ಗುಬ್ಬಿ : ಮನುಷ್ಯ ತಮ್ಮ ಸ್ವಾರ್ಥಕ್ಕಾಗಿ ಮೂಲಭೂತ ಹಕ್ಕುಗಳನ್ನು ಬಳಸಿಕೊಳ್ಳುತ್ತಾನೆ ಎಂದು ಸಿ.ಎಸ್ ಪುರ ಪೊಲೀಸ್ ಠಾಣೆಯ ಪಿಎಸ್‌ಐ ಧರ್ಮಾಂಜಿ ತಿಳಿಸಿದರು.
ತಾಲೂಕಿನ ಕೆ ಜಿ ಟೆಂಪಲ್ ಬೃಂದಾವನ ಇಂಗ್ಲಿಷ್ ಹೈ ಸ್ಕೂಲ್ ನಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್, ವಾಸನ್ ಕಣ್ಣಿನ ಆಸ್ಪತ್ರೆ, ದಯಾಸ್ಪರ್ಶ ಆಸ್ಪತ್ರೆ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಉಚಿತ ಕಣ್ಣಿನ ಸಮಗ್ರ ತಪಾಪಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,
ಭೂಮಿಯ ಮೇಲೆ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅದರಂತೆ ಸರಿ ಸಮಾನವಾಗಿ ಜೀವಿಸುವ, ತಮಗೆ ಬೇಕಾದದ್ದನ್ನು ಮಾತನಾಡುವ ಮೂಲಭೂತ ಹಕ್ಕುಗಳಿವೆ. ಈ ಮೂಲಭೂತ ಸವಲತ್ತುಗಳು, ಹಕ್ಕುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಆದರೆ ಕೆಲವು ಸಂದರ್ಭದಲ್ಲಿ ಮನುಷ್ಯನ ಮೂಲಭೂತ ಹಕ್ಕುಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾನೆ. ಮನುಷ್ಯ ಅರ್ಥ ಮಾಡಿಕೊಂಡು ಸಮಾಜದ ಕೆಲಸಕ್ಕೆ ಬಳಸಬೇಕಾಗಿದೆ.
ಯಾವುದೇ ಕಾರಣಕ್ಕೂ ಅವು ಉಲ್ಲಂಘನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತವಾಗಬೇಕಿದೆ ಎಂದು ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್ ಜಿಲ್ಲಾಧ್ಯಕ್ಷ ಅನ್ಸಾರ್ ಮಾತನಾಡಿ ಮಾನವ ಹಕ್ಕುಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವ ಕೆಲಸಗಳನ್ನು ಸಂಘ,ಸಂಸ್ಥೆಗಳು ಮಾಡಬೇಕು.ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತವಾಗಬೇಕಿದೆ ಎಂದು ಸಲಹೆ ನೀಡಿದರು.
ಬಿಇಓ ನಟರಾಜ್ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಮಾನವ ಹಕ್ಕುಗಳನ್ನು ತಮ್ಮ ಜೀವನದಲ್ಲ ಅಳವಡಿಸಿಕೊಂಡು ಮುಂದಿನ ಸಮಾಜ ರೂಪಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದರ
ಈ ವೇಳೆ ಮಾತನಧರ್ಮಾಂಜಪ್ರತಿಯೊಬ್ಬರು ಮಾನವನ ಮೂಲಭೂತ ಹಕ್ಕುಗಳನ್ನು ಪರಸ್ಪರ ಗೌರವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಥಿತಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ. ಎಸ್ ಸಿದ್ಧರಾಮಣ್ಣ,
ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಜಿ. ರಘುಚಂದ್ರ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್ ಜಿಲ್ಲಾಧ್ಯಕ್ಷ ಅನ್ಸಾರ್, ತಾಲ್ಲೂಕು ಅಧ್ಯಕ್ಷ ರಮೇಶ್, ಸಿಡಿಪಿಒ ಕೃಷ್ಣಮೂರ್ತಿ, ವೈದ್ಯ ಡಾ. ಆರ್ಯನ್, ಪಿಡಿಓ ಮಂಜುಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪವಿತ್ರ ಆರ್. ರಹಮತ್ ಅಲಿ, ಬೃಂದಾವನ ಇಂಗ್ಲೀಷ್ ಹೈಸ್ಕೂಲ್ ಸಿಬ್ಬಂದಿ, ಅಂತರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸುರಕ್ಷಾ ಪರಿಷದ್ ನ ಮಂಜುನಾಥ ಆರ್ ಕರ್ನಾಟಕ ರಾಜ್ಯದ ಉಸ್ತುವಾರಿಗಳು, ತುಮಕೂರು ಜಿಲ್ಲಾಧ್ಯಕ್ಷ ಶೇಕ್ ಅನ್ಸರ್, ಜಿಲ್ಲಾ ಅಧ್ಯಕ್ಷರು ಶೈಲಜಾ ರವಿ ಬಾಬು(ಮಹಿಳಾ ಘಟಕ), ತುಮಕೂರು ಜಿಲ್ಲಾ ಘಟಕದ ಹಾಗೂ ಗುಬ್ಬಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.






