ಗುಬ್ಬಿ :  ತಾಲ್ಲೂಕಿನಲ್ಲಿ  ಅಕ್ರಮ ಮದ್ಯ  ಮಾರಾಟ ತಡೆಯುವಲ್ಲಿ ಅಬಕಾರಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ  ವಹಿಸುತ್ತಿರುವುದು ವಿಷಾಧಕರ ಸಂಗತಿ ಎಂದು ದಲಿತ ಮುಖಂಡರ ಒಕ್ಕೂರಲಿನಿಂದ ಧ್ವನಿ ಎತ್ತಿದರು.

 ತಾಲೂಕಿನ ಸಿಎಸ್ ಪುರ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರುಗಳು ಸಿ.ಎಸ್ ಪುರ ಹೋಬಳಿಯ ಹಲವು ಗ್ರಾಮದಲ್ಲಿ ಹಾಗೂ  ಅಕ್ರಮ ಮಧ್ಯ ಮಾರಾಟದ ನಡೆಯುತ್ತಿದೆ. ಇದರ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಭೆಗಳಲ್ಲಿವಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ.  ಇನ್ನೂ ಹೋಬಳಿ ಕೇಂದ್ರಗಳಲ್ಲಿ ಮಧ್ಯ ಮಾರಾಟ ಅಂಗಡಿಗಳಲ್ಲಿ ನಿಗದಿ ಸಮಯಕ್ಕಿಂತ ಮುಂಚಿತವಾಗಿ ಮಧ್ಯ ಮಾರಾಟ  ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಸಾಕಷ್ಟು ಕುಟುಂಬಕ್ಕೆ ತೊಂದರೆಯಾಗುತ್ತಿದೆ ಎಂದು   ಗಂಭೀರ ಆರೋಪ ಮಾಡಿದರು.

ಯುವ ಮುಖಂಡ ಗೋವಿಂದರಾಜು ಮಾತನಾಡಿ  ಕಲ್ಲೂರು ಗ್ರಾಮದಲ್ಲಿ ಪ್ರಸ್ತುತ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವಾಲಯಗಳಲ್ಲಿ ಸಮಿತಿ ರಚನೆ ಮಾಡುವ ಸಂದರ್ಭದಲ್ಲಿ ನಿಯಮಾನುಸಾರವಾಗಿ ಪರಿಶಿಷ್ಟ ಸಮುದಾಯದದವರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಬೇಕು ಎಂಬುವ ನಿಯಮವಿದ್ದರೆ ಸಹ ಮುಜರಾಯಿ ಇಲಾಖೆ ಹಾಗೂ ಸ್ಥಳೀಯ ಕಾರ್ಯ ಸಮಿತಿ ನಿಯಮ ಪಾಲನೆ ಮಾಡುತ್ತಿಲ್ಲ ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

 ಸಮಸ್ಯೆಗಳನ್ನು ಆಲಿಸಿದ ಸಿಎಸ್ ಪುರ ಪೊಲೀಸ್ ಠಾಣೆ  ಪಿಎಸ್ಐ ಶಿವಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂತಹ ಅಕ್ರಮ ಮಧ್ಯದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ ಇದರ ಬಗ್ಗೆ ನೀವುಗಳು ಸಮರ್ಪಕವಾಗಿ ಮಾಹಿತಿ ನೀಡಿದರೆ ದೂರು ದಾಖಲಿಸಲು ಕ್ರಮವಹಿಸಲಾಗುವುದು ಹಾಗೂ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಸಮಿತಿ ರಚನೆ ವೇಳೆ ಲೋಪವಾಗಿರುವ ಬಗ್ಗೆ ಕ್ರಮ ವಹಿಸಲು ಸಂಬಂಧಪಟ್ಟ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು ಹಾಗೂ ಲೋಪ ನೆಡೆದಿರುವುದು ಸ್ಪಷ್ಟವಾದರೆ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತೆವೆ ಎಂದು ಮುಖಂಡರಿಗೆ ಭರವಸೆ ನೀಡಿದರು.

ಸಭೆಯಲ್ಲಿ ಮುಖಂಡರಾದ ಕಲ್ಲೂರು ಶಾಂತರಾಜು.ಡಿ ಎಸ್ ಎಸ್ ಸಂಚಾಲಕ ಬೆಟ್ಟಸ್ವಾಮಿ. ಶಿವಯ್ಯ. ವೇಣು. ಕೊಡಗೀಹಳ್ಳಿ ಗಿರೀಶ್. ಮಂಚಿಹಳ್ಳಿ ಶಿವಸ್ವಾಮಿ. ರಾಮು ಆಟೋ. ಸಿಎಸ್. ಪುರ ಭದ್ರೇಶ್. ಮಹಾದೇವು. ನಾರನಹಳ್ಳಿ ಶಿವು. ಅಂಕಳಕೊಪ್ಪ ರುದ್ರೇಶ್. ಇಡಗೂರು ಚಂದ್ರಣ್ಣ. ರಮೇಶ್. ವೆಂಕಟೇಶ್ ಇತರ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here