ಗುಬ್ಬಿ: ಟೋಲ್ ಹಣ ಸಂಗ್ರಹ ನಿಲ್ಲಸದಿದ್ದಾರೆ ಶಾಸಕರು ನಾನು ನಿಮ್ಮ ಜೊತೆ ಬರುತ್ತೇನೆ, ನಾವು ನೀವು ಸೇರಿ ಹೋರಾಟ ಮಾಡೋಣ ಎಂದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕಿನ ಜಿ ಹೊಸಹಳ್ಳಿ ಹತ್ತಿರ ಟೋಲ್ ಶುಲ್ಕ ಸಂಗ್ರಹದ ಬಗ್ಗೆ ಕರೆದ ಸಭೆಯಲ್ಲಿ ಮಾತನಾಡಿ, ಜಿ.ಹೊಸಹಳ್ಳಿ ಹತ್ತಿರ ನಿರ್ಮಾಣ ಮಾಡಿರುವ ಟೋಲ್ ಅವೈಜ್ಞಾನಿಕವಾಗುದೆ. ಈ ರಸ್ತೆಗೆ ಟೋಲ್ ಅವಶ್ಯಕತೆ ಇಲ್ಲ ಎಂದು ಎರಡು ಬಾರಿ ಹೋರಾಟ ಮಾಡಲಾಗಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತದೆ. ಪ್ರತಿ ದಿನ ರೈತರು ನಗರಕ್ಕೆ ತರಕಾರಿ ತೆಗೆದುಕೊಂಡು ಬರುತ್ತಾರೆ. ಇವರು ಎಲ್ಲಿಂದ ಹಣ ಬರುತ್ತದೆ ಟೋಲ್ ಶುಲ್ಕ ಕಟ್ಟುವುದಕ್ಕೆ ಎಂದು ಶಾಸಕರಿಗೆ ಪ್ರಶ್ನೆ ಮಾಡಿದರು. ಶಾಶ್ವತವಾಗಿ ಈ ಟೋಲ್ ತೆಗೆಯುವುವಂತೆ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ನಾನು ಸಚಿವರು, ಮತ್ತು ಅಧಿಕಾರಿಗಳು ಜೊತೆಯಲ್ಲಿ ಮಾತನಾಡಿದೆ. ಆದರೆ ಕೇಶಿಫ್ ನಿಯಮಾವಳಿ ಪ್ರಕಾರ ಒಂದು ಭಾರಿ ಟೋಲ್ ನಿರ್ಮಾಣವಾದರೆ ತೆಗಿಸಲು ಆಗುವುದಿಲ್ಲ. ಆದ್ದರಿಂದ ತಾಲ್ಲೂಕಿನ ಜನತೆ, ರೈತರಿಗೆ ಅನುಕೂಲವಾಗುವಂತೆ ರಿಯಾಯಿತಿ ನೀಡಲು ಗುತ್ತಿಗೆದಾರರ ಹತ್ತಿರ ಮಾತನಾಡುತ್ತೇನೆ ಎಂದರು.
ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಈ ರಸ್ತೆಯಲ್ಲಿ ಟೋಲ್ ಕಟ್ಟುವ ವಾಹನಗಳು ಸಂಚರಿಸುವುದಿಲ್ಲ. ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಹೋಗುವ ರಸ್ತೆ ಇದಾಗಿದ್ದು, ನಾವುವಎರಡು ಬಾರಿ ರಸ್ತೆ ತಡೆ ಮಾಡಿದ್ದೇವೆ.
ಜನರ ಮನಃ ಸ್ಥಿತಿ ಹರಿತು ಹಣ ಸಂಗ್ರಹ ಮಾಡಬೇಕು. ಗುಬ್ಬಿ ನಗರ ಸಭೆಯಾದ ಮೇಲೆ ಹಣ ಸಂಗ್ರಹ ಮಾಡಲಿ. ಇಲ್ಲಿ ಹಣ ಸಂಗ್ರಹ ಮಾಡಲು ಬಿಟ್ಟರೆ ಶಾಸಕರಿಗೆ ಒಳ್ಳೇಯಾದಾಗುವುದಿಲ್ಲ.
ಪ್ರಗತಿ ಪರ ರೈತರು ಕುಳಿತು ಮುಂದೆ ಹೋರಾಟ ಮಾಡಲು ತಿರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಶಾಸಕರು ಸಂಬಂದ ಪಟ್ಟ ಅಧಿಕಾರಿಗಳು ಜೊತೆ ಮಾತುಕತೆ ಮಾಡಬೇಕು, ಇದು ಅವೈಜ್ಞಾನಿಕ ರಸ್ತೆ, ರೈತಾಪಿವರ್ಗ ಟೋಲ್ ಬೇಡ ಎಂದು ಹೇಳುತ್ತಾರೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಶಾಸಕರು ವಿಶೇಷ ಅಧಿಕಾರ ಬಳಸಿಕೊಳ್ಳಬೇಕು ಎಂದರು.
ಮುಖಂಡ ಹೊನ್ನಗಿರಿಗೌಡ ಮಾತನಾಡಿ, ಟೋಲ್ ನಿಲ್ಲಿಸಲು ಹೋರಾಟ ಮಾಡಿ ನಿಮ್ಮ ಗಮನಕ್ಕೆ ತಂದಿದ್ದೇವೆ. ಕೆಜಿ ಟೆಂಪಲ್ ಭಾಗದವರು ಶಾಸಕರಿಗೆ ವಿಶೇಷ ಅವಕಾಶ ಕೊಟ್ಟಿದ್ದಾರೆ. ಎಂ ಎಲ್ ಎ ಪದಕ್ಕೆ ಅರ್ಥ ಮಾಡಿಕೊಳ್ಳಿ, ನೀವು ತಂದೆ ಸ್ಥಾನದಲ್ಲಿ ಇರುವುದರಿಂದ ತಾಲ್ಲೂಕಿನ ರೈತರ ಹಿತಕಾಯಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಬಿ.ಆರತಿ, ಇಒ ಜೆ.ಬಿ.ರಂಗನಾಥ್, ಸಿಪಿಐ ರಾಘವೇಂದ್ರ, ರೈತ ಮುಖಂಡರಾದ ಶಂಕರಣ್ಣ, ಜಿ.ಸಿ.ಲೋಕೇಶ್, ಹೊಸಹಳ್ಳಿ ಪಾಪಣ್ಣ, ಗಂಗಾರೇವಣ್ಣ, ಸತ್ತಿಗಪ್ಪ, ತಾಲ್ಲೂಕಿನ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲ್ಲೂಕು ಪದಾಧಿಕಾರಿಗಳು ಹಾಗೂ ಎಲ್ಲಾ ಹೋಬಳಿಯ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಹಾಗೂ ಗ್ರಾಮ ಘಟಕದ ಅಧ್ಯಕ್ಷರುಗಳು ಪದಾಧಿಕಾರಿಗಳು ಇದ್ದರು.





