ ಗುಬ್ಬಿ ತಾಲ್ಲೂಕಿಗೂ ಸಹ ತಾವು ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವಂತ ಕೆಲಸವನ್ನು ಮಾಡಿಕೊಡಬೇಕು, ಹಾಗೂ ಭಾರತಿ ಶ್ರೀನಿವಾಸ್ ಅವರು ನಿರ್ದೇಶಕರಾದ ಮೇಲೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು ಖಂಡಿತವಾಗಿ ನಿಮ್ಮೆಲ್ಲರ ಜೊತೆಯಲ್ಲಿ ನಾನು ಇರುತ್ತೇನೆ ತಾಲ್ಲೂಕಿನಲ್ಲಿ 1483 ಹಸುಗಳನ್ನು ಸಹ ನೀಡುತ್ತಿದ್ದು ಇದರಿಂದ ರೈತರಿಗೆ ಹೆಚ್ಚಿನ ಅನುಕೂಲ ವಾಗುತ್ತದೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರಿಗೆ ಕುಟುಂಬಗಳಿಗೆ ಪ್ರತಿನಿತ್ಯ ದುಡಿಮೆ ಮಾಡಲು ಹೆಚ್ಚಿನ ಸಹಕಾರಿ ಹೈನುಗಾರಿಕೆ ಎಂದು ತಿಳಿಸಿದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತೀ ಶ್ರೀನಿವಾಸ್ ಮಾತನಾಡಿ ನಾನು ಅಧಿಕಾರಕ್ಕೆ ಬಂದಾಗ ತಾಲ್ಲೂಕಿನಲ್ಲಿ 138 ಸಂಘವಿತ್ತು 31 ಉಪ ಕೇಂದ್ರಗಳು ಇತ್ತು ಈಗ 154 ಸಂಘಗಳು, 34 ಉಪ ಕೇಂದ್ರ ಗಳು ಕೆಲಸ ಮಾಡುತ್ತಿವೆ. ತಾಲ್ಲೂಕಿನಲ್ಲಿ 10415 ಉತ್ಪಾದಕರು ಹಾಲು ಹಾಕಿತ್ತಿದ್ದು,ಬೇಸಿಗೆಯ ಅವಧಿಯಲ್ಲಿಯೂ ಸಹ ಹೆಚ್ಚಿನ ಹಾಲು ಜಿಲ್ಲೆಯಲ್ಲಿ ಸಂಗ್ರವಾಗುತ್ತಿದೆ. ಇನ್ನೂ ಹಸುಗಳ ಸಾವಿನ ಪ್ರಮಾಣ ಬಹಳ ಕಡಿಮೆಯಾಗಿದೆ, ಇನ್ನೂ ದಾನಿಗಳು ಹಾಗೂ ಸಂಘದ ವತಿಯಿಂದ ಇದುವರೆಗೂ 30 ಕೌ ಲಿಫ್ಟ್ ಗಳನ್ನು ಸಹ ನೀಡಿದೆ. ಮುಂದಿನ ದಿನದಲ್ಲಿ ಶಾಸಕರು ಎರಡು ಕೌ ಆಂಬುಲೆನ್ಸ್ ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ,ಗುಬ್ಬಿಯ ಚಾಲುಕ್ಯ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಗುಬ್ಬಿ ಸೇರಿದಂತೆ ಇನ್ನಿತರೆ ಆಸ್ಪತ್ರೆ ಗಳಿಂದ ಉಚಿತ ಅರೋಗ್ಯ ತಪಸಣ ಶಿಬಿರ ಆಯೋಜನೆ ಮಾಡಿತ್ತು ಸಾವಿರಾರು ಸಾರ್ವಜನಿಕರು ಆಗಮಿಸಿ ಚಿಕಿತ್ಸೆ ಪಡೆದು ಕೊಂಡರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಕೆ ಆರ್ ವೆಂಕಟೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಜಿಲ್ಲಾ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಮಾಧಿಹಳ್ಳಿ ಪ್ರಕಾಶ್, ಚನ್ನಮ್ಮಲ್ಲಪ್ಪ,
ತಹಸಿಲ್ದಾರ್ ಬಿ ಆರತಿ, ತಾಲೂಕು ಕಾರ್ ನಿರ್ವಾಹಕ ಅಧಿಕಾರಿ ರಂಗನಾಥ್ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುಳಾದೇವಿ, ಮುಖಂಡರಾದ ಕೊಪ್ಪ ದೇವರಾಜು,ಚೇತನ್, ದರ್ಶನ್, ಡಾ. ನಾಗಭೂಷಣ್,ಡಾ. ಮುರುಳಿಧರ್,ಯೋಗೀಶ್, ಮದುವೆ ಮನೆ ಕುಮಾರ್,ಸೇರಿದಂತೇ ತಾಲ್ಲೂಕಿನ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ನಿರ್ದೇಶಕರು, ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.





