ಗುಬ್ಬಿ: ವಾಸಣ್ಣನವರ ದಾರಿ ಹಿಡದು ನಾನು ನನ್ನ ಕ್ಷೇತ್ರಕ್ಕೆ ವಿ. ಸೋಮಣ್ಣನವರನ್ನು ಭೇಟಿ ಮಾಡಿ ಅಭಿವೃದ್ಧಿ ಕೆಲಸಕ್ಕೆ ಅನುದಾನವನ್ನು ಹಾಕಿಸಿಕೊಳ್ಳುತ್ತೇನೆ ಎಂದು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್ ಹೇಳಿದರು.
ತಾಲೂಕಿನ ಹೇರೂರು ಗ್ರಾಮದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ಏರ್ಪಡಿಸಿದ್ದ ಗುಬ್ಬಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಹಾಗೂ ಸದಸ್ಯರಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಚೆಕ್ ವಿತರಣೆ ಹಾಗೂ ಕಾರ್ಯದರ್ಶಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣನವರು ಮಧುಗಿರಿ ಕೊರಟಗೆರೆ ಭಾಗದಲ್ಲಿ ರೈಲ್ವೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಭಾರತಿ ಶ್ರೀನಿವಾಸ್ ರವರು ಹೆಚ್ಚು ಕೆಲಸ ಮಾಡುತ್ತಾರೆ.ಅವರು ನಮ್ಮ ತಾಲ್ಲೂಕಿನ 28 ಹೊಸ ಡೈರಿಗಳನ್ನು ಮಾಡಬೇಕು ಎಂಬ ಕನಸನ್ನು ಇಟ್ಟು ಕೊಂಡು ಪ್ರತಿ ಸಭೆಯಲ್ಲೂ ಚರ್ಚೆ ಮಾಡುತ್ತಿದ್ದಾರೆ.
ಒಂದು ಲೀಟರ್ ಹಾಲಿಗೆ 2 ರೂ ಹೆಚ್ಚಿಗೆ ಮಾಡಿದ್ದರಿಂದ ಒಕ್ಕೂಟಕ್ಕೆ ಲಾಸ್ ಆಗುತ್ತಿದೆ.
ನಂಜುಂಡಪ್ಪ ವರದಿ ಪ್ರಕಾರ ಪಾವಗಡ ತಾಲೂಕು ಬೀಕರ ಬರಗಾಲದಲ್ಲಿ ಇದೆ ಎಂದಿದ್ದರು ಈಗ ಅಲ್ಲಿನ ರೈತರು ಚಿಕ್ಕನಾಯಕನಹಳ್ಳಿ, ಗುಬ್ಬಿ,ಶಿರಾ ತಾಲೂಕಿನಂತೆ ಹತ್ತಿರ ಬರುತ್ತಿದ್ದಾರೆ.
ನಾನು ಡಿಸಿಸಿ ಬ್ಯಾಂಕ್ ನಿರ್ದೇಕನಾಗಿ ಆಯ್ಕೆಯಾಗಿರುವುದರಿಂದ ತಾಲ್ಲೂಕಿಗೆ 25 ಹಸು ಕೊಡಿಸುವುದಾಗಿ ತೀರ್ಮಾನಿಸಿದ್ದೇನೆ. ಮಹಿಳೆಯರಿಗೆ ವಿಶೇಷವಾಗಿ ಮಹಿಳಾ ಸಂಘ ರಚನೆ ಮಾಡಲು ಸೂಚನೆ ನೀಡಿದ್ದೇನೆ.
ಗುಬ್ಬಿ ಪಶು ಆಹಾರ ಘಟಕದಲ್ಲಿ ಗುಣಮಟ್ಟದ ಫೀಡ್ಸ್ ಕೊಡುತ್ತಿಲ್ಲ ಎಂದು ಪ್ರತಿ ಸಭೆಯಲ್ಲಿಯೂ ಚರ್ಚೆ ನಡೆಯುತ್ತಿದೆ. ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ,
ಬಡವರ ಜೀವನಕ್ಕೆ ಹಾಧಾರವಾಗಿರುವ ಹೈನುಗಾರಿಕೆಯನ್ನು ಪ್ರತಿಯೊಬ್ಬರು ಅಭಿವೃದ್ಧಿ ಪಡಿಸಬೇಕು ನಿಮ್ಮ ಭಾವನೆಗಳಿಗೆ ಸ್ಪಂದಿಸಲು ಜನಾನುರಾಗಿ ಶಾಸಕ ವೆಂಕಟೇಶ್ ಇದ್ದಾರೆ. 60 ವರ್ಷ ತುಂಬಿದ ಕಾರ್ಯದರ್ಶಿಗಳು ಇದ್ದರೆ ಆ ಡೈರಿಗೆ ಏನೇ ಆದರೂ ನೀವೇ ಜವಾಬ್ದಾರರಾಗಬೇಕಾಗುತ್ತದೆ. ಎಲ್ಲಾ ಹಾಲು ಉತ್ಪಾದಕರು ಡೈರಿಗೆ ಹಾಲನ್ನು ಹಾಕುವ ಮೂಲಕ ಒಕ್ಕೂಟವನ್ನು ಬೆಳೆಸಲು ಸಹಕಾರ ನೀಡಬೇಕು. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 25- 30 ವರ್ಷ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ ಮೇಲೆ ಬರಿ ಕೈನಲ್ಲಿ ಮನೆಗೆ ಹೋದರೆ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಒಕ್ಕೂಟವು 5ಲಕ್ಷ ಕೊಟ್ಟು ಕಳಿಸಿದರೆ ನಿವೃತ್ತ ಕಾರ್ಯದರ್ಶಿಗಳು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಎಲ್ಲಾ ರೈತರು ಹೈನುಗಾರಿಕೆ ಮಾಡಿ ಹಾಲನ್ನು ಡೈರಿಗೆ ಹಾಕುವುದರಿಂದ ದೇಶದ ಜಿಡಿಪಿಯು ಹೆಚ್ಚಳವಾಗಲು ಸಹಕಾರಿಯಾಗುತ್ತದೆ.
ಒಕ್ಕೂಟವು ನಿರಂತರ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ ನಿವೃತ್ತಿ ಹೊಂದಿರುವ ಕಾರ್ಯದರ್ಶಿಗಳಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಇಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನಿವೃತ್ತಿ ಹೊಂದಿದ ಎಲ್ಲರ ಜೀವನವು ಸುಖಮಯವಾಗಿರಲಿ ಎಂದು ಹಾರೈಸುತ್ತಾ ನಿವೃತ್ತಿ ವೇತನ 1 ಲಕ್ಷ ಇರುವುದನ್ನ 5 ಲಕ್ಷಕ್ಕೆ ಹೆಚ್ಚಳ ಮಾಡಲು ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಿಸಲಾಗುತ್ತದೆ. ಹಾಲು ಉತ್ಪಾದಕ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಾಯ ದನವನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚು ಓದಿ ಉತ್ತಮ ಹುದ್ದೆಯನ್ನು ಅಲಂಕರಿಸಬೇಕು. ಹಾಲನ್ನು ಡೈರಿಗೆ ಹಾಕುವ ಕುಟುಂಬದವರು ಅನಾರೋಗ್ಯದಿಂದ ಇದ್ದಾರೆ ಅವರಿಗೆ 25,000 ರೂಗಳು, ಸದಸ್ಯರು ಮರಣ ಹೊಂದಿದರೆ 50,000 ರೂಗಳನ್ನು ನೀಡಲಾಗುತ್ತದೆ. ಕಾಮಧೇನು ಚಿಕಿತ್ಸೆಗೆ ಸೌಲಭ್ಯಗಳನ್ನು ನೀಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಮ್ಮ ಉದ್ದೇಶ ಹತ್ತು ಹಸು ಸಾಕುವವರು 100 ವರ್ಷ ಸಾಕಾಗಬೇಕು. ನಂದಿನಿ ಡೈರಿಗೆ ಹಾಲನ್ನು ಹಾಕುವ ಮೂಲಕ ಒಕ್ಕೂಟಕ್ಕೆ ಅಭಿವೃದ್ಧಿಗೆ ಸಹಕರಿಸಿ, ಒಕ್ಕೂಟದಿಂದ ಉತ್ಪತ್ತಿಯಾಗುವ ನಂದಿನಿ ಬ್ರಾಂಡ್ ಉತ್ಪನ್ನಗಳನ್ನು ಖರೀದಿ ಮಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 85ಕ್ಕೂ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ 1,85,000 ರೂ, 96 ವಿದ್ಯಾರ್ಥಿಗಳಿಗೆ ಪ್ರೋತ್ಸಹದನ ನೀಡಲಾಯಿತು. 53 ಸದಸ್ಯರುಗಳಿಗೆ ರಾಸು ವೀಮಾ ಪರಿಹಾರ 25 ಲಕ್ಷ, 30 ಸದಸ್ಯರು ಮರಣ ಹೊಂದಿದ ಫಲಾನುಭವಿಗಳಿಗೆ 15 ಲಕ್ಷ, ಪಡ್ಡೆ ರಾಸು ಮರಣ ಹೊಂದಿದ್ದಕ್ಕೆ 2 ಲಕ್ಷ ರೂಗಳು, ಇಂಜಿನಿಯರಿಂಗ್ ಪದವಿದರರಿಗೆ ರೂ.30,000 ನೀಡಲಾಗುತ್ತದೆ. ಒಟ್ಟು 45 ಲಕ್ಷ ರೂಗಳನ್ನು ಈ ಕಾರ್ಯಕ್ರಮದಲ್ಲಿ ಚೆಕ್ ಮೂಲಕ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಂಘ, ಗುಣಮಟ್ಟದ ಸಂಘ, ಅತ್ಯುತ್ತಮ ಮಹಿಳಾ ಸಂಘ, ಎ ಎಂ ಸಿ ಅತ್ಯುತ್ತಮ ಬಳಕೆ ಮಾಡಿದವರಿಗೆ, ತಾಲ್ಲೂಕಿನಲ್ಲಿ ಹೆಚ್ಚು ಹಾಲು ಹಾಕುವವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಭಾರ ವ್ಯವಸ್ಥಾಪಕ ತಿಮ್ಮನಾಯಕ್, ವ್ಯವಸ್ಥಾಪಕ ಚಂದ್ರಶೇಖರ್ ಕೇದನೂರಿ, ಲೆಕ್ಕ ವಿಭಾಗ ವ್ಯವಸ್ಥಾಪಕ ವೆಂಕಟೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಯುಷಾ ತಾಸೀನ್, ಸಹಕಾರ ಅಭಿವೃದ್ಧಿ ಅಧಿಕಾರಿ ಲಿಯಾಕತ್ ಅಲಿಖಾನ್, ಒಕ್ಕೂಟದ ಅಧಿಕಾರಿಗಳಾದ ಶಂಕರ್ ನಾಗ್, ಮಹೇಶ್, ರಾಜ್, ಪಪಂ. ಉಪಾಧ್ಯಕ್ಷೆ ಶ್ವೇತ, ಸದಸ್ಯರಾದ ಮಹಮ್ಮದ್ ಸಾಧಿಕ್, ಕುಮಾರ್, ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿಗಳು, ನಿವೃತ್ತಿ ಕಾರ್ಯದರ್ಶಿಗಳು, ಮುಖಂಡರು, ವಿದ್ಯಾರ್ಥಿಗಳು, ಪೋಷಕರು, ಚೆಕ್ ಫಲಾನುಭವಿಗಳು ಇತರರು ಉಪಸ್ಥಿತರಿದ್ದರು