ಗುಬ್ಬಿ: ಗುಬ್ಬಿ ಯಿಂದ ಸಿಎಸ್ ಪುರ ಎಡೆಯೂರು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು. ತಾಲೂಕಿನ ಜಿ ಹೊಸಹಳ್ಳಿ ಬಳಿ ಟೋಲ್ ನಿರ್ಮಾಣ ಮಾಡಿ ಸುಂಕ ವಸೂಲಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ವಿವಿಧ ಸಂಘ ಸಂಸ್ಥೆಗಳು ಹಲವು ಜನ ಪ್ರತಿನಿಧಿಗಳು ಹಾಗೂ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ ಗೋವಿಂದರಾಜು ತಾಲೂಕಿನ ಸಿ ಎಸ್ ಪುರ, ಎಡಿಯೂರು ರಸ್ತೆಯಲ್ಲಿ ಅಧಿಕವಾಗಿ ಸ್ಥಳೀಯ ರೈತರು, ಜನಸಾಮಾನ್ಯರು ಓಡಾಡುವ ರಸ್ತೆಯಾಗಿದ್ದು, ಇಲ್ಲಿ ಯಾವುದೇ ಭಾರಿ ಗಾತ್ರದ ವಾಹನಗಳು, ವಾಣಿಜ್ಯ ವಾಹನಗಳು ಸಂಚಾರವೇ ಇಲ್ಲ ಆದರೆ ಜಿ ಹೊಸಹಳ್ಳಿಯ ಬಳಿ ಅವೈಜ್ಞಾನಿಕವಾಗಿ ಟೋಲ್ ನಿರ್ಮಾಣ ಮಾಡಿದ್ದು ರೈತರು ಜನಸಾಮಾನ್ಯರಿಂದ ಸುಂಕ ವಸೂಲಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣ ಮಾಡಬಾರದು. ಸರ್ಕಾರ ರೈತರ ಹಿತ ಕಾಯುವ ಕೆಲಸವನ್ನು ಮಾಡಬೇಕು. ಆದರೆ ರೈತರ ರಕ್ತ ಹಿರುವ ಕೆಲಸ ಮಾಡಬಾರದು. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಟೋಲ್ ನಿರ್ಮಾಣವನ್ನು ಹಿಂದಕ್ಕೆ ಪಡೆಯದೆ ಹೋದರೆ ಬೃಹತ್ ಮಟ್ಟದ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ಬಿ ಎಸ್ ನಾಗರಾಜು ಮಾತನಾಡಿ ಈ ರಸ್ತೆ ನೋಡಿದರೆ ಹೆಬ್ಬಾವಿ ನಂತೆ ಸುತ್ತುಕೊಂಡು ಹೋಗುತ್ತಿದ್ದು ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕ ವಸೂಲಿ ಮಾಡುವುದಕ್ಕೆ ಒಂದು ಅರ್ಥವಿದೆ ರೈತರು ಓಡಾಡುವಂತಹ ಹಳ್ಳಿಯ ರಸ್ತೆಯಲ್ಲಿ ಸುಂಕ ವಸೂಲಿ ಮಾಡಲು ಹೊರಟಿರುವ ಸರಕಾರಕ್ಕೆ ಏನು ಹೇಳಬೇಕು ಗೊತ್ತಿಲ್ಲ ಕೂಡಲೇ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಈ ಟೋಲ್ ನಿರ್ಮಾಣವನ್ನ ತಡೆದು ರೈತರಿಂದ ಪಡೆಯುವ ಸುಂಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.
ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ ಇಲ್ಲಿ ಯಾವುದೇ ಕಾರಣಕ್ಕೂ ರೈತರಿಂದ ಟೋಲ್ ವಸೂಲಿ ಮಾಡಕೂಡದು ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಟೆಂಡರ್ ಪಡೆದವರು ರೈತರಿಂದ ವಸೂಲಿ ಮುಂದುವರಿದರೆ ದೊಡ್ಡಮಟ್ಟದ ಪ್ರತಿಭಟನೆಯನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.
ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಯಾವುದೇ ಒಂದು ಯೋಜನೆಗಳು ತಾಲೂಕಿನಲ್ಲಿ ನಡೆಯಬೇಕಾದರೆ ಸ್ಥಳೀಯ ಶಾಸಕರಿಗೆ ತಿಳಿಯದೆ ನಡೆಯುವುದಿಲ್ಲ ಅಂತದರಲ್ಲಿ ಈ ವಿಷಯ ತಿಳಿದಿಲ್ಲವೇ ಕೂಡಲೇ ಇಲ್ಲಿನ ಜನಪ್ರತಿನಿಧಿಗಳು ಅಧಿಕಾರಿಗಳು ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಟೋಲ್ ಮಾಡುತ್ತಿರುವ ಕೆಲಸವನ್ನ ನಿಲ್ಲಿಸಬೇಕು ಮತ್ತು ಯಾವುದೇ ಕಾರಣಕ್ಕೂ ಸುಂಕ ವಸೂಲಿಯನ್ನ ಮಾಡಕೊಡದು ಹಾಗೂ ಮುಂದುವರಿದರೆ ಖಂಡಿತವಾಗಿ ಮುಂದಿನ ದಿನದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ಈ ಭಾಗದ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ರೈತರು ವಿದ್ಯಾರ್ಥಿಗಳು ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುತ್ತಿದ್ದು ಪ್ರತಿನಿತ್ಯ ಅವರು ಸುಂಕವನ್ನು ಕಟ್ಟಲು ಸಾಧ್ಯವಿಲ್ಲ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.

ತಹಸೀಲ್ದಾರ್ ಬಿ ಆರತಿ ಸ್ಥಳದಲ್ಲಿಯೇ ಮನವಿ ಪತ್ರ ಪಡೆದುಕೊಂಡರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಸ್ ಆರ್ ಶ್ರೀನಿವಾಸ್ ಆಗಮಿಸಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಇನ್ನೂ 15 ದಿನಗಳ ಕಾಲದಲ್ಲಿ ಸರ್ಕಾರ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟಂತಹ ಎಲ್ಲ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಈ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ನಿಲ್ಲಿಸಲು ಸಾಧ್ಯವಾದರೆ ಖಂಡಿತವಾಗಿಯೂ ನಿಲ್ಲಿಸುತ್ತೇನೆ ಸಾಧ್ಯವಾಗದೇ ಹೋದಂತಹ ಪಕ್ಷದಲ್ಲಿ ಎಲ್ಲಾ ಮುಖಂಡರ ರೈತರ ಜೊತೆಯಲ್ಲಿಚರ್ಚಿಸಿಯೇ ಮುಂದುವರಿಯುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ರೈತ ಸಂಘದ ಸಿ ಜಿ ಲೋಕೇಶ್, ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಅಜ್ಜಪ್ಪ, ಸಿ ಕೆ ಪ್ರಕಾಶ್, ಶಿವಕುಮಾರ್, ನಾಗರತ್ನಮ್ಮ, ಜಟ್ಟಿ, ಯತೀಶ್ ಕುಮಾರ್, ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಹಲವು ರೈತರು ಮುಖಂಡರು, ಸಾರ್ವಜನಿಕರು ಇನ್ನಿತರರು ಹಾಜರಿದ್ದರು.





