ಬೆಂಗಳೂರು: ಗಾಂಧಿಜಿಯ ತತ್ವಾದರ್ಶಗಳನ್ನು ಇಂದಿನ ಯುವಪೀಳಿಗೆ ಹೆಚ್ಚಿನ ಅಧ್ಯಯನಕ್ಕೆ ತೊಡಗಿಸಿ ಕೊಳ್ಳಬೇಕು ಎಂದು ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಉಪಾಧ್ಯಕ್ಷ ಹಾಗೂ ಕವಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ನಗರದ ಪೀಣ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಗಾಂಧಿ,ಅಂಬೇಡ್ಕ‌ರ್ ಮತ್ತು ವಿವೇಕಾನಂದ ಅಧ್ಯಯನ ಕೇಂದ್ರ, ಇತಿಹಾಸ ವಿಭಾಗ ಮತ್ತು ಅಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ  ‘ಗಾಂಧೀಜಿಯವರ ವಿಚಾರಧಾರೆಗಳ ಪ್ರಸ್ತುತತೆ’ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ಏಕತ್ವದಿಂದ ಬಹುತ್ವ ಕಡೆಗೆ ಮುಖಮಾಡಿ ಅರಿವು ಮೂಡಿಸಿದವರು ಗಾಂಧೀಜಿ. ಗಾಂಧಿ ನೆಡೆದು ಬಂದ ದಾರಿ, ವಿಚಾರಗಳು ಮತ್ತು ಅವರ ಬದುಕು ಪ್ರತಿಯೊಬ್ಬ ಪ್ರಜೆಯೂ ಅನುಸರಿಸಿದರೆ ರಾಮರಾಜ್ಯ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪದ್ಯಾಪಕರಾದ ಜಮುನಾ ಮಾತನಾಡಿ, ಮಹಾತ್ಮ ಗಾಂಧೀಜಿ ಎಲ್ಲಕಾಲಮಾನಗಳಿಗೂ ಸಲ್ಲುವಂತಹವರಾಗಿದ್ದು, ಅವರ ವಿಚಾರಧಾರೆಗಳು ಸಾರ್ವಕಾಲಿಕ ಮೌಲ್ಯವುಳ್ಳವು. ಅವರ ತತ್ವಾದರ್ಶಗಳನ್ನು ಯುವಜನತೆ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲರಾದ ಡಾ.ಡಿ.ಡಿ.ಸತೀಶ್ ಮಾತನಾಡಿ,ಈ  ತಲೆಮಾರಿನ ಯುವ ಸಮೂಹಕ್ಕೆ ಮಹಾತ್ಮ ಗಾಂಧಿಯವರ ವಿಚಾರಗಳನ್ನು ಹೆಚ್ಚೆಚ್ಚು ತಲುಪಿಸಬೇಕಿದೆ. ಹಾಗಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ಚರ್ಚೆ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಚಾಲಕರಾ ಡಾ.ಹೆಚ್.ಎಂ.ಭಾರತಿ, ಡಾ.ಟಿ.ಶೃತಿ, ದೈಹಿಕ ಶಿಕ್ಷಣ ನಿರ್ದಸಂಚಾಲಕರಾದ ಡಾ. ಅಬಿದಬೇಗಂ, ಡಾ.ಪ್ರಕಾಶ್ ಅಣಬೂರ್, ಶ್ಯಾಮ್ ರಾಜ್, ಡಾ.ಎಂ.ಪ್ರಕಾಶ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು,  ಶಿಬಿರಾರ್ಥಿಗಳು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here