ಗುಬ್ಬಿ : ಸಾಹಿತ್ಯ ಆಸಕ್ತರು ಸುಮಧುರ ಸಮಾಜ ಕಟ್ಟುತ್ತಿದ್ದಾರೆ ಹಾಗೂ ಬರಹಗಳ ಮುಖೇನ ಸಮಾಜ ತಿದ್ದುವ ಕೆಲಸವನ್ನು ಮಾಡುತ್ತಿದ್ದಾರೆ, ಇಂತವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತಮ ಕೆಲಸವಾಗಿದೆ. ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.

ಗುಬ್ಬಿ ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ 2024ನೇ ಸಾಲಿನ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನ ಮತ್ತು ದತ್ತಿ ಬಹುಮಾನ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಅವರು,ಗುಬ್ಬಿ ತಾಲೂಕು ಸಾಹಿತ್ಯ,ಕಲೆಯನ್ನು ತೌವರು. ಕಲೆಗೆ ಹೆಚ್ಚು ಕಾಣಿಕೆ ನೀಡಿದಂತ ತಾಲೂಕು ಗುಬ್ಬಿಯಾಗಿ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ನನ್ನಗೆ ಸಾಹಿತಿಗಳನ್ನು ಸನ್ಮಾನಿಸುತ್ತಿರುವುದು ಸಂತೋಷವಾಗುತ್ತದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಪತ್ರಿಕೆ ಹಾಗೂ ಟಿವಿಯಲ್ಲಿ ನೋಡಿದ್ದೆ, ಅವರ ಪಕ್ಕದಲ್ಲಿ ಕುಳಿತು ಕೊಳ್ಳುವುದು ನನ್ನ ಸೌಭಾಗ್ಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ಸಹಾಯ ಧನ ಹಾಗೂ ಕಲಾತಂಡಗಳನ್ನು ಕಳಿಸಿಕೊಡುವ ಕೆಲಸ ಮಾಡಬೇಕು ಎಂದು ನಿರ್ದೇಶಕರಿಗೆ ತಿಳಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು
2024 ರಗೌರವ ಪ್ರಶಸ್ತಿಯನ್ನು ಡಾ.ಎಂ.ಬಸವಣ್ಣ, ಡಾ.ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್, ಡಾ. ಡಿ.ಬಿ.ನಾಯಕ ಹಾಗೂ ಡಾ. ವಿಶ್ವನಾಥ್ ಕಾರ್ನಾಡ್ ಇವರನ್ನು ಗೌರವಿಸಲಾಯಿತು.
ಹತ್ತು ಜನ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು: ಡಾ. ಬಿ.ಎಂ. ಪುಟ್ಟಯ್ಯ, ಪದ್ಮಾಲಯ ನಾಗರಾಜ್, ಡಾ. ಕೆ. ನಾರಾಯಣಸ್ವಾಮಿ, ಡಾ. ಸಬಿತಾ ಬನ್ನಾಡಿ, ಡಾ. ಮಮತಾ ಜಿ. ಸಾಗರ, ಡಾ. ಗುರುಲಿಂಗಪ್ಪ ಧಬಾಲೆ, ಅಬ್ದುಲ್ ಹೈ ತೋರಣಗಲ್ಲು, ಬಿ.ಯು. ಸುಮಾ, ಡಾ.ಎಚ್.ಎಸ್. ಅನುಪಮಾ, ಡಾ. ಅಮರೇಶ ಯತಗಲ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸೇರಿದಂತೆ 41 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಎಲ್ಲಾ ಕಾರ್ಯಕ್ರಮಗಳನ್ನು ಕೇಂದ್ರ ಸ್ಥಾನವಾದ ಬೆಂಗಳೂರಿನಲ್ಲಿ ನಡೆಸಲಾಗುತ್ತಿತ್ತು. ಸಾಹಿತ್ಯ ಅಕಾಡೆಮಿಯ ತೀರ್ಮಾನದಂತೆ ಗ್ರಾಮೀಣ ಪ್ರದೇಶದಲ್ಲೂ ಸಹ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮಾಡಿರುವುದು ಇಂದು ಗುಬ್ಬಿ ತಾಲ್ಲೂಕು ಸಾಕ್ಷಿಯಾಗಿದೆ. ಕಡಬ ಮೊದಲು ತಾಲ್ಲೂಕು ಕಷ್ಟವಾಗಿತ್ತು , ನಂತರ ಗುಬ್ಬಿಯು ತಾಲೂಕು ಆಗಿತು ಎಂದು ಹೇಳಿ ಗುಬ್ಬಿಯಲ್ಲಿ ಓಡಾಡಿದ ನೆನಪುಗಳನ್ನು ಸ್ಮರಿಸಿಕೊಂಡರು.
ಗುಬ್ಬಿ ವೀರಣ್ಣ ಟ್ರಸ್ಟ್ ಅಧ್ಯಕ್ಷೆ ಡಾ.ಬಿ.ಜಯಶ್ರೀ ಮಾತನಾಡಿ, ಪ್ರಶಸ್ತಿ ಪುರಸ್ಕೃತರು ಗುಬ್ಬಿಯ ರಂಗ ಮಂದಿರಕ್ಕೆ ಬಂದಿರುವುದು ಟ್ರಸ್ಟ್ ಸೌಭಾಗ್ಯ, ಈ ಮಹಮನೆ ನೀವೆಲ್ಲರೂ ಆರಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೈಸೂರು, ಹಾವೇರಿ ಇನ್ನೂ ಮುಂತಾದ ಕಡೆ ಜೈಲಿನಲ್ಲಿ ಕವಿಕಾವ್ಯ ಕಮಟಗಳನ್ನು ಇನ್ನೂ ಮುಂತಾದ ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಯುವ ಕವಿಗಳು,ಲೇಖಕರನ್ನು ಪ್ರೋತ್ಸಾಹಿಸುವಟ ನಿಟ್ಟಿನಲ್ಲಿ ಅವರ ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಮಾಡುತ್ತಿದೆ. ಸಾಹಿತ್ಯ ಆಸಕ್ತರನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುತ್ತಿದೆ. ಸಾಹಿತ್ಯ ಅಕಾಡೆಮಿ ಅನುದಾನವನ್ನು ಅತ್ಯಂತ ಕ್ರಿಯಾಶೀಲವಾಗಿ ಬಳಕೆ ಮಾಡಿಕೊಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಲೋಹಿಯ ಮತ್ತು ಇತರೆ ಮಹನೀಯರ ಕೃತಿಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಸದಸ್ಯ ಸಂಚಾಲಕ ಸುಮಸತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್ ದಾಸ್, ಗುಬ್ಬಿ ರಜೇಶ್, ಕಾಡಶೆಟ್ಟಿಹಳ್ಳಿ ಸತೀಶ್,ಡಿಡಿಪಿಐ ಬಾಲಗುರುಮೂರ್ತಿ, ಕರ್ನಾಟಕ ಅಕಾಡೆಮಿಯ ಸಮಿತಿ ಸದಸ್ಯರು, ಸಿಬ್ಬಂದಿಗಳು, ಸಾಹಿತ್ಯ ಅಭಿಮಾನಿಗಳು, ದತ್ತಿ ಬಹುಮಾನ ಪುರಸ್ಕೃತರು, ಪುಸ್ತಕ ಬಹುಮಾನ ವಿಜೇತರು ಇತರರು ಉಪಸ್ಥಿತರಿದ್ದರು.





