ಗುಬ್ಬಿ : ಯಾರೇ ಆಗಲಿ ಸರ್ಕಾರಕ್ಕೆ ಮುಜುಗರ ತರುವ ಗೊಂದಲಕಾರಿ ಹೇಳಿಕೆ ನೀಡಬಾರದು: ಶಾಸಕ ಎಸ್. ಆರ್. ಶ್ರೀನಿವಾಸ್
ತಾಲ್ಲೂಕಿನ ಹಲವೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆ ನೀಡಲು ನಾನು ತಯಾರಿಲ್ಲ. ವ್ಯಕ್ತಿ ಎಷ್ಟೇ ದೊಡ್ಡವರಾಗಲಿ ಚಿಕ್ಕವರಾಗಲಿ ಹೖಕಮಾಂಡ್ ತೀರ್ಮಾನಕ್ಕೆ ಬದ್ದರಾಗಿರಬೇಕು ಪದೇಪದೇ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಗೊಂದಲ ತರುವ ಹೇಳಿಕೆ ನೀಡಬಾರದು ಎಂದರು.
ನಾವು ಅಧಿವೇಶನಕ್ಕೆ ಹೋದಾಗ ಚೆಲುವಣ್ಣನ ರೂಂನಲ್ಲಿ ಸೇರುತ್ತೇವೆ ಹಾಗಂತ ಒಕ್ಕಲಿಗರು ಪ್ರತ್ಯೇಕ ಸಭೆ ನಡೆಸಿದರು ಎನ್ನುತ್ತಾರೆ.
ಬೆಳಗಾವಿ ಅಧಿವೇಶನ ವೇಳೆ ಸತೀಶ್ ಜಾರಕಿಹೊಳಿ ಶಾಸಕರುಗಳಿಗೆ ಔತಣ ನೀಡುತ್ತಾ ಬಂದಿದ್ದಾರೆ ಅದನ್ನೇ ಮಾಧ್ಯಮಗಳು ಏನೋ ದೊಡ್ಡ ಸುದ್ದಿ ಎನ್ನುವಂತೆ ಬಿಂಬಿಸುತ್ತವೆ ಅಷ್ಟೇ ಎಂದರು.
ಗುಬ್ಬಿ ತಾಲ್ಲೂಕಿನ ಗುಬ್ಬಿ – ಚೇಳೂರು ರಸ್ತೆಯ ಗೌರೀಪುರ ಗೇಟ್ – ಕೋಣನಕಲ್ಲು-ನಸರೀಪಾಳ್ಯ ವರೆಗಿನ ರಸ್ತೆಯನ್ನು ಎತ್ತಿನ ಹೊಳೆ ಯೋಜನಾವಲಯ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ಅಭಿವೃದ್ಧಿ ಪಡಿಸುವ ಯೋಜನೆ, ಹಾಗೂ ಹೇಮಾವತಿ ಇಲಾಖೆ ವತಿಯಿಂದ ಗುಬ್ಬಿ ತಾಲೂಕಿನ ಮಣ್ಣಮ್ಮ ದೇವಸ್ಥಾನದಿಂದ ಬೈಚೇನಹಳ್ಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ, ಹಾಗೂ ಚೌಕೋನಹಳ್ಳಿ ಗ್ರಾಮದಿಂದ ಲಕ್ಕೇನಹಳ್ಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ದಿ ಒಟ್ಟು 7.2 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿ ಬಿದರೆ ಪಂಚಾಯಿತಿಯ ಮುತ್ತಯ್ಯನಹಟ್ಟಿ 2.5 ಕೋಟಿ, ನಂದೀಹಳ್ಳಿ ಗೇಟ್ ನಿಂದ ಕಗ್ಗೆರೆ ರಸ್ತೆ, ಗೌರೀಪುರ -ನಿಂಬೆಕಟ್ಟೆ 2.5 ಕೋಟಿ, ನಲ್ಲೂರು ಹಟ್ಟಿ 2.5ಕೋಟಿ, ಚೇಳೂರು ಹಟ್ಟಿ ಕೋಡಿಪಾಳ್ಯ ರೋಡ್ 3 ಕೋಟಿ ಇನ್ನೂ ಹಲವು ಕಾಮಗಾರಿಗಳಿಗೆ ನಾನು ಅಧಿವೇಶನದಿಂದ ಬಂದ ಮೇಲೆ ಚಾಲನೆ ನೀಡುವುದಾಗಿ ತಿಳಿಸಿದರು.
ತಾಲ್ಲೂಕಿಗೆ ಸಾಕಷ್ಟು ಅನುದಾನ ಬಂದಿದ್ದು ಹೇಮಾವತಿ ಇಲಾಖೆ ವತಿಯಿಂದ 100 ಕೋಟಿ, ಸಿ ಎಂ ವಿಶೇಷ ಅನುದಾನ 50 ಕೋಟಿ, ಶಿರಾ ನೆಲ್ಲಿಗೆರೆ ರಸ್ತೆಗೆ 70 ಕೋಟಿ, ಈ ಹಿಂದೆ ಸಿಎಂ 25 ಕೋಟಿ ವಿಶೇಷ ಅನುದಾನ ನೀಡಿದ್ದರು ನಮ್ಮ ತಾಲ್ಲೂಕಿಗೆ ಹಂತ ಹಂತವಾಗಿ ಸಾಕಷ್ಟು ಅನುದಾನ ನಮ್ಮ ಸರ್ಕಾರ ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ಎಂ ಎಚ್ ಪಟ್ಟಣ ಗ್ರಾ ಪಂ ಅಧ್ಯಕ್ಷ ಯೋಗೀಶ್ ಗೌಡ, ಪಿಡಿಓ ಶೇಖರ್, ಇಂಜಿನಿಯರ್ ಗಳಾದ ಸುರೇಶ್,ಗುತ್ತಿಗೆದಾರರಾದ ಕುಮಾರ್,ಅಶೋಕ್ ಮುಖಂಡರಾದ ಕೃಷ್ಣೋಜಿರಾವ್, ಯತೀಶ್, ಮೋಹನ್, ಶಿವಾಜಿರಾವ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.






