
ಗುಬ್ಬಿ : ಮಗುವಿನ ಶೈಕ್ಷಣಿಕ ಪ್ರಗತಿ ಮತ್ತು ನಡವಳಿಕೆಯ ಬಗ್ಗೆ ಪೋಷಕರು ಮತ್ತು ಶಿಕ್ಷಕರು ನಿರಂತರವಾಗಿ ಚರ್ಚಿಸುತ್ತಿರಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ನಂಜೇಗೌಡ ತಿಳಿಸಿದರು.

ತಾಲ್ಲೂಕಿನ ಸಿಎಸ್ ಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಹಾಗೂ ಕಲಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ತಂದೆ-ತಾಯಿ, ಶಿಕ್ಷಕರು ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕಾರದ ಜೀವನದಲ್ಲಿ ಮೈಗೂಡಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕು. ಬಾಲ್ಯದಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ತಾಳ್ಮೆಯಂತಹ ಗುಣಗಳನ್ನು ಕಲಿಸಬೇಕು. ಕಡಿಮೆ ವಯಸ್ಸಿನಲ್ಲಿ ಕಲಿತ ಮೌಲ್ಯಗಳು ಜೀವನಪೂರ್ತಿ ಅವರ ಜೊತೆಗಿರುತ್ತವೆ.
ಸಿಎಸ್ ಪುರದಲ್ಲಿ ಡಿಗ್ರಿ ಕಾಲೇಜು, ಪಿಯು ಕಾಲೇಜು ಇರುವುದರಿಂದ ಪೋಷಕರು ನಿಮ್ಮ ಗ್ರಾಮದ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದರೆ ಕಾಲೇಜು ಮುಂದಿನ ದಿನದಲ್ಲಿ ಉಳಿಯುತ್ತದೆ. ಇಲ್ಲವಾದರೆ ಕಾಲೇಜು ಮುಚ್ಚುವ ಹಂತ ತಲುಪುತ್ತದೆ. ಒಂದು ಬಾರಿ ಮಂಜೂರು ಮಾಡಿಸಿಕೊಂಡ ಕಾಲೇಜುಗಳನ್ನು ಬಿಟ್ಟರೆ ಮತ್ತೊಂದು ಬಾರಿ ಮಂಜೂರು ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸ್ಥಳೀಯರು ಕಾಲೇಜುಗಳು ಉಳಿಯಲು ಪೋಷಕರು ವಿದ್ಯಾರ್ಥಿಗಳು ಸಹಕರಿಸಬೇಕು.ಸರ್ಕಾರಿ ಶಾಲೆಯು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ, ಶಾಲೆ ತನ್ನದೇ ಆದಂತಹ ಚಾಪು ಮೂಡಿಸಬೇಕಾದರೆ ಉತ್ತಮ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗದವರು ಇದ್ದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.

ಉಪಪ್ರಾಂಶುಪಾಲ ಗೋವಿಂದರಾಜು ಮಾತನಾಡಿ, ಎಲ್ ಕೆ ಜಿ ಯಿಂದ 12ನೇ ತರಗತಿಯ ಒಂದೇ ಸೂರಿನಲ್ಲಿ ದೊರೆಯುವುದರಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮಾರು ಹೋಗದೆ ಕೆಪಿಎಸ್ ಶಾಲೆಗೆ ಸೇರಿಸಿದರೆ ಇಲ್ಲಿಯೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಾರೆ. ಈ ನಿಟ್ಟಿನಲ್ಲಿ ಸ್ಥಳೀಯರು ಹೆಚ್ಚು ಮಕ್ಕಳನ್ನು ನೊಂದಣಿ ಮಾಡಿಸಬೇಕು. ಶಾಲೆಯಲ್ಲಿ ಉತ್ತಮ ರೀತಿಯ ಸೌಲಭ್ಯಗಳು ಇರುವುದನ್ನು ಕಾಣಬಹುದು.ಆದ್ದರಿಂದ ಈ ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಖರ್ಚಿಲ್ಲದೆ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ.ಪೋಷಕರ ಮಕ್ಕಳು ಬಗ್ಗೆ ನಿರಂತರ ನಿಗಾ ಇಟ್ಟು ಮನೆಯಲ್ಲಿ ಅಭ್ಯಾಸ ಮಾಡುವುದನ್ನು ಕಳಿಸಬೇಕು ಆಗ ಶಾಲೆಯಲ್ಲಿ ಕಳಿಸಿದ ವಿದ್ಯೆಯು ಮಕ್ಕಳ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಪೋಷಕರು ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.
.

ಕಾರ್ಯಕ್ರಮದಲ್ಲಿ ವಿ.ಎಸ್ ಎಸ್ ಎನ್ ಅಧ್ಯಕ್ಷ ಜಿ.ಪಿ. ಬಸವರಾಜು (ಚೌಟ್ರಿ ಕುಮಾರ್), ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಎನ್. ಗಿರೀಶ್,ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಲಕೃಷ್ಣ,ಮುಖ್ಯ ಶಿಕ್ಷಕಿ ಗಂಗಮ್ಮ, ತಾಲ್ಲೂಕು ಪಂಚಾಯಿ ಮಾಜಿ ಸದಸ್ಯ ಬಾನುಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಮಹಾಲಕ್ಷ್ಮಮ್ಮ, ಲಕ್ಷ್ಮಮ್ಮ, ಸದಾಶಿವಕುಮಾರ್, ಸಾವಿತ್ರಮ್ಮ, ಅರುಣಿ, ಪಂಕಜನಾರಾಯಣ್, ಸಾವಿತ್ರಮ್ಮ, ಮುಖಂಡರಾದ. ಸುರೇಶ್,ರಘು, ಗುರುಮೂರ್ತಿ, ಮಹಾದೇವಯ್ಯ, ಕೆಂಪರಾಜು,ಗಂಗರಾಜು, ಜಯರಾಮು, ಕೃಷ್ಣಮೂರ್ತಿ, ಸೈಯದ್ ಸಾದಿಕ್ ಪಾಸ, ಗಂಗಾಧರ್, ದೇವರಾಜು, ಶಿಕ್ಷಣ ಇಲಾಖೆಯ ಟಿಪಿಒ ರಮೇಶ್, ಮಂಜುನಾಥ್, ಶಿಕ್ಷಕ ಶಶಿಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು,ಬಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಎಸ್ ಡಿ ಎಂ ಸಿ ಪದಾಧಿಕಾರಿಗಳು ಇತರರು ಇದ್ದರು






