“ಆಸ್ಪತ್ರೆಯಲ್ಲಿ ಬಳಸಿದ ಗ್ಲೂಕೋಸ್‌ಬಾಟೆಲ್, ವಾಟರ್‌ಬಾಟೆಲ್‌ಗಳನ್ನು ಮರುಬಳಕೆ ಮಾಡಿಕೊಂಡು, ಮನೆಯ ಸುತ್ತ ಮುತ್ತ ಹಾಗೂ ಹಿತ್ತಲು, ಹೊರಂಗಣ ಮತ್ತು ಟೆರೆಸ್‌ನಲ್ಲಿ ಸಾವಯವ ಗೊಬ್ಬರವನ್ನು ಬಳಸಿಕೊಂಡು ತರಕಾರಿ, ಹೂ, ಹಾಗೂ ಹಣ್ಣುಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆದು ಸೇವಿಸುವುದರಿಂದ ಆರೋಗ್ಯ ವೃದ್ಧಿಯ ಜತೆಗೆ ಹಣ ಉಳಿತಾಯವಾಗುತ್ತದೆ.”

ಸಸ್ಯಗಳಿಗೆ ನೀರು ಹಾಕುತ್ತಿರುವುದು

 ರಾಜಧಾನಿ ಸಿಲಿಕಾನ್ ಸಿಟಿಯ ಕಂಪನಿಯೊAದರಲ್ಲಿ ಕೃಷಿ ಭೂಮಿಗೆ ಹನಿ ನೀರಾವರಿ ಮಾಡುವ ಉದ್ಯೋಗಕ್ಕೆ ಸೇರಿದ ಗಿರೀಶ್ ಕುಮಾರ್ ಪ್ರತಿ ದಿನ ರೈತರ ಕೃಷಿ ಭೂಮಿಗೆ ಹೋಗಿ ಡ್ರಿಪ್ ಜೋಡಿಸಿ ಕೆಲಸ ಮುಗಿಸಿ ಬರುತ್ತಿದ್ದರು. 

ದುಬಾರಿ ದುನಿಯಾ ನಗರದಲ್ಲಿ ಹೆಚ್ಚು ಬೆಲೆ ಕೊಟ್ಟು ಆಹಾರ ಪದಾರ್ಥಗಳನ್ನು ಕೊಂಡು ಜೀವನ ಮಾಡಲು ಸಾಧ್ಯವಾಗದ ನಿಟ್ಟಿನಲ್ಲಿ ಬೇಸತ್ತು, ತನ್ನ ಹುಟ್ಟೂರು ಆದ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ತನ್ನ ಮನೆಗೆ ವಾಪಾಸ್ ಬಂದು ಜೀವನ ನಡೆಸುವ ಗಿರೀಶ್ ಬಿ.ಎ ಹಾಗೂ ಐಟಿಐ ವಿದ್ಯಾಭ್ಯಾಸ ಮಾಡಿ, ಸ್ವಯಂ ಸೇವಾ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತ ಹುಟ್ಟೂರಲ್ಲೇ ನೆಲೆಸಿದ್ದಾರೆ.

ಗ್ಲೂಕೋಸ್‌ಬಾಟಲ್, ವಾಟರ್‌ಬಾಟಲ್, ಕುಂಡ ಮತ್ತು ತಂಪುಪಾನೀಯ ಬಾಟೆಲ್‌ಗಂತಹ ತ್ಯಾಜ್ಯ ಪ್ಲಾಸ್ಟಿಕ್‌ಗಳನ್ನು ಶೇಖರಿಸಿಟ್ಟುಕೊಂಡು, ಅದರಲ್ಲಿ ಮಣ್ಣು ತುಂಬಿ, ಸಾವಯವ ಗೊಬ್ಬರವನ್ನು ಬಳಸಿ ದಿನಬಳಕೆಯ ಹೂ, ಹಣ್ಣು, ತರಕಾರಿ, ಮತ್ತು ಸೊಪ್ಪುಗಳನ್ನು ಬೆಳೆದು ಪ್ರತಿ ದಿನಲೂ ಉಪಯೋಗಿಸುತ್ತಿದ್ದಾರೆ.

ಬಹುಮುಖ ಪ್ರತಿಭೆಯುಳ್ಳ ಗಿರೀಶ್‌ರವರ ಪ್ರತಿಭೆಯನ್ನು ಹಿಂಭಾಲಿಸಿದ ಐಡಿಎಫ್ ಸ್ವಯಂ ಸೇವ ಸಂಸ್ಥೆಯು ಹೆಚ್ಚಿನ ತರಬೇತಿಯನ್ನು ನೀಡಿ ಇನ್ನಷ್ಟು ಮಾರ್ಗಗಳನ್ನು ಅಳವಡಿಸಿಕೊಂಡು ಇನ್ನೂ ಹೆಚ್ಚಿನ ತರಕಾರಿಗಳನ್ನು ಬೆಳೆಯುವಂತೆ ಮಾರ್ಗದರ್ಶನವನ್ನು ನೀಡಲಾಯಿತು.

 ಪ್ಲಾಸ್ಟಿಕ್ ತ್ಯಾಜ್ಯದಿಂದ ಮರುಜೀವ: ಖಾಸಗಿ ಆಸ್ಪತ್ರೆಗೆ ಹೋಗಿ ರೋಗಿಗಳಿಗೆ ಡ್ರಿಪ್ ಹಾಕಿ ಎಸೆಯುವ ಸೆಟ್‌ನ್ನು ಪರಿಚಿತರಿಂದ ಕೇಳಿ ಉಚಿತವಾಗಿ ಪಡೆದುಕೊಂಡು ಬಂದು ಕುಂಡದ ಸಸ್ಯಕ್ಕೆ ಡ್ರಿಪ್ ಪೈಪ್ ಮೂಲಕ ಹನಿಹನಿ ನೀರು ಗಿಡಗಳಿಗೆ ಹಾಯುವಂತೆ ಮಾಡಿ, ಬಳಕೆಗೆ ಬಾರದೆ ಇರುವಂತಹ ಪ್ಲಾಸ್ಟಿಕ್‌ಗೆ ಮರುಜೀವ ತಂದಿದ್ದಾರೆ.

ಡ್ರಿಪ್ ಬಾಟಲ್

ಡ್ರಿಫ್ ಸೆಟ್‌ನಲ್ಲಿ ನೀರು ನಿರ್ವಹಣೆ: ಮೊದಲು ಗಿಡಗಳಿಗೆ ಪ್ರತಿ ದಿನ ನೀರನ್ನು ಜಗ್‌ನಿಂದ ಹಾಕಬೇಕಿತ್ತು. ಇದರಿಂದ ಸಮಯವು ವ್ಯರ್ಥವಾಗುತ್ತಿತ್ತು. ನೂತನ ಪದ್ದತಿಯನ್ನು ಮಾಡಿರುವುದರಿಂದ ಒಂದು ವಾರಕ್ಕೆ ಗ್ಲೂಕೋಸ್ ಬಾಟಲಿಗೆ ಒಂದು ಜಗ್ ನೀರು ಹಾಕಿದರೆ ಸಾಕಾಗುತ್ತದೆ ಎಂದು ತಿಳಿಸುತ್ತಾರೆ ಗಿರೀಶ್‌ಕುಮಾರ್. 

ಇವರ ಎರಡು ಎಕರೆ ಜಮೀನಿನಲ್ಲಿ ಅಡಕೆ, ತೆಂಗು, ಬಾಳೆಯನ್ನು ಬೆಳೆದಿದ್ದು ಹಣ್ಣಿನ ಗಿಡಗಳಾದ ದಾಳಿಂಬೆ, ನಿಂಬೆ, ಸೀಬೆ, ಹಲಸು, ಮಾವು ಇನ್ನೂ ಮುಂತಾದ ಗಿಡಗಳನ್ನು  ಬದುಗಳಲ್ಲಿ ಹಾಕಿದ್ದಾರೆ. ತೋಟದಲ್ಲಿ ಕೃಷಿ ಇಲಾಖೆಯ ಆಶ್ರಯದಲ್ಲಿ ಜೀವಸಾರ ಘಟಕ, ಎರೆಹುಳು ಘಟಕಗಳನ್ನು ಮಾಡಿಕೊಂಡು  ಸಾವಯವ ಗೊಬ್ಬರವನ್ನು ತಯಾರು ಮಾಡುತ್ತಿದ್ದಾರೆ. 

ಪೂಜೆಗೆ ಹೂ : ಹೂವಿನ ಬೆಲೆ ಗಗನಕ್ಕೆ ಏರಿದ ದಿನದಲ್ಲಿ ಮನೆಯಲ್ಲಿ ದಿನದ ಪೂಜೆಗೆ ಆಗುವಷ್ಟು ಹೂವನ್ನು ಬೆಳೆದು ಪೂಜೆಗೆ ಬಳಸುತ್ತಿರುವುದರಿಂದ ಪ್ರತಿದಿನ ಸುಮಾರು 30 ರೂಗಳು ಹೂವಿನಿಂದ ಗಿರೀಶ್ ಕುಟುಂಬಕ್ಕೆ ಉಳಿತಾಯವಾಗುತ್ತಿದೆ. ಹಾಗೂ ತರಕಾರಿಯಿಂದ ದಿನಲ್ಲಿ 30 ರೂಗಳು ಉಳಿತಾಯವಾಗಿದ್ದು, ಒಟ್ಟು ದಿನಲ್ಲಿ 60 ರೂಗಳಂತೆ ಮಾಸಿಕ ಸರಿ ಸುಮಾರು 1800 ಕ್ಕಿಂತ ಹೆಚ್ಚಿನ ಹಣ ಕುಟುಂಬಕ್ಕೆ ಉಳಿತಾಯವಾಗುತ್ತಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9880674777 

 ಬೃಹದಾಕಾರವಾಗಿ ಬೆಳೆಯುತ್ತಿರುವ ನಗರ ಪ್ರದೇಶದಲ್ಲಿ ಕಷ್ಟ ಪಟ್ಟು ಜೀವನ ಮಾಡುವುದಕ್ಕಿಂತ ಹಳ್ಳಿಯಲ್ಲೇ ಇದ್ದು ಪ್ರಕೃತಿಯಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ನೆಮ್ಮದಿಯ ಜೀವನವನ್ನು  ಮಾಡುವ ಸರಳ ದಾರಿಯನ್ನು ಇತರರು ಕಂಡು ಕೊಂಡು ಇತರರು ಉತ್ತಮ ಜೀವನ ಮಾಡುವಂತಾಗಬೇಕು.  – ಗಿರೀಶ್ ಕುಮಾರ್,ಗುಬ್ಬಿ

LEAVE A REPLY

Please enter your comment!
Please enter your name here