
ಗುಬ್ಬಿ : ಅಂಕಗಳಿಸುವುದೆ ಕಲಿಕೆಯಲ್ಲ, ಮಕ್ಕಳು ಜೀವನ ಕೌಶಲಗಳನ್ನು ಕಲಿತುಕೊಳ್ಳಬೇಕು ಎಂದು ಬಿಇಒ ಎಂ ಎಸ್.ನಟರಾಜು ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಸಂಸ್ಕಾರಯುತ ಶಿಕ್ಷಣವನ್ನು ಕಲಿಸಬೇಕು. ಉತ್ತಮ ಜೀವನ ರೂಪಿಸಿಕೊಳ್ಳುವುದರ ಕಡೆ ಗಮನಹರಿಸಿ ಭೋದನಾ ಗುಣಮಟ್ಟವನ್ನು ವೃದ್ದಿಸಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಹಿಂದೆ ಸರಿಯಾದ ಶಿಕ್ಷಕರು ಇಲ್ಲದೆ ಶಾಲೆಯ ಸ್ಥಿತಿಯ ಬಗ್ಗೆ ತಿಳಿಸಿದರು. ಹಾಗೂ ಇತ್ತಿಚೆಗೆ ಶಾಲೆಯಲ್ಲಿ ಉತ್ತಮ ಶಿಕ್ಷಕರು ಇರುವುದರಿಂದ ಮಕ್ಕಳಕಲಿಕೆಯು ಉತ್ತಮವಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಶಾಲೆಯ ಅಭಿವೃದ್ದಿಗೆ ಗಮನಕೊಟ್ಟು ಯಾವುದೇ ಖಾಸಗಿ ಶಾಲೇಗೂ ಪ್ರಗತಿಯಲ್ಲಿ ಕಡಿಮೆ ಇಲ್ಲದಂತೆ ನಮ್ಮೂರಿನ ಶಾಲೆಯಾವಗಬೇಕೆಂದು ಹೇಳಿದರು.
ವರ್ಗವಣೆಗೊಂಡ ಶಿಕ್ಷಕಿ ಶಿವಮ್ಮ ಮಾತನಾಡಿ, ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕು. ಮಕ್ಕಳ ಜೊತೆಯಲ್ಲಿ ನಕರಾತ್ಮಕ ಬದಲಾವಣೆ ಅವಕಾಶ ಕೊಡಬಾರದು ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಹೇಳಿಕೊಡಬೇಕು.
ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳು ಪಡೆದುಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು.ಮಕ್ಕಳಿಗೆ ಸರ್ಕಾರದಿಂದ ಉತ್ತಮ ಸೌಲಭ್ಯಗಳು ಬರುತ್ತಿದ್ದು ಅವುಗಳನ್ನು ಈ ಶಾಲೆಯಲ್ಲಿ ಸಮರ್ಪಕವಾಗಿ ಬಳಕೆಯಾಗಿದೆ ಎಂದು ತಿಳಿಸಿದರು.
ಶಿಕ್ಷಣ ಪ್ರೇಮಿ ಚನ್ನರಾಯಪಟ್ಟಣ ತಾಲ್ಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿ ಅನಿಲ್ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ನಿಜಾನಂದಮೂರ್ತಿ, ಲೋಕೇಶ್, ಸಿ ಆರ್.ಪಿಗಳಾದ ಎಸ್.ಪಿ.ಲೋಕೇಶ, ಟಿ.ಎಂ.ಧರಣೇಶ್, ಬಿ.ಎಸ್.ರುದ್ರೇಶ್, ಕಾಂತರಾಜು, ಇಸ್ಮಾಯಿಲ್ ಖಾನ್, ಮುಖ್ಯ ಶಿಕ್ಷಕಿ ಕಮಲಮ್ಮ,
ಶಿಕ್ಷಕರಾದ ಎ.ಎಸ್. ವಿಜಯಕುಮಾರ್, ಕೆ.ವಿ.ವಿವೇಕ, ಭಾಗ್ಯಮ್ಮ, ಕೆ.ಶಿವಮ್ಮ, ಎಸ್ ಡಿ ಎಂ ಸಿ ಮಂಜುನಾಥ್, ಸಾವಿತ್ರಿ ಬಾಯಿ ಪುಲೆ ಸಂಘದ ಕಾರ್ಯದರ್ಶಿ ಜಿ.ಎಸ್. ಮಂಜಮ್ಮ, ಗ್ರಾಮಸ್ಥರಾದ ಮಹೇಶ್, ಕೃಷ್ಣಪ್ಪ, ಅನಂದ್, ದೇವರಾಜ್,ಮಹದೇವಮ್ಮ, ದೇವಿರಮ್ಮ, ಜಯಲಕ್ಷ್ಮಿ, ಅಂಬಿಕಾ, ಪುಷ್ಪಲತ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಎಸ್ ಡಿ ಎಮ್ ಸಿ ಸಮಿತಿ ಸದಸ್ಯರುಗಳು, ಗ್ರಾಮ ಪಂಚಾಯತಿ ಸದಸ್ಯರುಗಳು, ಇತರರು ಇದ್ದರು.






