ಗುಬ್ಬಿ : ಪರಂಪರೆ ಮತ್ತು ಆಧುನಿಕತೆಗೆ ಎಚ್.ಎಸ್. ವೆಂಕಟೇಶಮೂರ್ತಿ ಅವರ ಕೊಡುಗೆ ಅಪಾರವಾಗಿದ್ದು ಕಾವ್ಯವು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಪರಂಪರೆಯ ಜ್ಞಾನವನ್ನು ಸಮಕಾಲೀನ ಸಂದರ್ಭದೊಂದಿಗೆ ಸಂಘರ್ಷಿಸುತ್ತಾ, ಆಧುನಿಕತೆಗೆ ಹೊಸ ಆಯಾಮ ನೀಡಿದ್ದಾರೆಂದು ನಿವೃತ್ತ ಪ್ರಾಧ್ಯಾಪಕ ಡಾ. ನರಸಿಂಹಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಎಚ್.ಎಸ್. ವೆಂಕಟೇಶಮೂರ್ತಿರವರ ಸಾಹಿತ್ಯ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಸಮಾಜ ಸಂಕೀರ್ಣವಾಗುತ್ತಿದ್ದು, ಮೌಲ್ಯಗಳನ್ನು ಕಳೆದುಕೊಂಡು ಸಂಘರ್ಷಮಯ ಸಂಕೀರ್ಣ ಸಮಾಜಕ್ಕೆ ಎಚ್ಚೆಸ್ವಿಯವರ ಕಾವ್ಯ ಓದುವುದರ ಮೂಲಕ ಸಹಿಷ್ಣುತೆಯ ಮೌಲ್ಯಗಳ ಸಾಹಿತ್ಯಕ ದಿವ್ಯೌಷದವಾಗಿದ್ದು ವಿದ್ಯಾರ್ಥಿಗಳು ಗ್ರಹಿಸುವುದರ ಮೂಲಕ ಮೌಲ್ಯಗಳನ್ನು ಗಳಿಸಬೇಕು ಎಂದು ಹೇಳಿದರು.
ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಓ.ನಾಗರಾಜು ಬಮಾತನಾಡಿ, ವಿದ್ಯಾರ್ಥಿಗಳು ಒಳ್ಳೆ ಹವ್ಯಾಸಗಳನ್ನು ಬೆಳೆಸಿ ಕೊಳ್ಳುವುದರ ಮೂಲಕ ಪರಿಪೂರ್ಣ ನಾಗರಿಕರಾಗಬೇಕು. ಬದುಕಿನ ಮೌಲ್ಯಗಳನ್ನು ಎಚ್ಚೆಸ್ವಿಯವರ ಕಾವ್ಯಗಳ ಅಧ್ಯಯನ ಮಾಡುವುದರ ಮೂಲಕ ಮೌಲ್ಯಗಳನ್ನು ಸ್ಪರ್ಷಿಸಬೇಕು. ಆಗ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ ಎಂದರು.
ಪ್ರಾಂಶುಪಾಲ ಡಾ.ಪ್ರಸನ್ನ ಮಾತನಾಡಿ, ವಿದ್ಯಾರ್ಥಿದೆಸೆಯಲ್ಲಿಯೆ ಸಾಹಿತ್ಯದ ಓದು ಅವಶ್ಯಕತೆಯಿದೆ, ವಿಶೇಷ ಉಪನ್ಯಾಸಗಳ ಮೂಲಕ ಹೆಚ್ಚಿನ ಕಲಿಕೆಯನ್ನು ಗಳಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಜ್ಯೋತಿಲಕ್ಷ್ಮಿ.ಹೆಚ್, ಕಾಳಪ್ಪ ಬಡಿಗೇರ, ಕಾಲೇಜಿನ ಅಧ್ಯಾಪಕರು, ಬೋಧಕೇತರು, ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು