ಗುಬ್ಬಿ: ಸರ್ಕಾರಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

  ಲೋಕೋಪಯೋಗಿ  ಇಲಾಖೆ ವತಿಯಿಂದ ಕಿಟ್ಟದಕುಪ್ಪೆ ಹಾಗೂ  ಹೊದಲೂರು  ಕಾಲೋನಿ  ರಸ್ತೆ  ಅಭಿವೃದ್ಧಿಗೆ  1.32 ಕೋಟಿ ವೆಚ್ಚದ  ಕಾಮಗಾರಿಗೆ  ಭೂಮಿಪೂಜೆ ಮಾಡಿ  ಮಾತನಾಡಿದರು.

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು 10 ಕೋಟಿಗೆ ಮಂಜೂರಾಗಿದೆ. ಆದರೆ ಡಿಪೋ ಅನುಮೋದನೆ ಆಗಿಲ್ಲದ ಕಾರಣ ತಡವಾಗಿದೆ. ಬಸ್ ನಿಲ್ದಾಣದ ಕಾಮಗಾರಿಯನ್ನು ಅತಿ ಶೀಘ್ರವಾಗಿ ಪ್ರಾರಂಭಿಸಲಾಗುತ್ತದೆ.

  ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯದ ಕೊರತೆ ಇರುವುದರಿಂದ ಅವುಗಳ ಬಗ್ಗೆ ಮೆಡಿಕಲ್ ಆಫೀಸರ್ಸ್ ಸಭೆ ಕರೆದು ಚರ್ಚಿಸಿ ಸಮಸ್ಯೆಯನ್ನು ಕರೆದು ಚರ್ಚಿಸಿ ಬಗೆಹರಿಸುತ್ತೇನೆ ಎಂದರು

ತಾಲೂಕಿನಲ್ಲಿ ಇನ್ನೂ ಸುಮಾರು 300 ಕೋಟಿ ವೆಚ್ಚದ ಕಾಮಗಾರಿಯು ಬಾಕಿ ಉಳಿದಿದ್ದು ಅವುಗಳನ್ನು ಹಂತ ಹಂತವಾಗಿ ಪೂಜೆ ಮಾಡುತ್ತೇನೆ ಎಂದರು 

ಎತ್ತಿನಹೊಳೆ 30 ಕೋಟಿ, ಹೇಮಾವತಿ  3 ಕೋಟಿ,  ಶಿರಾ ನಲ್ಲಿಗೆರೆ  ರಸ್ತೆಗೆ 35 ಕೋಟಿ, ಹುಯಿಲ್ ದೊರೆ ಹೊಸಕೆರೆ ರಸ್ತೆಗೆ  6 ಕೋಟಿ ,  ಕೇಂದ್ರ ಸಚಿವ ವಿ ಸೋಮಣ್ಣನವರಿಗೆ ಹೇಳಿ ಸಂಪಿಗೆ ರಸ್ತೆಗೆ 35 ಕೋಟಿ, ಈ ರೀತಿ ಇನ್ನೂ ಹಲವು ಕಡೆ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಧಾಮಣಿ, ಉಪಾಧ್ಯಕ್ಷರು, ಸದಸ್ಯರಾದ, ಶ್ರೀನಿವಾಸ್, ರವೀಶ್, ಬಿಲ್ ಕಿಸ್ ಬಾನು, ಮುಖಂಡರಾದ ಹೊದಲೂರು ಶಿವಪ್ಪ,  ಬಾಲಾಜಿ ನಾಗರಾಜು, ಲೋಕೇಶ್, ನಟರಾಜು, ಚನ್ನಬಸವಣ್ಣ, ಹಾಗೂ ಲೋಕೋಪಯೋಗಿ ಇಲಾಖೆ ಎಇಇ, ಗುತ್ತಿಗೆದಾರರು, ಪಿಡಿಒ ಚಂದ್ರಶೇಖರ್, ರಘು ಪ್ರಕಾಶ್  ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here