
ಗುಬ್ಬಿ: ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ನಮ್ಮ ಭಾರತದವು ಅವುಗಳನ್ನು ಸಂಸ್ಕೃತ ಬಲ, ಆತ್ಮಬಲದಿಂದ ನಮ್ಮದಾಗಿಸಿ ಕೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.
ಪಟ್ಟಣದ ಚನ್ನಬಸವೇಶ್ವರಸ್ವಾಮಿ ತೇರು ಬೀದಿಯಲ್ಲಿ ಹಿಂದು ಸಮಾಜೋತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಹಿಂದು ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೊಂದಿಗೆ ಬೆರೆಯುವಂತಹ ಎಲ್ಲವನ್ನು ಒಪ್ಪಿಕೊಳ್ಳುವಂತಹ ಧರ್ಮವಾಗಿದ್ದು ಪುರಾತನ ಕಾಲದ ಇತಿಹಾಸವನ್ನು ಹೊಂದಿರುವ ಮಾನವೀಯತೆಯ ಧರ್ಮವಾಗಿದೆ.

ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಆದ್ದರಿಂದ ನಾವೆಲ್ಲ ಹಿಂದೂಗಳು ಒಗ್ಗೂಡಿ ಹಿಂದೂ ಸಮಾಜವನ್ನು ಕಟ್ಟಬೇಕು
ಸನಾತನ ಧರ್ಮ ಪರಂಪರೆ ಹಾಗೂ ಭಾರತೀಯತೆಯ ಉಳಿಸಿ ಬೆಳೆಸುವ ಧ್ಯೇಯದಿಂದ ಪ್ರಾರಂಭಗೊಂಡ ಆರ್ ಎಸ್ ಎಸ್ ನೂರು ಸಂಘಟಣೆ ನೂರು ವರ್ಷ ಕಳೆದಿದೆ.ಈ ಹಿನ್ನಲೆಯಲ್ಲಿ ಹಿಂದೂಗಳಲ್ಲಿ ಸಂಘಟನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ಲಕ್ಷ ಸ್ಥಳಗಳಲ್ಲಿ ಇಂದು ಸಮಾವೇಶ ನಡೆಯುತ್ತಿದೆ ಎಂದರು.

ಬೆಟ್ಟದಲ್ಲಿ ಗವಿಮಠದ ಮಠ ಅಧ್ಯಕ್ಷರಾದ ಚಂದ್ರಶೇಖರ ಮಹಾಸ್ವಾಮೀಜಿ ಮಾತನಾಡಿ, ನೆಲ ಜಲ ಭಾರತೀಯ ಸಂಸ್ಕೃತಿಯು ತ್ಯಾಗದ ಯೋಗದ ಮಹಾಸಂಸ್ಕೃತಿಯಿಂದ ಬೆಳೆದು ಬಂದಿದೆ .ಆದ್ದರಿಂದ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕು. ಹಿಂದೂ ಧರ್ಮ ಬಲಿಷ್ಠವಾಗಿ ಇರಬೇಕಾದರೆ ದೈಹಿಕವಾಗಿ,ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಸಬಲರಾದರೆ ಮಾತ್ರ ಹಿಂದು ಸಂಸ್ಕೃತಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮಿಗಳು ಮಾತನಾಡಿ ಹಿಂದು ಧರ್ಮಕ್ಕೆ ಯಾರು ಸಂಸ್ಥಾಪಕರು ಇಲ್ಲ, ಭೌದ್ದ ಧರ್ಮ ಹಾಗೂ ಕೈಸ್ತ ಧರ್ಮ ಹಲವು ಧರ್ಮಗಳಿಗೆ ಸಂಸ್ಥಾಪಕರು ಇದ್ದಾರೆ.ಆದರೆ ಹಿಂದೂ ಧರ್ಮಕ್ಕೆ ಮಾತ್ರ ಯಾರು ಇಲ್ಲ ಹಿಂದೂ ಧರ್ಮವನ್ನು ಪ್ರತಿಯೊಬ್ಬ ಸಂತರು ಕೂಡ ಒಪ್ಪಿಕೊಂಡಿದ್ದಾರೆ.ಎಲ್ಲ ಜಾತಿ ಧರ್ಮಗಳಿಗೂ ಒಂದೇ ರೀತಿಯಾಗಿ ನಡೆದುಕೊಳುತ್ತದೆ.ಆದರೆ ಮೇಲು ಕೀಳು ಭಾವನೆಯೊಂದಿಗೆ ನಡೆದುಕೊಳುವುದು ತಪ್ಪು ಅದನ್ನು ಬಿಟ್ಟು ನಾವೆಲ್ಲರೂ ಹಿಂದೂಗಳೆಂಬ ಭಾವನೆಯೊಂದಿಗೆ ಇದ್ದಾರೆ ದೇಶ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.

ಹಿಂದು ಸಮಾಜೋತ್ಸವ ಸಮಿತಿಯ ಅಧ್ಯಕ್ಷ ಕೈಗಾರಿಕೋದ್ಯಮಿ ರುದ್ರೇಶ್ ಮಾತನಾಡಿ, ನಾವೆಲ್ಲರೂ ಸೇರಿಕೊಂಡು ಹಿಂದು ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಸಮಾಜದಲ್ಲಿ ಹೆಚ್ಚೆಚ್ಚು ಹಿಂದು ಧರ್ಮದ ವಿಚಾರಗಳನ್ನು ಉಳಿಸು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ಹಿಂದು ಸಮಾಜೋತ್ಸವ ಸಮಾವೇಶದ ಅಂಗವಾಗಿ ಶ್ರೀ ನಾಗಲಿಂಗೇಶ್ವರ ದೇವಸ್ಥಾನದಿಂದ ಚನ್ನಬಸವೇಶ್ವರ ದೇವಸ್ಥಾನದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಹಾಗೂ ನಂದಿ ಧ್ವಜದೊಂದಿಗೆ ಕುಣಿತ, ವೀರಗಾಸೆ ಕುಣಿತ ಹಾಗೂ ದೇವರುಗಳ ಉತ್ಸವ ದೊಂದಿಗೆ ಶೋಭೆ ಯಾತ್ರೆಯನ್ನು ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದ ಯೋಗ ತರಬೇತಿದಾರರಾದ ಸೌಭಾಗ್ಯ, ನರಸಿಂಹಮೂರ್ತಿ, ರವೀಶ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ಶಿವಗಂಗೆಯ ಜ್ಞಾನಾನಂದ ಪುರಿ ಮಹಾ ಸ್ವಾಮೀಜಿ, ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ, ಗೋಸಲ ಚನ್ನಬಸವೇಶ್ವರಶಿವಚಾರ್ಯ, ಸ್ವಾಮೀಜಿ, ಆದಿಜಾಂಬವ ಮಠದ ಶಿವಮುನಿ ದೇಶಿಕೇಂದ್ರ ಸ್ವಾಮೀಜಿ, ಬಿ.ಕೋಡಿಹಳ್ಳಿಯ ಬಸವ ಬೃಂಗೇಶ್ವರ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರದೇಶಿಕೇಂದ್ರ ಸ್ವಾಮೀಜಿ, ತೊರೆಮಠದ ಆಟವಿ ಚನ್ನಬಸವ ಸ್ವಾಮಿಗಳು,
ಕಾರ್ಯಕ್ರಮದ ಸಮಿತಿಯ ಅಧ್ಯಕ್ಷ ರುದ್ರೇಶ್, ಮುಖಂಡರಾದ ಎಸ್.ಡಿ ದಿಲೀಪ್ ಕುಮಾರ್, ಬಿಎಸ್ ನಾಗರಾಜು, ಚಂದ್ರಶೇಖರ ಬಾಬು, ಕಳ್ಳಿಪಾಳ್ಯ ಲೋಕೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮಯ್ಯ, ಉದ್ದೇಹೊಸಕೆರೆ ಶಿವಕುಮಾರ್, ಹೆಚ್.ಟಿ ಭೈರಪ್ಪ, ಕವಿತ, ಆರ್ ಎಸ್ ಎಸ್ ಸಂಘಟನೆಯ ದಯಾನಂದ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಹದಿನೆಂಟು ಕೋಮಿನ ಮುಖಂಡರು, ಸಾರ್ವಜನಿಕರು ಭಾಗಿಯಾಗಿದ್ದರು.






