ಗುಬ್ಬಿ: ಆರ್ಥಿಕವಾಗಿ ಹಿಂದುಳಿದವರು ಹೈಟೆಕ್ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಸವಾಲಿನ ಸಂಗತಿ ಎಂದು ಗುಬ್ಬಿ ಟೌನ್ ಕ್ಲಬ್ ಕಾರ್ಯದರ್ಶಿ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಶಿವರಾತ್ರಿ ಕಲ್ಯಾಣ ಮಂಟಪದಲ್ಲಿ ಗುಬ್ಬಿ ಟೌನ್ ಕ್ಲಬ್ ಇವರ ಆಶಯದಲ್ಲಿ ಡಾ.ರಾಮ ಮನೋಹರ ಲೋಹಿಯ ಆರೋಗ್ಯ ಜೀವನ ಸಂಸ್ಥಾನ ರಾಜ್ಯಸ್ಥಾನದ ನುರಿತ ತಜ್ಞರಿಂದ ಏರ್ಪಡಿಸಿದ್ದ ಬೃಹತ್ ಮೆಗಾ ಹೆಲ್ತ್ ಕ್ಯಾಂಪ್ ನಲ್ಲಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದನ್ನು ನಮ್ಮ ಹಿರಿಯರು ನಮಗೆ ಕಲಿಸಿ ಹೋಗಿದ್ದಾರೆ. ಹೀಗಾಗಿ ಬಡವರ ಮೇಲಿನ ಆರೋಗ್ಯದ ಕಾಳಜಿಯಿಂದ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಸಾಮಾಜಿಕ ಸೇವೆಯನ್ನು ಮಾಡುತ್ತ ಆರೋಗ್ಯದ ಬಗ್ಗೆ ಹೆಚ್ಚು ಹೊತ್ತು ನೀಡುವ ನಿಟ್ಟಿನಲ್ಲಿ ನಮ್ಮ ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ ಎಂದರು. ಶಿಬಿರದಲ್ಲಿ ಬೆನ್ನು ನೋವು, ಮೊಣಕಾಲು ನೋವು, ಮೈಗ್ರೇನ್, ಡಯಾಬಿಟಿಸ್, ಸರ್ವಿಕಲ್ ಸ್ವಾಂಡಿಲೋಸಿನ್, ಮಲಬದ್ಧತೆ, ಪಾರ್ಶ್ವವಾಯು ಇನ್ನು ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಯಿತು ಎಂದರು.
ನರರೋಗ ತಜ್ಞ ಡಾ. ವಿಕ್ರಮ್ ಮಶಾಲ್ ಮಾತನಾಡಿ, ಈ ಮೆಗಾ ಹೆಲ್ತ್ ಕ್ಯಾಂಪ್ ನಲ್ಲಿ ತುಂಬಾ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಅವರ ಅಭಿಪ್ರಾಯದಂತೆ ಇನ್ನೂ ಹೆಚ್ಚು ದಿನಗಳ ಕಾಲ ಈ ಶಿಬಿರವನ್ನು ಮುಂದುವರೆಸಿ ಎಂದು ಹೇಳಿದ್ದಾರೆ. ಮುಂದಿನ ದಿನದಲ್ಲಿ ಮತ್ತೊಮ್ಮೆ ಬಾರಿ ಗುಬ್ಬಿಯಲ್ಲಿ ಶಿಬಿರ ಏರ್ಪಡಿಸುತ್ತೇವೆ ಎಂದರು.
ಅರೋಗ್ಯ ಶಿಬಿರದಲ್ಲಿ ತಜ್ಞ ವೈದ್ಯ ರೂಪೇಶ್ ಚೌಧರಿ, ರೋಟರಿ ಮಾಜಿ ಅಧ್ಯಕ್ಷರಾದ ಜಿ.ಎಸ್.ಮಲ್ಲಿಕಾರ್ಜುನ್, ಗುಬ್ಬಿ ಟೌನ್ ಕ್ಲಬ್ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ, ಮುಖಂಡರಾದ ಭರತ್ ಗೌಡ, ದಯಾನಂದ, ಶೇಖರ್, ರವೀಶ್, ಇತರರು ಇದ್ದರು.





