ಗುಬ್ಬಿ : ಗ್ರಾಮ ಮಟ್ಟದ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಬಗೆಹರಿಸಿಕೊಂಡು ಗ್ರಾಮೀಣ ಭಾಗದ ರೈತರಿಗೆ ಅನುಕೂಲ  ಮಾಡಬೇಕು ಎಂದು  ಗುಬ್ಬಿ ಶಾಸಕ ಎಸ್. ಆರ್ ಶ್ರೀನಿವಾಸ್  ತಿಳಿಸಿದರು.

 ತಾಲೂಕಿನ ಅಂಕಸoದ್ರ ಗ್ರಾಮ ಪಂಚಾಯಿತಿಯ  ನೂತನ ಕಟ್ಟಡವನ್ನು  ಉದ್ಘಾಟಿಸಿ ಮಾತನಾಡ, ಗ್ರಾಮ ಪಂಚಾಯಿತಿ      ಮಟ್ಟದ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರೆ ಏನು ಪ್ರಯೋಜನವಿಲ್ಲ. ಗ್ರಾಮಸ್ಥರ ಸಹಕಾರ ಪಡೆದು ರಸ್ತೆ,ನೀರು, ಚರಂಡಿ ಸಮಸ್ಯೆಗಳನ್ನ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

 ಈ ಭಾಗದ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಹಾಗೂ ಕೊಳವೆ ಬಾವಿಗಳ ಅಂತರ್ಜಲ  ಹೆಚ್ಚಿಸುವ ಉದ್ದೇಶದಿಂದ ಸುಮಾರು ವರ್ಷ ನೆನೆಗುದ್ದಿಗೆ  ಬಿದ್ದಿದ್ದ ಹೇಮಾವತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಪೈಪಗಳು  ಬಂದಿದ್ದು ಕೆಲವೇ ದಿನಗಳಲ್ಲಿ  ಕಾಮಗಾರಿ ಆರಂಭವಾಗುತ್ತದೆ ಎಂದರು. ಅಂಕಸಂದ್ರ  ಹಾಗೂ ಮಂಚನ ದೊರೆ  ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ರಸ್ತೆ ಕಾಮಗಾರಿಗಳು ನಡೆಯಬೇಕಿದ್ದು ರಸ್ತೆ ನಿರ್ಮಾಣ ಮಾಡಲು ಸಣ್ಣ ಪುಟ್ಟ ಅಡೆತಡೆಗಳು ಎದುರಾಗುತ್ತಿವೆ ರೈತರು ಸೇರಿ ಸಮಸ್ಯೆಗಳನ್ನ ಬಗೆಹರಿಸಿಕೊಂಡು ಕಾಮಗಾರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

 ಅಂಕಸಂದ್ರ  ಹಾಗೂ ಮಂಚಲದೊರೆ ಗ್ರಾಮ ಪಂಚಾಯಿತಿಗಳು ಹಿಂದುಳಿದ ಪ್ರದೇಶವಾಗಿದ್ದು ಈ ಭಾಗಕ್ಕೆ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದು. ಹೇಮಾವತಿ ನೀರಿಗಾಗಿ ಅಂಕಸಂದ್ರ  ಹಾಗೂ ಮಂಚಲ ದೊರೆ ಎರಡು  ಪಂಚಾಯಿತಿಯವರು ಚುನಾವಣೆಯನ್ನು ಈ ಭಾಗದಲ್ಲಿ ಬಹಿಷ್ಕಾರ ಮಾಡಿದ್ದರು ಈಗ ಈ ಭಾಗದಲ್ಲಿ ಕಾಮಗಾರಿ ಆರಂಭವಾಗುತ್ತಿದೆ ಎಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ಇಒ ರಂಗನಾಥ್ ಮಾತನಾಡಿದರು.  ಅಂಕಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಸುಮಿತ್ರ ದೊಡ್ಡಿರಯ್ಯ, ಉಪಾಧ್ಯಕ್ಷೆ  ಸುಜಾತಾ ರಮೇಶ್, ಪಿಡಿಒ ರೇಖಾ, ಸದಸ್ಯರಾದ ಗುರುರಾಜು , ಗುರುಲಿಂಗಯ್ಯ, ಹನುಮಂತರಾಜು, ಭೂತಮ್ಮ, ನೇತ್ರಾವತಿ,ರೂಪ, ಸಿದ್ದರಾಮಯ್ಯ ಮೋಹನ್ ಕುಮಾರ್, ಜಯರಂಗಮ್ಮ ರಂಗನಾಥ್ ,  ಅನಿತಾ ಲಕ್ಷ್ಮೀ,  ಮಾಜಿ ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಸಣ್ಣ ರಂಗಯ್ಯ , ಕರಿಯಮ್ಮ ರಮೇಶ್ , ಲೆಕ್ಕ ಸಹಾಯಕ ಸುರೇಶ್ ಮುಖಂಡರಾದ ಮಂಚಲದೊರೆ  ರಮೇಶ್, ಸಣ್ಣರಂಗಯ್ಯ, ಗುರುರಾಜ್, ಲಕ್ಷ್ಮಣಪ್ಪ, ನಿವೇಶನ ದಾನಿಗಳಾದ ಎಸ್ ಗುರುಲಿಂಗಯ್ಯ , ಹನುಮಂತರಾಜು, ಉಪ ತಹಸಿಲ್ದಾರ್  ಪ್ರಕಾಶ್, ಗುತ್ತಿಗೆದಾರ ಗುರುರಾಜು  ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಉಪಸಿತರಿದ್ದರು.

LEAVE A REPLY

Please enter your comment!
Please enter your name here