ಗುಬ್ಬಿ : ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಒಣಗಿ  ನಿಂತಿದ್ದ ಮರವು ಆಕಸ್ಮಿಕವಾಗಿ ಗುಬ್ಬಿ ರೈಲ್ವೆ ಸ್ಟೇಷನ್  ರಸ್ತೆಯ ಮೇಲೆ ಬೆಳಗ್ಗೆ 6 ಗಂಟೆ ಸಮಯದಲ್ಲಿ ಬಿದ್ದ ಪರಿಣಾಮ ಕೆಲವು ಗಂಟೆಗಳ ಕಾಲ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು.

 ರಸ್ತೆಯಲ್ಲಿ ಬಿದ್ದಿ ಸಮಯದಲ್ಲಿ ರೈತ ಮುಖಂಡ ಲೋಕೇಶ್ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸಹಕಾರ ಪಡೆದು ರಂಬೆ ಕೊಂಬೆಗಳನ್ನು ಕತ್ತರಿಸುವ ಮೂಲಕ  ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಮಯದಲ್ಲಿ ಮರ  ಬಿದ್ದಿರುವುದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ತಾಲೂಕಿನ ನಾನಾ ಭಾಗಗಳಲ್ಲಿ ರಸ್ತೆಯ ಪಕ್ಕದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದರಿಂದ ಕೆಲವು ಮರಗಳು ಒಣಗಿ ನಿಂತಿವೆ. ಆ ಮರಗಳು ಸಂಚಾರ ಮಾಡುವವರ ಪ್ರಾಣಕ್ಕೆ ಕಾದು ನಿಂತಿವೆ. ಇಂತಹ ಮರಗಳನ್ನು ಅರಣ್ಯ ಇಲಾಖೆಯವರು ಗುರುತಿಸಿ ಅವುಗಳನ್ನು ತೆರವುಗೊಳಿಸಬೇಕು. ತ್ವರಿತವಾಗಿ ಒಣಗಿದ ಮರಗಳನ್ನು ತೆರವುಗೊಳಿಸದಿದ್ದರೆ ಅರಣ್ಯ ಇಲಾಖೆಯ ಮುಂದೆ ರೈತ ಸಂಘ ಹಾಗೂ ಸಾರ್ವಜನಿಕರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಕಾರ್ಯದರ್ಶಿ ಸಿ.ಜಿ ಲೋಕೇಶ್ ತಿಳಿಸಿದರು.

 ಶಾಲಾ ಆವರಣದಲ್ಲಿ ಒಣಗಿದ ಮರವಿರುವುದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ವಿಷಯ. ಮಕ್ಕಳು ಮರದ ಕೆಳಗೆ ಆಟವಾಡುತ್ತಿರುತ್ತಾರೆ ಅಥವಾ ಕುಳಿತುಕೊಳ್ಳುತ್ತಾರೆ, ಹಾಗಾಗಿ ತಕ್ಷಣದ ಕ್ರಮ ಕೈಗೊಂಡು ತೆರವು ಗೊಳಿಸಬೇಕು  ಎಂದು  ಪೋಷಕ ಜಗದೀಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here