ಗುಬ್ಜಿ; ಆಸ್ಪತ್ರೆಗೆ ಬಂದು ವಾಪಸ್ ಹೊಗುವ ಸಂದರ್ಭದಲ್ಲಿ ಗುಬ್ಬಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅತಿ ವೇಗವಾಗಿ ಬಂದ ಬಸ್ ವ್ಯಕ್ತಿಗೆ ಗುದ್ದಿದ ಪರಿಣಾಮ ಕಾಲು ಚಕ್ರಕ್ಕೆ ಸಿಕ್ಕಿರುವ ಘಟನೆ ನಡೆದಿದೆ.
ತಾಲೂಕಿನ ಕಡಬ ಹೋಬಳಿ ಮೇಳೆಕಲ್ಲಹಳ್ಳಿ ಗ್ರಾಮದ ಲಕ್ಷ್ಮಯ್ಯ 65 ವರ್ಷ ಇವರು ಅನಾರೋಗ್ಯದ ನಿಮಿತ್ತ ಗುಬ್ಬಿಗೆ ಅಸ್ಪತ್ರೆಗೆ ಬಂದಿದ್ದರು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಊರಿಗೆ ವಾಪಸ್ ಹೋಗಲು ನಿಂತಿದ್ದ ವ್ಯಕ್ತಿಗೆ ಶಿವಮೊಗ್ಗ ಹೋಗುವ ಬಸ್ಸು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಆಗ ಲಕ್ಷ್ಮಯ್ಯ ನೆಲಕ್ಕೆ ಬಿದ್ದು ಎಡ ಕಾಲು ಬಸ್ಸಿನ ಚಕ್ರಕ್ಕೆ ಸಿಲುಕಿ ರಕ್ತಸ್ರಾವವಾಗಿದೆ. ವ್ಯಕ್ತಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೂಲಭೂತ ಸೌಲಭ್ಯಗಳಿಲ್ಲದ ಬಸ್ ನಿಲ್ದಾಣ: ಗುಬ್ಬಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಇರುವುದಿಲ್ಲ. ಬಸ್ ಗಳು ನಿಲ್ದಾಣದ ಒಳಗೆ ಮತ್ತು ಹೊರಗೆ ಹೋಗಲು ಹಾಳುದ್ದ ಗುಂಡಿ ಬಿದ್ದಿದೆ. ಬಸ್ಸ್ ನಿಲ್ದಾಣದ ಹೊಳಗೆ ಹೊಗಲು ಮುಖ್ಯ ರಸ್ತೆಯ ಬದಿಯಲ್ಲಿ ಮೊಳ ಕೈ ಉದ್ದ ಗುಂಡಿ ಇದೆ. ಆದ್ದರಿಂದ ಹಿರಿಯ ನಾಗರಿಕರು,ಮಕ್ಕಳು ರಸ್ತೆಯಿಂದ ಇಳಿಯಲು ಸಾಹಸ ಪಡಬೇಕಾಗುತ್ತದೆ.
ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ನಗರ ಪ್ರದೇಶಕ್ಕೆ ಸಾರ್ವಜನಿಕರು, ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋಗುವುದರಿಂದ ಹೆಚ್ಚು ಜನಸಂದಣಿ ಇರುತ್ತದೆ. ಇವರನ್ನು ನಿಯಂತ್ರಣ ಮಾಡಲು ಭದ್ರತಾ ಸಿಬ್ಬಂದಿ ಇರುವುದಿಲ್ಲ ಎಂದು ಪ್ರಯಾಣಿಕರು ಹೇಳುತ್ತಾರೆ.