10 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ತಲುಪಿದ “ಟೆಲಿಕನ್ಸಲ್ಟೇಷನ್” ಸೌಲಭ್ಯ

ಸರ್ಕಾರವು ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಜನ ಸಾಮಾನ್ಯರ ಆರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ತುರ್ತು ವೈದ್ಯಕೀಯ ಸೇವೆ ಒದಗಿಸಲು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದ “ಟೆಲಿಕನ್ಸಲ್ಟೇಷನ್” ಸೇವೆಯನ್ನು 10579 ಫಲಾನುಭವಿಗಳು ಪಡೆದುಕೊಂಡಿದ್ದಾರೆ.

ಕೋವಿಡ್19 ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದುದರಿಂದ ರೋಗಿಗಳು ವೈದ್ಯಕೀಯ ಸಲಹೆ ಅಥವಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಲು ಭಯಭೀತರಾಗಿರುವುದನ್ನು ಮನಗಂಡ ಸರ್ಕಾರವು ರೋಗಿಗಳಿಗೆ ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿತ್ತುಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಟೆಲಿಕನ್ಸಲ್ಟೇಷನ್ ಸೇವೆಯನ್ನು ಮುಂದುವರೆಸಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಮತ್ತು ಸಂಜೀವಿನಿ ಟೆಲಿ ಕನ್ಸಲ್ಟೇಷನ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ|| ಚೇತನ್ ಮನವಿ ಮಾಡಿದ್ದಾರೆ.

ಏನಿದು ಟೆಲಿ ಕನ್ಸಲ್ಟೇಷನ್ ಸೇವೆ :

ಜಿಲ್ಲೆಯಲ್ಲಿರುವ ಸಾರ್ವಜನಿಕರು, ಹೊರ ರೋಗಿಗಳ ವಿಭಾಗಕ್ಕೆ ಬರುವ  ಸಾಮಾನ್ಯ ಖಾಯಿಲೆಗಳಿಗೆ ಕೇಂದ್ರ ಸರ್ಕಾರದ ಸಂಜೀವನಿ ಕಾರ್ಯಕ್ರಮದಡಿ ಮನೆಯಲ್ಲಿಯೇ ಕುಳಿತು  ತಮ್ಮ ಅಂತರ್ಜಾಲ ಸಂಪರ್ಕ ಹೊಂದಿರುವ ಆಂಡ್ರಾಯಿಡ್ ಮೊಬೈಲ್ ಬಳಸಿ  ಟೆಲಿ ಕನ್ಸಲ್ಟೇಷನ್ ವೈದ್ಯಕೀಯ ಸಲಹಾ ಸೌಲಭ್ಯ ಪಡೆಯಬಹುದಾಗಿದೆ.

ಟೆಲಿ ಕನ್ಸಲ್ಟೇಷನ್ ಸೇವೆ ಪಡೆಯುವ ವಿಧಾನ :

ಮೊದಲಿಗೆ ಆಂಡ್ರಾಯಿಡ್ ಮೊಬೈಲ್ನಿಂದ ಪ್ಲೇಸ್ಟೋರ್(playstore)ನಲ್ಲಿ ಸಂಜೀವನಿ ಆಪ್ ಅನ್ನು ಡೌನ್ಲೋಡ್(Download) ಮಾಡಿ ಇನ್ಸ್ಟಾಲ್(Install) ಮಾಡಬೇಕುನಂತರ ರೋಗಿಯ ಮೊಬೈಲ್ ನಂಬರ್ ಅನ್ನು ಎಂಟರ್(enter) ಮಾಡಿದರೆ  ರೋಗಿಯ ಮೊಬೈಲ್ಗೆ ಓಟಿಪಿ(OTP) ಬರುತ್ತದೆಓಟಿಪಿ ಬಂದ ನಂತರ ಪೂರ್ಣ ಮಾಹಿತಿಯನ್ನು ದಾಖಲಿಸಬೇಕುನಂತರ Select general OPD ಅಥವಾ specility OPD ಆಯ್ಕೆ ಮಾಡಿ ಆರೋಗ್ಯ ದಾಖಲೆ((health records))ಗಳನ್ನು ಅಪ್ಲೋಡ್ ಮಾಡಿ ಟೋಕನ್ ಜನರೇಟ್ ಮಾಡಬೇಕು(ಜನರೇಟ್ ಆದ ಟೋಕನ್ ಅನ್ನು ಅದೇ ದಿನ ಬೆಳಿಗ್ಗೆ 8 ರಿಂದ ರಾತ್ರಿ 9 ಗಂಟೆವರೆಗೆ ಯಾವುದೇ ಸಮಯದಲ್ಲಿ ಉಪಯೋಗಿಸಬಹುದು).  ನಂತರ ಮೊಬೈಲ್ ನಂ. ಮತ್ತು ಟೋಕನ್ ನಂ. ಅನ್ನು ಎಂಟ್ರಿ ಮಾಡಿ ಲಾಗಿನ್ ಆಗಬೇಕುರೋಗಿಗಳು ತಮ್ಮ ಸರದಿಯನುಸಾರ call now button click ಮಾಡಿದ ಮೇಲೆ ವಿಡಿಯೋ ಕಾಲ್ ಶುರುವಾಗುತ್ತದೆಇದರಿಂದ ರೋಗಿಯು ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಉಚಿತವಾಗಿ ವೈದ್ಯಕೀಯ ಸಲಹೆ ಮತ್ತು ಸೇವೆಗಳನ್ನು ಪಡೆಯಬಹುದಾಗಿದೆ.

ಲಭ್ಯವಿರುವ ತಜ್ಞ ವೈದ್ಯರು ವೀಡಿಯೋ ಕಾಲ್ ಮೂಲಕ ರೋಗಿಯ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಸೂಕ್ತ ಚಿಕಿತ್ಸೆ ಸೂಚಿಸುವರು. ಟೆಲಿ ಕನ್ಸಲ್ಟೇಷನ್ ಮುಗಿದ ಮೇಲೆ ರೋಗಿಯ ಮೊಬೈಲ್ಗೆ prescription link ಬರುತ್ತದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಸೇವೆಯು ಪ್ರತಿದಿನ ಬೆಳಿಗ್ಗೆ  ರಿಂದ ರಾತ್ರಿ 9 ಗಂಟೆಯವರೆಗೆ ಹಾಗೂ ಭಾನುವಾರಗಳಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ  ಲಭ್ಯವಿದ್ದು, ಜನಸಾಮಾನ್ಯರು ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!