ಗುಬ್ಬಿ : ತಾಲ್ಲೂಕಿನ ಸಿಎಸ್ ಪುರ ಗ್ರಾಮದ ಕೆಪಿಎಸ್  ಶಾಲೆಯಲ್ಲಿ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಗೀತಾ ಲೋಕೇಶ್ ಇವರು ಶಿಕ್ಷಕ ವೃತ್ತಿಗೆ ಮಾತ್ರ ಸೀಮಿತವಾಗದೆ, ಸಾಹಿತ್ಯ ಕ್ಷೇತ್ರದಲ್ಲೂ ಬಹಳಷ್ಟು ಸಾಧನೆ ಮಾಡಿದ್ದಾರೆ. ಅಂತರಾಳ ಕವನ ಸಂಕಲನ, ಚೆಲುವಿನ ಭಾಷ್ಯ ಚಿತ್ರ ಕವನ ಸಂಕಲನ ಮತ್ತು ಭಾವಸಿಂಚನ ಕವನ ಸಂಕಲನ ಲೋಕಾರ್ಪಣೆ ಗೊಂಡಿವೆ.

ಇವರು 2024 ನೇ ಸಾಲಿನ ಗುಬ್ಬಿ  ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ , ಕಾವ್ಯಶ್ರೀ ಪ್ರಶಸ್ತಿ, ಸಾವಿತ್ರಿ ಬಾಯಿ ಫುಲೆ ಸಂಘದಿಂದ ಸೇವಾತೃಪ್ತಿ ಪ್ರಶಸ್ತಿ, ಸಾಧನಕೇರಿಯ ಸಾಧಕ ರತ್ನ , ಸಾಧನ ಶ್ರೀ ಶಿಕ್ಷಕ ರತ್ನ ಪ್ರಶಸ್ತಿ, ಓರಿಯಂಟಲ್ ಫೌಂಡೇಶನ್ 2024-25  ಸಾಲಿನ *ಇಂಡಿಯನ್ ಐಕಾನ್ ಅವಾರ್ಡ್* ಇನ್ನೂ ಹಲವಾರು ಪ್ರಶಸ್ತಿಗಳನ್ನು  ಪಡೆದುಕೊಂಡಿದ್ದಾರೆ.

ಹನಿ ನಿಧಿ  ಸಾಹಿತ್ಯ  ಸಾಂಸ್ಕೃತಿಕ ಟ್ರಸ್ಟ್ ಗುಬ್ಬಿಯ  3 ನೇ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡು ನಡೆಸಿದ್ದಾರೆ. ವಿವಿಧ ಜಿಲ್ಲೆಯ ಆನ್ಲೈನ್ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ 800 ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇವರಿಗೆ ನವೆಂಬರ್ 2ರಂದು ಧಾರವಾಡದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ತೃತೀಯ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಮಟ್ಟದ *ಕರುನಾಡ ಸೌರಭ ರತ್ನ ಪ್ರಶಸ್ತಿ* ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here