
ಗುಬ್ಬಿ : ಪರಮಪೂಜ್ಯ ದಿವಂಗತ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ಆಶಿರ್ವಾದಿಂದ ಇಂದು ಮಠದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಹುದ್ದೆ ಹಾಗೂ ಉದ್ಯಮಿಗಳಾಗಿದ್ದಾರೆ ಎಂಬುದು ಸಂತಸದ ಸಂಗತಿ ಎಂದು ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಂಜೇಗೌಡ ಅಭಿಪ್ರಾಯ ಪಟ್ಟರು.
ಗುಬ್ಬಿ ತಾಲೂಕಿನ ಕಲ್ಲೂರು ಗ್ರಾಮದ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಳೇಯ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ನೇಹ ಸಮ್ಮೀಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀ ಗಳು ಬಡ ಮತ್ತು ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸ ಕ್ಕೆ ಅನುಕೂಲ ವಾಗುವ ದೃಷ್ಟಿ ಯಿಂದ ಶಾಲೆ ಪ್ರಾರಂಭ ಮಾಡಿ ಇಂದು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಪುಟ್ಟವಿಟ್ಟ ಚಿನ್ನದಂತ ಪರಮಪೂಜ್ಯರು ಯಾವ ಸಮಯದಲ್ಲಿ ಈ ಶಾಲೆಯನ್ನು ಪ್ರಾರಂಭ ಮಾಡಿದರೂ ಅಂದಿನಿಂದ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವು ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ವಿದ್ದು ಕೆಲವರು ಉದ್ಯಮಿಗಳಾಗಿದ್ದಾರೆ. ಸರ್ಕಾರಿ ನೌಕರಿಯನ್ನು ಪಡೆದಿದ್ದಾರೆ ಇದು ನಮ್ಮ ಶಾಲೆಯ ಶಿಕ್ಷಕರಿಗೆ ಶಾಲೆಗೆ ಸಂದ ಗೌರವ ಎಂದರು.
ಶಾಲೆಯ ಹಳೇಯ ವಿದ್ಯಾರ್ಥಿ ಹಾಗೂ ಉದ್ಯಮಿ ನಾಗರಾಜು ಮಾತನಾಡಿ ಪರಮ ಪೂಜ್ಯರು ಸ್ಥಾಪನೆ ಮಾಡಿದ ಶಾಲೆಯಲ್ಲಿ ನಾವು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಶಾಲೆಗೆ ಪ್ರವೇಶ ಸಿಗುವುದೇ ಕಷ್ಟ ಸಾಧ್ಯ ವಾಗಿತ್ತು ಅಷ್ಟು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಇಂದು ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಕಾಲೇಜು ಹೆಚ್ಚಾಗಿದ್ದು ಇದು ಪೋಷಕರು ಗ್ರಾಮೀಣ ಭಾಗದಿಂದ ನಗರ ಪ್ರದೇಶದಲ್ಲಿರುವ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಕೊಡಿಸಬೇಕು ಎಂಬ ಆಲೋಚನೆ ಇರುತ್ತದೆ ಆದರಿಂದ ನಾವು ವಿದ್ಯಾಭ್ಯಾಸ ಮಾಡಿ ಹಿಂದೂ ಉನ್ನತ ಮಟ್ಟಕ್ಕೆ ಬರಲು ಅವಕಾಶ ಕಲ್ಪಿಸಿದ ಶಾಲೆಯ ಅಭಿವೃದ್ಧಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಇಂದು ಕಾರ್ಯಕ್ರಮಕ್ಕೆ ಭಾಗವಹಿಸಿರುವುದು ಸಂತೋಷ ದ ಸಂಗತಿ ಈ ನಿಟ್ಟಿನಲ್ಲಿ ನಾವೆಲ್ಲರೂ ಶಾಲೆಯ ಅಭಿವೃದ್ಧಿ ಗೆ ಸಹಕರಿಸೋಣ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ ಹೆಚ್ ಭಾರತೀ ಸುರೇಶ್ ಮಾತನಾಡಿ ಪರಮಪೂಜ್ಯರ ನಡೆಸುತ್ತಿರುವ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಗ್ರಾಮೀಣ ಭಾಗದ ಹಾಗೂ ಅತಿ ಕಡುಬಡತನದ ವಿದ್ಯಾರ್ಥಿಗಳೇ ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿರುವುದು ಬಹಳ ಅನುಕೂಲಕರವಾಗಿದೆ.
ಹಾಗೆಯೇ ಈ ನಮ್ಮ ಗ್ರಾಮದ ಶಾಲೆಯು ಸಹ ಬಡ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ನೀಡುವ ಮೂಲಕ ಮಾದರಿ ಶಾಲೆಯಾಗಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜುಲೇಖಾಬಿ ಮಹಮದ್ ಯೂಸುಫ್ ಮಾತನಾಡಿ ಪರಮಪೂಜ್ಯರು ಇಂದು ಸಾವಿರಾರು ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ ಹಿನ್ನೆಲೆಯಲ್ಲಿ ಎಷ್ಟು ಬಡ ಮಕ್ಕಳು ಉಚಿತ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಯಾವುದೇ ಧರ್ಮ ಭೇದ ಮತ ಭೇದವಿಲ್ಲದೆ ಶಿಕ್ಷಣ ಹಾಗು ದಾಸೋಹ ನೀಡುತ್ತಿರುವ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ.
ಇಂತಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ನಾವುಗಳು ಪುಣ್ಯ ವಂತರು ಇದು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಶಾಲೆಯ ಅಭಿವೃದ್ಧಿ ಹಾಗೂ ನಮಗೆ ವಿದ್ಯಾರ್ಜನೆ ನೀಡಿದ ಶಿಕ್ಷಕರಿಗೆ ನಾವು ಅಭಿನಂದನೆ ಸಲ್ಲಿಸುವುದು ನಮ್ಮಕರ್ತವ್ಯ ಈ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿ ಗೆ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶಿವಕುಮಾರಯ್ಯ.
ವಿಶೇಷ ಅಧಿಕಾರಿ ರಾಜಶೇಖರ್. ಮುಖ್ಯ ಶಿಕ್ಷಕರಾದ ಮೊಹಮ್ಮದ್ ಮೊಯಿಸಿನ್. ನಿವೃತ್ತ ಮುಖ್ಯ ಶಿಕ್ಷಕ ಮಹದೇವಯ್ಯ. ಹಳೇಯ ವಿದ್ಯಾರ್ಥಿಗಳಾದ ಪ್ರಥಮ ದರ್ಜೆ ಗುತ್ತಿಗೆದಾರ ಚೆನ್ನೈಗಪ್ಪ. ವಿದ್ಯುತ್ ಗುತ್ತಿಗೆದಾರ ರುದ್ರಪ್ರಕಾಶ್. ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ರಾಜು. ಗ್ರಾಮ ಪಂಚಾಯತಿ ಸದಸ್ಯ ಮಾಯಣ್ಣಗೌಡ. ಗ್ರಾಮ ಪಂಚಾಯತಿ ಸದಸ್ಯ ಕೆ ಎಲ್ ಉಮೇಶ್. ಯೋಗಮೂರ್ತಚಾರ್. ತಿಮ್ಮರಾಜು. ಶೀಬಿ ಶಂಕರ್. ಜೆ. ಪಿ. ಬಸವರಾಜು. ಭೈರಪ್ಪ. ಶಿವಯ್ಯ. ಇತರರು. ಸಿದ್ದಗಂಗಾ ಶಾಲೆಯ ಶಿಕ್ಷಕರು ಹಾಜರಿದ್ದರು.





