ಗುಬ್ಬಿ : ನಾಟಕಗಳು ಸಮಾಜದಲ್ಲಿ ನಡೆಯುವ ಘಟನೆಗಳು, ಅನಿಷ್ಟ ಪದ್ಧತಿಗಳು ಮತ್ತು ಮಾನವೀಯ ಮೌಲ್ಯಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸುತ್ತವೆ  ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಕಸಬ ಹೋಬಳಿ ಚಿಕ್ಕೋನಹಳ್ಳಿ ಜ್ಯೋತಿನಗರದ ಶ್ರೀ ಅಲದಕೊಂಬೆಯಮ್ಮದೇವಿ ಗದ್ದಿಗೆ ಮಂಟಪದ ಹತ್ತಿರ ಶ್ರೀ ಅಗ್ನಿಬನ್ನಿರಾಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತೋತ್ಸವ ಅಂಗವಾಗಿ ಏರ್ಪಡಿಸಿದ್ದ ಕುರುಕ್ಷೇತ್ರ ಎಂಬ ಪೌರಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತವೆ. ನಾಟಕದಿಂದ ಧರ್ಮ ಯಾರಕಡೆ ಇದೆಯೋ ಅವರಿಗೆ ಜಯವಾಗುತ್ತದೆ ಎಂಬುದನ್ನು ತಿಳಿಯಬಹುದು. ಇತಿಹಾಸ ಮತ್ತು ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಲು ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ‌ಕುಮಾರ್ ಮಾತನಾಡಿ, ಕುರುಕ್ಷೇತ್ರದಲ್ಲಿ ಅರ್ಜುನನ ಸಂಶಯಗಳು ಪೂರ್ತಿಯಾಗಿ ನಿವಾರಣೆಯಾಗದಿದ್ದಾಗ, ಕೃಷ್ಣನು ತನ್ನ ವಿಶ್ವರೂಪವನ್ನು ತೋರುತ್ತಾನೆ. ಸೃಷ್ಟಿಯ ಸಮಸ್ತವೂ ತನ್ನಲ್ಲೇ ಅಡಗಿದೆ ಮತ್ತು ತಾನೇ ಕಾಲಸ್ವರೂಪಿಯಾಗಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದೇನೆ ಎಂದು ತೋರಿಸಿಕೊಡುತ್ತಾನೆ. ನಂತರ ಅರ್ಜುನನು ತನ್ನ ಗಾಂಡೀವ ಧನುಸ್ಸನ್ನು ಎತ್ತಿ ಹಿಡಿದು ಯುದ್ಧಕ್ಕೆ ಸಿದ್ಧನಾಗುತ್ತಾನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಯೋಗಾನಂದ್ ಕುಮಾರ್, , ಸೋಮಶೇಖರ್, ರಾಜಣ್ಣ, ಬಲರಾಮಣ್ಣ,  ಹುಚ್ಚಣ್ಣ, ಯೋಗೀಶ್,  ಸಿದ್ದೇಶ್, ಸಂಗೀತ ನಿರ್ದೇಶಕ ಸಿ. ರುದ್ರೇಶ್, ವಿರೂಪಾಕ್ಷಯ್ಯ,ಕಲಾವಿದರಾದ ಆರ್.ರವಿಕುಮಾರ್, ಕೆ.ಎಸ್.ಕೃಷ್ಣಮೂರ್ತಿ,  ಕೆ.ದಯಾನಂದ್, ಪುಟ್ಟರಾಜು,ಯಜಮಾನ್ ರಾಜಣ್ಣಗೌಡ್ರು,  ಲಕ್ಷ್ಮೀನರಸಿಂಹಗೌಡ್ರು,  ಹೊನ್ನಪ್ಪಾಜಿಗೌಡ್ರು, ಮುಳಕಟ್ಟೆಗೌಡ್ರು, ಸಣ್ಣಸಿದ್ದೇಗೌಡ್ರು, ಹಾಗೂ ಕಲಾವಿದರು, ಕಲಾಭಿಮಾನಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here