ಗುಬ್ಬಿ, :  ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ 25ನೇ ವರ್ಷದ ರಜತಮಹೋತ್ಸವದ ಫೌಂಡೇಶನ್ ಡೇ ನವೆಂಬರ್ 29 ರಂದು  ಬೆಳಗ್ಗೆ 9.30 ಕ್ಕೆ ಆರಂಭವಾಗಲಿದೆ ಎಂದು ಸಿಐಟಿ ಕಾಲೇಜಿನ ಡೀನ್ ಡಾ.ಗಿರಿಧರ್.ಎಸ್. ಕುಲಕರ್ಣಿ ತಿಳಿಸಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯವು 2001ನೇ ವರ್ಷದಲ್ಲಿ ಸ್ಥಾಪನೆಯಾಗಿದ್ದು, ಇಲ್ಲಿಗೆ 25 ವರ್ಷಗಳನ್ನು ಪೂರೈಸುತ್ತಿದೆ. ಈ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ತೊಡಗಿದ್ದು, ದೇಶವಿದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿರುವ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದ್ದು ಇದರ ರಜತ ಮಹೋತ್ಸವವು ಇಂದು ನವಂಬರ್ 29 ರಂದು ಫೌಂಡೇಶನ್ ಡೇ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಕಾರ್ಯಕ್ರಮದಲ್ಲಿ  ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆಯ ಸಲಹೆಗಾರ ಡಾ.ರಿಷಿ ಮೋಹನ್ ಭಟ್ನಾಕರ್, ಪದ್ಮಶ್ರೀ ಪುರಸ್ಕೃತ ಶ್ರೀ ಹರಿಕಾಲ ಅಜ್ಜಪ್ಪ, ಸಿ ಐ ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ ಎಸ್ ಬಸವರಾಜು, ಶಾಸಕ ಜಿ ಬಿ ಜ್ಯೋತಿ ಗಣೇಶ್, ಕಾಲೇಜಿನ ನಿರ್ದೇಶಕ ಡಾ. ಸುರೇಶ್ ಡಿ ಎಸ್, ಉಪ ಪ್ರಾಂಶುಪಾಲರಾದ ಡಾ. ಶಾಂತಲಾ ಸಿಪಿ ಸೇರಿದಂತೆ ಇನ್ನಿತರರು ಭಾಗಿಯಾಗುತ್ತಾರೆ. 

ಇದೆ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು  ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು.

ಕಾಲೇಜಿನ ಪಿ ಆರ್ ಓ ಶ್ರೀ ಹರ್ಷ ಎಸ್ ಆರ್  ಇದ್ದರು.

LEAVE A REPLY

Please enter your comment!
Please enter your name here