ಗುಬ್ಬಿ : ತಾಲೂಕಿನ ಕಸಬ ಹೋಬಳಿ  ಲೆಕ್ಕೇನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ತುಳಸಿರಂಗನಾಥಸ್ವಾಮಿಯ ಸೂರ್ಯಮಂಡಲ ರಥೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ಜನವರಿ. 25 ರಂದು  ಭಾನುವಾರ 1:35ಕ್ಕೆ ನಡೆಯಲಿದೆ ಎಂದು ಗ್ರಾಮದ ಭಕ್ತರು ತಿಳಿಸಿದ್ದಾರೆ.

 ಜ 24ರಂದು ಶನಿವಾರ ಬೆಳಿಗ್ಗೆ ಶ್ರೀತುಳಸಿರಂಗನಾಥಸ್ವಾಮಿಯ ಮೂಲ ದೇವರಿಗೆ ಗುರುಪ್ರಾರ್ಥನೆ ಯೊಂದಿಗೆ ಪಂಚಾಮೃತ ಅಭಿಷೇಕ,  ಕ್ಷೀರಾಭಿಷೇಕ, ರುದ್ರಾಭಿಷೇಕ,  ಬಿಲ್ವಾರ್ಚನೆ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ನಂತರ  ಮಹಾಮಂಗಳಾರತಿ ತೀರ್ಥ ಪ್ರಸಾದ ನಡೆಯುತ್ತದೆ.

ಸಂಜೆ 6:30ಕ್ಕೆ ಗ್ರಾಮದ ರಾಜಬೀದಿಯಲ್ಲಿ ವಿವಿಧ ಜನ ಪದ ಕಲಾ ತಂಡದೊಂದಿಗೆ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ಕೆ ಬಂದ ಭಕ್ತಾದಿಗಳಿಗೆ ಅನ್ನದಾಸಹ ಏರ್ಪಡಿಸಲಾಗಿ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here