ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಮಣಿಕುಪ್ಪೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ನಾರಸಿಂಹಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. 

ಏ.3 ರಂದು ಬೆಳಗಿನ ಜಾವದಿಂದ ಜಾತ್ರೆ ಅಂಗವಾಗಿ ದೇವರುಗಳಿಗೆ ವಿವಿಧ ಅಭಿಷೇಕಗಳು, ವಿಶೇಷ ಪೂಜೆಗಳು ನಡೆದವು. ನಂತರ ಮಧ್ಯಾಹ್ನದ ಬಿಸಿಲಿನಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆ, ರಾಸಾಯನ, ಲಾಡು ವಿತರಿಸಿದರು. 

ಶುಕ್ರವಾರ ಮಧ್ಯಾಹ್ನ  ಸಣ್ಣ ರಥೋತ್ಸವ ನಡೆಯಿತು. ದೊಡ್ಡ ತೇರಿಗೆ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಮಂಗಳ ವಾಧ್ಯಗಳೋಂದಿಗೆ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಬಾಳೆಹಣ್ಣು ದವನ ಸಿಗಿಸಿ ಸೂರು ಬಿಟ್ಟು ತಮ್ಮ ಭಕ್ತಿ ಸಮರ್ಪಿಸಿದರು. ಕೆಲವು ಭಕ್ತರು ರಥದ ಗಾಲಿಗೆ 101 ತೆಂಗಿನಕಾಯಿ ಹೊಡೆಯುವ ಮುಲಕ ಹರಕೆ ತಿರಿಸಿದರು. 

ಜಾತ್ರೆಗೆ ಬಂದ ಭಕ್ತರಿಗೆ ಎರಡು ಕಡೆ ದಾಸೋಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಜಾತ್ರೆಗೆ ಪೋಲೀಸ್ ಬಂದಬಸ್ತು ಮಾಡಲಾಗಿತ್ತು. ತೇರು ಎಳೆಯುತ್ತಿದ್ದಂತೆ ಸೂರು ಬಿಟ್ಟ ಬಾಳೆಹಣ್ಣುಗಳನ್ಬು ಸ್ವಚ್ಛ ಮಾಡಿ ನಾಟಕ ಹಾಡಲು ಸ್ಥಳಾವಕಾಶ ಮಾಡಲಾಯಿತು. 

ಜಾತ್ರಾ ಮಹೋತ್ಸವದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಎಂ ಸಿ ವೆಂಕಟೇಶ್ ಮಾತನಾಡಿ ಸುಮಾರು 800 ವರ್ಷಗಳ ಇತಿಹಾಸವಿರುವ ಈ  ದೇವಸ್ಥಾನ. ರಾಜ್ಯದಲ್ಲಿ ನಾರಸಿಂಹಸ್ವಾಮಿ ಹಾಗೂ ಆಂಜನೇಯಸ್ವಾಮಿ ಇರುವ ದೇವಸ್ಥಾನ ಕೆಲವೆ ಮಾತ್ರ. ಅದರಲ್ಲಿ ಮಣಿಕುಪ್ಪೆ ಗ್ರಾಮ. ಪ್ರತಿ ವರ್ಷ ನಾವು ಟ್ರಸ್ಟ್ ಮಾಡಿಕೊಂಡು ಅದ್ದೂರಿಯಾಗಿ ಜಾತ್ರೆ ನಡೆಸಿಕೊಂಡು ಬರುತ್ತಿದ್ದೇವೆ ಎಂದರು. 

ಜಾತ್ರೆಯಲ್ಲಿ ಉಪಾಧ್ಯಕ್ಷ ಎಂ.ಎಸ್.ನರಸೇಗೌಡ,  ಎಂ.ಹೆಚ್.ನಾಗರಾಜು, ಎಂವಿ ಕೃಷ್ಣಮೂರ್ತಿ ಮಾತನಾಡಿ ಜಾತ್ರೆಯ ವಿಶೇಷದ ಬಗ್ಗೆ ತಿಳಿಸಿದರು.

ಜಾತ್ರೆಯಲ್ಲಿ ಶಾಕಸ ಎಂಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್,  ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು, ಪಿಎಸ್ಐ ಧರ್ಮಾಂಜಿ, ಎಂ ಆರ್ ಚಂದ್ರೇಗೌಡ, ಟ್ರಸ್ಟ್ ಅಧ್ಯಕ್ಷ ಎಂ.ಸಿ ವೆಂಕಟೇಶ್, ಎಂ.ಎಚ್.ನಾಗರಾಜು, ಗಂಗಾಹನುಮಯ್ಯ, ನರಸೇಗೌಡ, ಎಸ್.ನಾರಾಯಣ್, ಎಂ.ವಿ.ಕೃಷ್ಣಮೂರ್ತಿ, ರಾಮಣ್ಣ, ಕಾಳೇಗೌಡ, ಶಿವನಂಜೇಗೌಡ, ತಿಮ್ಮನಗೌಡ, ರಾಮಸಂಜೀವಯ್ಯ, ಕೃಷ್ಣೋಜಿರಾವ್ ಶಿಂಧೆ, ಶ್ರೀಕಂಠಮೂರ್ತಿ,ಪುಟ್ಟದಾಸ್,  ದೇವಸ್ಥಾನದ ಸೇವಾ ಟ್ರಸ್ಟ್ ಗಳು,  ಧರ್ಮದರ್ಶಿಗಳು, ಅರ್ಚಕರು, ಯುವಕ ಸಂಘದ ಸದಸ್ಯರು, ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದೇ ದಿನ ರಾತ್ರಿ ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿವತಿಂದ ಸಂಪೂರ್ಣ ರಾಮಾಯಣ ನಾಟಕವನ್ನು ಏರ್ಪಡಿಸಲಾಗಿತ್ತು. 

LEAVE A REPLY

Please enter your comment!
Please enter your name here