ಗುಬ್ಬಿ : ಕ್ರೈಸ್ತ ಹಬ್ಬಗಳು ಮಾನವೀಯತೆ, ತ್ಯಾಗ, ಕ್ಷಮೆ ಮತ್ತು ದೇವರ ಮೇಲಿನ ಅಚಲವಾದ ನಂಬಿಕೆಯನ್ನು ಜಗತ್ತಿಗೆ ಸಾರುವ ಪವಿತ್ರ ಸಂದರ್ಭ ಕ್ರಿಸ್ಮಸ್ ಹಬ್ಬ ಎಂದು ಫಾದರ್ ರವರೆಂಟ್  ಇಮಾನವೆಲ್ ಜೋನ್ಸನ್ ತಿಳಿಸಿದರು.

ಪಟ್ಟಣದ ವಿಲಿಯಂ ಆರ್ಥರ್ ಚರ್ಚ್ ನಲ್ಲಿ ಹಮ್ಮಿಕೊಂಡಿದ್ದ ಕ್ರಿಸ್ಮಸ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅವರು, ಕ್ರಿಸ್ಮಸ್ ಹಬ್ಬಕ್ಕೆ  ಜಗತ್ತಿನಾದ್ಯಂತ ರಜೆ ನೀಡಿ ಆಚರಣೆ ಮಾಡಲಾಗುತ್ತದೆ.  ಕ್ರೈಸ್ತ ಹಬ್ಬದಲ್ಲಿ  ಲೋಕಕ್ಕೆ ಸಂತೋಷ ತರುವಂತೆ ಪ್ರಾರ್ಥನೆ ಮಾಡಲಾಗುತ್ತದೆ. 

ಕ್ರಿಸ್ಮಸ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಯೇಸುವಿನ ಜನ್ಮದಿನದಂದು ಈ ಪವಿತ್ರ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ದೇವರ ಮಗ ಮತ್ತು ಮಾನವೀಯತಯ ವಿಮೋಚಕ ಎಂದು ಪೂಜಿಸಲ್ಪಟ್ಟ  ಯೇಸುವಿನ ಜನ್ಮದಿನವನ್ನು  ಆಚರಿಸುವ, ಗೌರವಿಸುವ ಪವಿತ್ರ ದಿನವಾಗಿದೆ ಎಂದರು.

ವರ್ಷದ ಕೊನೆಯಲ್ಲಿ ಹಿಂದೆ ನಡೆದ ಕಹಿ ಸಮಸ್ಯೆ ಮತ್ತು ಘಟನೆಗಳನ್ನು ಮರೆತು ಹೊಸ ವಿಚಾರಗಳ ಬಗ್ಗೆ ಚರ್ಚಿಸಿ ಯೋಜನೆಯನ್ನು ರೂಪಿಸಬೇಕು. ಜೀವಿತ ಅವಧಿ ಬಹಳ ಸಣ್ಣದು, ಇವರುಷ್ಟು ದಿನ ಬಹಳಷ್ಟು ಸಂತೋಷವಾಗಿರಬೇಕು. ಪ್ರತಿಯೊಬ್ಬರು ತಮ್ಮ ಮನಸ್ಸಿನಲ್ಲಿ ಕ್ರಿಸ್ತನಿಗೆ ಸ್ಥಳಕೊಡಬೇಕು ಎಂದು ಹೇಳಿದರು.

ಗುಬ್ಬಿಯ ಚರ್ಚ್ ವಿಶೇಷವೇನೆಂದರೆ ಹಬ್ಬದ ಹಿಂದಿನ ರಾತ್ರಿ ಕ್ರೈಸ್ತ ಮತದ ಎಲ್ಲರ ಮನೆ ಮನೆಗೆ ಭೇಟಿ ನೀಡಿ ಪ್ರಾರ್ಥನೆ ಮಾಡುವ ಮೂಲಕ ಹಬ್ಬದ ಶುಭಾಶಯ ಕೋರಲಾಗುತ್ತದೆ.

ಅಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ್ ದಾಸ್, ಖಜಾಂಚಿ ಉಷಾಕುಮಾರಿ, ವಿಜಯ್ ಕುಮಾರ್, ಸಿ ಡ್ಯಾನಿಯಲ್, ಪಿಲಿಪ್ಸ್ ಮನೋಜ್ ಇತರರು ಇದ್ದರು. 

LEAVE A REPLY

Please enter your comment!
Please enter your name here