ಗುಬ್ಬಿ : ತಾಲ್ಲೂಕಿನ ಸಿಎಸ್ ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ನಾರಸಿಂಹಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ನಾರಸಿಂಹಸ್ವಾಮಿಯ ಲಕ್ಷದೀಪೋತ್ಸವ ಅಂಗವಾಗಿ ಶ್ರೀ ನಾರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಆನೆಯ ಅಂಬಾರಿ ಮೇಲೆ ಪ್ರತಿಷ್ಠಾಪಿಸಿ ಅಬಾರಿ ಉತ್ಸವ ಮಾಡಲಾಯಿತು.
ಲಕ್ಷದೀಪೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ನಾರಸಿಂಹಾಂಜನೇಯಸ್ವಾಮಿಗೆ ಪುಣ್ಯಾರಾಧನೆ ಮತ್ತು ಹೋಮ, ಅಭಿಷೇಕ ಮತ್ತು ಆರತಿ ಪೂಜೆ ಸೇರಿದಂತೆ ನಾನು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಗ್ರಾಮದ ಮುಖಂಡ ಎಂ.ಎಚ್ ನಾಗರಾಜು ಮಾತನಾಡಿ, ಇತಿಹಾಸ ಪ್ರಸಿದ್ಧ ಮಣಿಕುಪ್ಪೆ ಶ್ರೀ ನಾರಸಿಂಹ ಆಂಜನೇಯಸ್ವಾಮಿ ದೇವಾಲಯದಲ್ಲಿ ಈ ವರ್ಷ ಲಕ್ಷ ದೀಪೋತ್ಸವ ಅಂಗವಾಗಿ ಅಂಬಾರಿ ಉತ್ಸವವನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಲಕ್ಷ ದೀಪೋತ್ಸವದ ಅಂಗವಾಗಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪಟೇಲ್ ಚಂದ್ರಶೇಖರ್ ಮಾತನಾಡಿ ನಮ್ಮ ಗ್ರಾಮದಲ್ಲಿ ಎಂದು ನಡೆಯದ ಆಂಜನೇಯ ಸ್ವಾಮಿಯ ಅಂಬಾರಿ ಉತ್ಸವ ಇಂದು ನಡೆಯಿತು. ಗ್ರಾಮದ ಎಲ್ಲಾ ಸಾರ್ವಜನಿಕರು ದೇವರ ಕೃಪೆಗೆ ಪಾತ್ರರಾಗಿ ಆನಂದಿಸಿದರು ಎಂದರು.
ದೇವಸ್ಥಾನದಿಂದ ಹನುಮ ಮಾಲಾಧಾರಿಗಳು ಮತ್ತು ಆಂಜನೇಯಸ್ವಾಮಿ ಭಕ್ತಾಧಿಗಳು ಹಾಗೂ ಗ್ರಾಮಸ್ಥರಿಂದ ಭಜನೆ ಮಾಡಲಾಯಿತು.
ಶ್ರೀ ಕಾಡುಮಲ್ಲೆಶ್ವರಸ್ವಾಮಿಗೆ ಮತ್ತು ಶ್ರೀ ಆದಿಭವನಗಿರಿ ಸ್ವಾಮಿಗೆ ಅಭಿಷೇಕ ಮತ್ತು ಮಹಾಮಂಗಳಾರತಿ ಮಾಡಲಾಯಿತು.

ಅಂಬಾರಿ ಮರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ವಿವಿಧ ಜನಪದ ಕಲಾ ತಂಡಗಳಾದ ವೀರಗಾಸೆ, ಚಿಟ್ಟಿಮೇಳ, ಪೂಜಾ ಕುಣಿತ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಕೇರಳದ ಪ್ರಸಿದ್ದ ವೈಲಿನ್ ಚಂಡೆ, ದೇವರ ಕುಣಿತ ಹಾಗೂ ಮಂಗಳವಾದ್ಯಗಳೊಂದಿಗೆ ಊರಿನ ರಾಜಬೀದಿಗಳಲ್ಲಿ ಶ್ರೀ ನಾರಸಿಂಸ್ಹಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ಅಂಬಾರಿ ಮೇಲೆ ಪ್ರತಿಷ್ಟಾಪಿಸಿ ಮೆರವಣಿಗೆಯನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ನಾರಯಣ್, ಸಂಜೀವಯ್ಯ, ರಾಜಣ್ಣ, ಗಂಗಹನುಮಯ್ಯ, ಶಿವಕುಮಾರ್, ಕಾಳೇಗೌಡ್ರು,ಸುರೇಶ್, ರಾಮಕೃಷ್ಣ, ಜಗದೀಶ್, ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ಸಹಸ್ರಾರು ಭಕ್ತರು ಲಕ್ಷದೀಪೋತ್ಸವ ಹಾಗೂ ಅಂಬಾರಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.





