
ಗುಬ್ಬಿ : ಸ್ವಯಂ ಉದ್ಯೋಗಗಕ್ಕೆ ಯುವ ರೈತರು ಮುಂದಾಗಬೇಕು ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ತೊಂಗನಹಳ್ಳಿ, ಗ್ರಾಮದಲ್ಲಿ “ ಶ್ರೀ” ತೈಲ ಘಟಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸ್ವಯಂ ಉದ್ಯೋಗ ಮಾಡುವರು ಪ್ರಾಮಾಣಿಕವಾಗಿ, ಗುಣಮಟ್ಟದ ಪದಾರ್ಥಗಳನ್ನು ಉತ್ಪಾದಿಸಿದಗ ಮಾತ್ರ ಅಧಿಕ ಲಾಭಗಳಿಸಲು ಸಾಧ್ಯವಾಗುತ್ತದೆ.
ತಾಲೂಕಿನ ತೊಗನಹಳ್ಳಿ ಗ್ರಾಮದ ರೈತಮಹಿಳೆ ಬಿ.ಜೆ.ಪ್ರಮಯತೀಶ್ ಕೊಬ್ಬರಿ ಎಣ್ಣೆ ಗಾಣವನ್ನು ಮಾಡುವ ಮೂಲಕ ಇನ್ನಿತರ ರೈತರಿಗೆ ಈ ಮಾರ್ಗದರ್ಶಕರಾಗಿದ್ದಾರೆ ಮತ್ತು ಸ್ವ ಉದ್ಯೋಗಕ್ಕೆ ಮುಂದಾಗಿರುವುದು ಅತ್ಯಂತ ವಿಶೇಷತೆ ಎನಿಸಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ತುಮಕೂರು ಜಿಲ್ಲೆ ಎಂದರೆ ಅದು ಕಲ್ಪತರು ನಾಡು ಲಕ್ಷಾಂತರ ಹೆಕ್ಟರ್ ನಲ್ಲಿ ನಮ್ಮ ರೈತರು ತೆಂಗನ್ನು ಬೆಳೆಯುತ್ತಿದ್ದು ಅದನ್ನು ಕೇವಲ ಕೊಬ್ಬರಿಗೆ ಮಾತ್ರ ಸೀಮಿತ ಮಾಡಿ ತಿಪಟೂರಿನಂತಹ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಗಾಣದ ಎಣ್ಣೆಗಳು ಆರಂಭವಾಗಿದ್ದು, ಇದರ ಮೂಲಕ ಯುವಕರಿಗೆ ಸ್ವ ಉದ್ಯೋಗ ಸಿಗುತ್ತಿರುವುದು ಒಂದು ಕಡೆಯಾದರೆ ಲಕ್ಷಾಂತರ ಹೆಕ್ಟರ್ ನಲ್ಲಿ ಬೆಳೆದಿರುವಂತಹ ಕೊಬ್ಬರಿಗೆ ಕೇವಲ ಕೊಬ್ಬರಿ ಮಾರಾಟ ವಲ್ಲದೆ ಕೊಬ್ಬರಿ ಎಣ್ಣೆಯನ್ನು ಮಾಡುವಂತಹ ನವೀನ ಮಾದರಿ ಯಂತ್ರಗಳುಬಂದಿವೆ. ಹಸಿ ತೆಂಗಿನ ಕಾಯಿ ಎಣ್ಣೆಯನ್ನು ಉತ್ಪಾದಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಮಾರುಕಟ್ಟೆಯೂ ಸಹ ಹೆಚ್ಚುತ್ತದೆ ಎಂದರು.

ಚಾಲುಕ್ಯ ಆಸ್ಪತ್ರೆಯ ಸಿಇಒ ಡಾ.ಬಿ.ಎಂ.ನಾಗಭೂಷಣ್ ಎಣ್ಣೆ ಗಣಕ್ಕೆ ಚಾಲನೆ ನೀಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸರ್ಕಾರ ಸ್ವಯಂ ಉದ್ಯೋಗ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಬ್ಸಿಡಿ ನೀಡುತ್ತಿದ್ದು ಅವುಗಳನ್ನು ಯುವ ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಎಸ್.ಆರ್. ಎಂಟರ್‌ಪ್ರೈಸಸ್ ಗಾಣದ ಬಿ.ಜೆ. ಪ್ರೇಮ, ಯತೀಶ್ ಎಸ್. ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಪ್ರಾಧಾನ ಕಾರ್ಯದರ್ಶಿ ಸಿ.ಜಿ ಲೋಕೇಶ್,ಯುವ ಘಟಕದ ಶಿವಕುಮಾರ್, ಸತ್ತಿಗಪ್ಪ, ರವೀಶ್ , ಮುಖಂಡರಾದ ಟಿ .ಆರ್ ಸಿದ್ದರಾಮಯ್ಯ, ರತ್ನಮ್ಮ, ಕೃಷ್ಣೇಗೌಡ, ಲಕ್ಷ್ಮೀನಾರಾಯಣ, ಪುಟ್ಟಸ್ವಾಮಿ, ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರು, ರೈತ ಮುಖಂಡರು, ಗ್ರಾಮಸ್ಥರು ಮತ್ತಿತರರು ಇದ್ದರು.






