ತುಮಕೂರು: ನಮ್ಮೂರ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು, ಸ್ಥಳೀಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಈ ಶಾಲೆಯ ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಬೇಕು ಎಂದು ಶಾಲೆಯ ಹಿರಿಯವಿದ್ಯಾರ್ಧಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ದೊಡ್ಡೇರಿಯ ಸಿದ್ದರಾಮಣ್ಣ ಕರೆಕೊಟ್ಟರು. 

 ತಾಲ್ಲೂಕು ಬೆಳ್ಳಾವಿ ಕರ್ನಾಟಕ ಪಭ್ಲಿಕ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಾವೆಲ್ಲಾ ಓದುವಾಗ ನಡೆದುಕೊಂಡು ಬಂದು ಶಾಲೆಯಲ್ಲಿ ಓದುತ್ತಿದ್ದೆವು. ತಂದೆ ತಾಯಿಗೆ ಮನೆಕೆಲಸದಲ್ಲಿ ಕೈ ಜೋಡಿಸುತ್ತಿದ್ದೆವು. ಈಗಿನ ಮಕ್ಕಳಲ್ಲಿ ಆ ಭಾಂಧವ್ಯ ಕುಸಿಯುತ್ತಿದೆ. ಇಂತಹ ಮಕ್ಕಳಿಗೆ ನೀತಿ ಶಿಕ್ಷಣ ಪಠ್ಯವಾಗಬೇಕು. ಈ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಉನ್ನತಹುದ್ದೆಯಲಿದ್ದು, ಇಂತಹವರು ಈಗಿನ ಶಾಲೆಯಲ್ಲಿ ಓದುವ ಮಕ್ಕಳ ಕಲಿಕೆಗೆ ನೆರವಾಗಬೇಕಿದೆ ಎಂದರು.

ಕುವೆಂಪು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸಿದ್ದಲಿಂಗಪ್ಪ ಮಾತನಾಡಿ ಸರ್ಕಾರ ದಾನಿಗಳ ಹಾಗೂ ಹಿರಿಯವಿದ್ಯಾರ್ಥಿಗಳ ನೆರವಿನಲ್ಲಿ ಶಾಲೆಯ ಕಲಿಕಾ ಪರಿಸರ ಸುಧಾರಿಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಅಯೋಚನೆಗೆ ನಮ್ಮ ಶಾಲೆ ಬಗ್ಗೆ ಪ್ರತಿಯೊಬ್ಬರು ಗೌರವ ಇಟ್ಟುಕೊಳ್ಳಬೇಕು. ಕುವೆಂಪು ಶಾಲೆ ಶತಮಾನ ಪೂರೈಸಿದೆ. ಇಲ್ಲಿ ಕಲಿತವರು ರಾಜ್ಯದಲ್ಲಿ ಮಾದರಿ ವಿದ್ಯಾರ್ಥಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಿನ ಮಕ್ಕಳು ದೂರಕ್ಕೆ ಹೋಗಿ ಅಲೆದು ತಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿಕೊಳ್ಳದೆ, ಈ ಶಾಲೆಯಲ್ಲಿಯೇ ಓದು ಮುಂದುವರಿಸಿ ಎಂದರು. 

 ಶಿಕ್ಷಕ ಪ್ರಸಾದ್ ಮಾತನಾಡಿ, ನಮ್ಮಿಂದಲೇ ದುಬಾರಿ ಶುಲ್ಕ ಪಡೆಯುವ ಖಾಸಗಿ ಶಾಲೆಗಳು ತಮ್ಮ ಆಕರ್ಷಣೀಯ ಕಟ್ಟಡ ಕಟ್ಟಿಸಿಕೊಂಡು, ವಿದ್ಯಾರ್ಥಿಗಳನ್ನು ಸೆಳೆಯುತ್ತಾರೆ. ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಕೈಜೋಡಿಸಿ ನಮ್ಮ ಸರ್ಕಾರಿ ಶಾಲೆಯನ್ನೇ ಅಭಿವೃದ್ಧಿಗೊಳಿಸಿದರೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಸಾಧ್ಯವಿದೆ ಎಂದರು. 

ಕಾರ್ಯಕ್ರಮದಲ್ಲಿ  ಪ್ರಾಚಾರ್ಯ ಎಂ. ಪತೇಅಹಮದ್, ಹಿರಿಯ ವಿದ್ಯಾರ್ಥಿಗಳಾದ ಚಿಕ್ಕ ಬೆಳ್ಳಾವಿ ಶಿವಣ್ಣ, ಜಯಕುಮಾರ್, ಮಹೇಶ್, ಪ್ರಸಾದ್, ಚೇತನ್, ಹನುಮಂತರಾಜು, ಮಲ್ಲಿಕಾರ್ಜುನ್, ಉಪನ್ಯಾಸಕರಾದ ಬಿ ಎನ್ ಶಿವಕುಮಾರ್, ಎಂಬಿ ಸುಜಾತ, ಟಿ ಹೆಚ್. ಪಂಚಾಕ್ಷರಯ್ಯ, ಶಿಕ್ಷಕರಾದ ಟಿ ಎನ್ ಶಾಂತಕುಮಾರಿ, ನಂಜುಂಡರಾವ್, ಸುಮಯಾ ತರನಂ, ವಿಜಯಮ್ಮ, ಮಂಜುಳಾ ವಿಭೂತಿಮಠ್, ಮೋಹನ್ ರಾಜ್, ರೇಣುಕಾ ಇತರರು ಇದ್ದರು. 

LEAVE A REPLY

Please enter your comment!
Please enter your name here