
ಗುಬ್ಬಿ: ಹಲವು ವರ್ಷಗಳಿಂದ ನಿರಂತರ ಶೈಕ್ಷಣಿಕ ಸೇವೆ ನಡೆಸಿಕೊಂಡು ನಾಡಿನಾದ್ಯಂತ ಗುರುಕುಲ ಆಶ್ರಮ ಶಿಕ್ಷಣಕ್ಕೆ ಮಾನ್ಯತೆ ಪಡೆದುಕೊಂಡು ಅತ್ಯಾಧುನಿಕತೆಗೆ ತಕ್ಕಂತೆ ಶಿಕ್ಷಣ ಒದಗಿಸುವ ಚಿದಂಬರಾಶ್ರಮದ ಸೇವಾ ಸದನ ಶಿಕ್ಷಣ ಸಂಸ್ಥೆ ಚಿದಂಬರ ಸಂಭ್ರಮ-2026 ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಜ.3 ಶನಿವಾರ 3 ಗಂಟೆಗೆ ಏರ್ಪಡಿಸಲಾಗಿದ ಎಂದು ಸೇವಾ ಸದನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸಚ್ಚಿದಾನಂದ ಶರ್ಮ ತಿಳಿಸಿದ್ದಾರೆ.
ಪಟ್ಟಣದ ಹೊರವಲಯದ ಚಿದಂಬರಾಶ್ರಮದಲ್ಲಿ ಏರ್ಪಡಿಸಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿ, ಸೇವಾ ಸದನ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಈ ವರ್ಷ ಚಿದಂಬರ ಸಂಭ್ರಮ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡಸಲಾಗುತ್ತದೆ.
40ನೇ ಇಸವಿಯಿಂದ ನಮ್ಮ ಸನಾತನ ಧರ್ಮವನ್ನು ಕೇಂದ್ರವಾಗಿ ನಮ್ಮ ದೊಡ್ಡ ಗುರುಗಳಾದ ಚಿದಂಬರ ಸ್ವಾಮಿಗಳು ಸಮಾಜಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ಶಿಕ್ಷಣದಿಂದ ಮಾತ್ರ ಮುಂದಿನ ಸಮಾಜ ನಿರ್ಮಾಣ ಸಾಧ್ಯ ಅದಕ್ಕಾಗಿ ವಿಶೇಷ ಶಿಕ್ಷಣ ಭಾರತೀಯ ಕಾಲಕ್ಕೆ ತಕ್ಕಂತೆ ಕನ್ನಡ ಇಂಗ್ಲಿಷ್ ಮಾಧ್ಯಮ ಅಳವಡಿಸಬೇಕು ಎಂಬ ಆಶ್ರಯದಲ್ಲಿ ಶಿವ ಚಿದಂಬರ ಸ್ವಾಮಿಗಳು ನಡೆಸುಕೊಂಡು ಬಂದಿದ್ದಾರೆ. ಆ ದಾರಿಯಲ್ಲಿ ನಾವು ಆಶ್ರವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ಸಮಾರಂಭದ ಉದ್ಘಾಟನೆಯನ್ನು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನ ಮಾಜಿ ನಿರ್ದೇಶಕ ಡಾ.ನಂದಿನಿ ಲಕ್ಷ್ಮಿಕಾಂತ್ ಮಾಡುವರು. ಮುಖ್ಯಅತಿಥಿಗಳು ಶಾಸಕ ಸರ್ ಶ್ರೀನಿವಾಸ್,
ಕರ್ನಾಟಕ ಬ್ಯಾಂಕ್ ಉಪ ಮಹಾಪ್ರಬಂಧಕ ಕೆ.ಎಲ್. ಶೇಷಾದ್ರಿ, ಸೇವಾ ಸದನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ವಿ. ಲಕ್ಷ್ಮಿಕಾಂತ್, ಹೋಲಿಸ್ಟಿಕ್ ಹೆಲ್ತ್ ಕೇರ್ ಸೆಂಟರ್ ಪ್ರಖ್ಯಾತ ವೈದ್ಯರಾದ ಡಾ. ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ನಟರಾಜು, ಸಬ್ ಇನ್ಸ್ಪೆಕ್ಟರ್ ಸುನಿಲ್‌ಕುಮಾರ್,ಗ್ರಾಮ ಪಂಚಾಯತಿ ಸದಸ್ಯರಾದ ಗೋಪಿನಾಥ್, ಅರುಣಾಕುಮಾರಿ ಮತ್ತಿತರರು ಭಾಗವಹಿಸುವರು.





