ಗುಬ್ಬಿ:ತಾಲ್ಲೂಕಿನ ಸಿಎಸ್ ಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಪಾಠಶಾಲಾ ವಿಭಾಗಕ್ಕೆ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಮತ್ತು ಹಳೆಯ ವಿದ್ಯಾರ್ಥಿಗಳ ಹಾಗೂ ಎಸ್ ಡಿ ಎಂ ಸಿ ಯವರುಗಳ ಸಹಕಾರದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಡಿಜಿಟಲ್ ಕ್ಲಾಸ್ ರೂಮ್ ಮಾಡಲು ಸುಮಾರು 2.56 ಸಾವಿರ ವೆಚ್ಚದಲ್ಲಿ ಮಾಡಿಸಲಾಗಿದೆ. ಶಾಲೆಯಲ್ಲಿ ಮಕ್ಕಳ ವ್ಯಾಸಂಗ, ಚಲನಾ ವಲನಳನ್ನು ಗಮನಿಸಲು 10 ಕೊಠಡಿಗಳಿಗೆ ಮತ್ತು ಶಾಲೆಯ ಹೊರಾಂಗಣಕ್ಕೆ 2 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಪೋಷಕರುಗಳಿಗೂ ಸಹ ತಮ್ಮ ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ನಿಖರ ಮಾಹಿತಿಯನ್ನು ನೀಡಲು ಸಹಕಾರಿಯಾಗುತ್ತದೆ. ಮಕ್ಕಳಲ್ಲೂ ಶಿಸ್ತು ಮೂಡಲು ಅನುವಾಗುತ್ತದೆ ಎಂದು
ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಎನ್.ಗಿರೀಶ್ ತಿಳಿಸಿದರು.
ಮುಖ್ಯ ಶಿಕ್ಷಕಿ ಬಿ.ಹೆಚ್.ಗಂಗಮ್ಮ ಸುದ್ದಿಗಾರರೊಂದಿಗೆ ಮಾತನಾಡಿ,ಕಳೆದ 3-4 ವರ್ಷಗಳ ಹಿಂದೆ 150-160 ಇದ್ದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಾ, ಪ್ರಸಕ್ತ 360-370 ಕ್ಕೆ ಬಂದಿದೆ. ಇದು ನಮ್ಮ ಶಾಲೆ ನಮ್ಮ ಹೆಮ್ಮೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ 450-500 ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡುವುದು ನಮ್ಮ ಹಳೆಯ ವಿದ್ಯಾರ್ಥಿಗಳ ಸಂಘದ ಧ್ಯೇಯವಾಗಿದೆ. ಅದಕ್ಕಾಗಿ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಶ್ರಮಿಸುತ್ತಿದ್ದಾರೆ. ಶಾಲೆಯ ಬಗ್ಗೆ ಅಪಾರ ಗೌರವ ಹೊಂದಿರುವ ಹಳೆಯ ವಿದ್ಯಾರ್ಥಿಗಳು ನಮ್ಮಗಳಿಗೆ ಸಕಲ ರೀತಿಯಲ್ಲಿಯೂ ಸಹಕರಿಸುತ್ತಾ ಬರುತಿದ್ದಾರೆ ಎಂದು ತಿಳಿಸಿದರು.